ETV Bharat / state

ರಾಮನಗರದ ಮನೆಯೊಂದರಲ್ಲಿ ಗೀಸರ್​ನ ವಿಷಾನಿಲ ಸೋರಿಕೆ: ತಾಯಿ - ಮಗ ಸಾವು - Gas leak from geyser - GAS LEAK FROM GEYSER

ಸ್ನಾನದ ಕೊಠಡಿಯಲ್ಲಿ ವಿಷಾನಿಲ ಸೇವಿಸಿ, ಸಾವನ್ನಪ್ಪಿದ್ದ ಮಗನನ್ನು ಕಾಪಾಡಲು ಹೋದ ತಾಯಿ ವಿಷಾನಿಲ ಸೇವಿಸಿ ಮೃತಪಟ್ಟಿರುವ ಘಟನೆ ರಾಮನಗರದಲ್ಲಿ ನಡೆದಿದೆ.

Mother-son died
ತಾಯಿ-ಮಗ ಸಾವು (ETV Bharat)
author img

By ETV Bharat Karnataka Team

Published : Jul 22, 2024, 5:16 PM IST

Updated : Jul 22, 2024, 7:32 PM IST

ರಾಮನಗರದ ಮನೆಯೊಂದರಲ್ಲಿ ಗೀಸರ್​ನ ವಿಷಾನಿಲ ಸೋರಿಕೆ: ತಾಯಿ - ಮಗ ಸಾವು (ETV Bharat)

ರಾಮನಗರ: ಜಿಲ್ಲೆಯ ಮಾಗಡಿ ಪಟ್ಟಣದ ಜ್ಯೋತಿನಗರದಲ್ಲಿ ಬಿಸಿ ನೀರು ಕಾಯಿಸುವ ಗ್ಯಾಸ್ ಗೀಸರ್​ನ ವಿಷಕಾರಿ ಕಾರ್ಬನ್ ಮೊನಾಕ್ಸೈಡ್ ಸೋರಿಕೆಯಿಂದಾಗಿ ತಾಯಿ ಮತ್ತು ಮಗ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಶೋಭಾ (40) ಮತ್ತು ಅವರ ಪುತ್ರ ದಿಲೀಪ್ (17) ಎಂದು ಗುರುತಿಸಲಾಗಿದೆ.

ಭಾನುವಾರ ರಾತ್ರಿ ಏಳು ಗಂಟೆ ಸುಮಾರಿಗೆ ದಿಲೀಪ್ ಸ್ನಾನದ ಕೊಠಡಿಯಲ್ಲಿರುವ ಗೀಸರ್ ಸ್ವಿಚ್ಡ್​ ಆನ್ ಮಾಡಿಕೊಂಡು ಸ್ನಾನಕ್ಕೆ ತೆರಳಿದ್ದರು. ಸ್ನಾನದ ಕೊಠಡಿಯಲ್ಲಿ ಕಿಟಕಿ ಇಲ್ಲದ ಕಾರಣ, ಕೊಠಡಿಯನ್ನು ಆವರಿಸಿದ ಕಾರ್ಬನ್ ಮೊನಾಕ್ಸೈಡ್​ನಿಂದಾಗಿ ದಿಲೀಪ್ ಪ್ರಜ್ಞೆ ತಪ್ಪಿ ಮೃತಪಟ್ಟಿದ್ದಾರೆ. ಸ್ನಾನಕ್ಕೆ ಹೋದ ಮಗ ತುಂಬಾ ಹೊತ್ತಾದರೂ ಬರಲಿಲ್ಲವಲ್ಲ ಎಂದು ತಾಯಿ ಶೋಭಾ ಅವರು, ಸ್ನಾನದ ಕೊಠಡಿ ಬಾಗಿಲು ತೆರೆದು ಒಳ ಹೋಗಿದ್ದಾರೆ. ಆಗ ಮಗ ಕೆಳಗೆ ಬಿದ್ದಿರುವುದನ್ನು‌ ಗಮನಿಸಿದ್ದಾರೆ. ಆತನ ಸ್ಥಿತಿ ಕಂಡು ಗಾಬರಿಗೊಂಡು, ಮಗನನ್ನು ಹೊರಕ್ಕೆ ಕರೆತರಲು ಯತ್ನಿಸಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಅವರು ಸಹ ಅನಿಲ ಸೇವಿಸಿ ಪ್ರಜ್ಞೆತಪ್ಪಿ ಕೊನೆಯುಸಿರೆಳೆದಿದ್ದಾರೆ.

ಸ್ಥಳಕ್ಕೆ ಮಾಗಡಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಸ್ನಾನಗೃಹದಲ್ಲಿ ತಂದೆ, ತಾಯಿ, ಮಗ ಅನುಮಾನಾಸ್ಪದ ಸಾವು: ಚುರುಕುಗೊಂಡ ತನಿಖೆ - Suspicious death

Last Updated : Jul 22, 2024, 7:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.