ETV Bharat / state

ಬೆಂಗಳೂರು: ದುಬಾರಿ ಬೆಲೆಯ 38 ರೇಷ್ಮೆ ಸೀರೆ ಕಳ್ಳತನ, ನಾಲ್ವರು ಆರೋಪಿಗಳ ಬಂಧನ - SAREE THEFT CASE - SAREE THEFT CASE

ದುಬಾರಿ ಬೆಲೆಯ ರೇಷ್ಮೆ ಸೀರೆ ಕಳ್ಳತನ ಮಾಡುತ್ತಿದ್ದ ಆರೋಪದಡಿ ನಾಲ್ವರು ಮಹಿಳೆಯರನ್ನು ಬೆಂಗಳೂರಿನ ಜೆ.ಪಿ. ನಗರ ಠಾಣೆ ಪೊಲೀಸರು ಬಂಧಿಸಿ, 17.5 ಲಕ್ಷ ಮೌಲ್ಯದ 38 ರೇಷ್ಮೆ ಸೀರೆಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಮಹಿಳೆಯರು
ಬಂಧಿತ ಮಹಿಳೆಯರು (ETV Bharat)
author img

By ETV Bharat Karnataka Team

Published : Sep 3, 2024, 3:38 PM IST

Updated : Sep 3, 2024, 6:33 PM IST

ಬೆಂಗಳೂರು: ಬಟ್ಟೆ ಖರೀದಿಸುವ ನೆಪದಲ್ಲಿ ಅಂಗಡಿಗಳಿಗೆ ತೆರಳಿ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಕ್ಷಣಾರ್ಧದಲ್ಲಿ ದುಬಾರಿ ಬೆಲೆಯ ರೇಷ್ಮೆ ಸೀರೆ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ನಾಲ್ವರು ಆರೋಪಿಗಳನ್ನು ಜೆ.ಪಿ. ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಾನಕಿ, ಪೊನ್ನುರು ಮಲ್ಲಿ, ಮೇಧ ರಜಿನಿ ಹಾಗೂ ವೆಂಕಟೇಶ್ವರಮ್ಮ ಬಂಧಿತ ಆರೋಪಿಗಳು.

ಬಂಧಿತರಿಂದ 17.5 ಲಕ್ಷ ಬೆಲೆಬಾಳುವ 38 ರೇಷ್ಮೆ ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ. ಜೆ.ಪಿ. ನಗರ ಠಾಣಾ ವ್ಯಾಪ್ತಿಯ ಸಿಲ್ಕ್ ಹೌಸ್​ವೊಂದರಲ್ಲಿ ಸೀರೆ ಖರೀದಿ ನೆಪದಲ್ಲಿ ಬಂದ ಆರು ಮಂದಿ ಆರೋಪಿಗಳು ದುಬಾರಿ ಬೆಲೆಯ ರೇಷ್ಮೆ ಸೀರೆ ತೋರಿಸುವಂತೆ ಸಿಬ್ಬಂದಿಗೆ ಸೂಚಿಸಿದ್ದರು. ಸೀರೆಗಳನ್ನ ತೋರಿಸುವಾಗಲೇ ಕೈಚಳಕ ತೋರಿಸಿ ಸಿಬ್ಬಂದಿಗಳ ಗಮನ ಬೇರೆಡೆ ಸೆಳೆದು ಇಬ್ಬರು ಕಳ್ಳಿಯರು ಧರಿಸಿದ್ದ ಸೀರೆಯೊಳಗೆ 8 ಹೊಸ ಸೀರೆ ಅಡಗಿಸಿಟ್ಟುಕೊಂಡು ಪರಾರಿಯಾದ ಆರೋಪದಡಿ ದೂರು ದಾಖಲಾಗಿತ್ತು.

ಬಳಿಕ ಅಂಗಡಿಯಲ್ಲಿದ್ದ ನಾಲ್ವರು ಮಹಿಳೆಯರು ಒಟ್ಟು 10 ಸೀರೆಗಳನ್ನ ಬಚ್ಚಿಟ್ಟುಕೊಂಡು ಅಂಗಡಿಯಿಂದ ಹೊರ ಹೋಗುವಾಗ ಅನುಮಾನಗೊಂಡ ಸಿಬ್ಬಂದಿ ತಡೆದು ಪರಿಶೀಲಿಸಿದಾಗ ಕಳ್ಳತನ ಕೃತ್ಯ ಬಯಲಾಗಿತ್ತು. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ತಿಳಿಸಿದ್ದಾರೆ.

ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಜಯನಗರ, ಜೆ.ಪಿ. ನಗರ ಸೀರೆ ಅಂಗಡಿಗಳಲ್ಲಿಯೂ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಸೀರೆಗಳನ್ನ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಕದ್ದ ಸೀರೆಗಳನ್ನು ಸ್ನೇಹಿತೆಯ ಮುಖಾಂತರ ಕಡಿಮೆ ಬೆಲೆಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು. ಆಂಧ್ರಪ್ರದೇಶ ಮೂಲದ‌ ಆರೋಪಿಗಳಾದ ಇವರು ಕಳ್ಳತನ ಮಾಡಲೆಂದೇ ನಗರಕ್ಕೆ ಬರುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸೀರೆಯನ್ನು ಹೇಗೆ ಉಡುತ್ತಿದ್ದೀರಾ?: ಹೀಗೆ ಉಟ್ಟರೆ ನೀವು "ಲುಕಿಂಗ್ ವೆರೀ ಬ್ಯೂಟಿಫುಲ್"!.. ಇಲ್ಲಿವೆ ಅಂದ ಹೆಚ್ಚಿಸಿಕೊಳ್ಳುವ ಟಿಪ್ಸ್​! - Saree Draping Tips

Last Updated : Sep 3, 2024, 6:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.