ETV Bharat / state

ಶಿವಮೊಗ್ಗ: ಮಳೆಗೆ ಮನೆ ಗೋಡೆ ಕುಸಿದು ದಂಪತಿ, ಇಬ್ಬರು ಮಕ್ಕಳಿಗೆ ಗಾಯ - House Wall Collapse

author img

By ETV Bharat Karnataka Team

Published : Jul 21, 2024, 8:30 AM IST

ಧಾರಾಕಾರ ಮಳೆಗೆ ಮನೆ ಗೋಡೆ ಕುಸಿದು ನಾಲ್ವರು ಗಾಯಗೊಂಡಿರುವ ಘಟನೆ ಶಿಕಾರಿಪುರದಲ್ಲಿ ನಡೆದಿದೆ.

ಮನೆ ಕುಸಿದು ನಾಲ್ವರಿಗೆ ಗಾಯ
ಮನೆ ಕುಸಿದು ನಾಲ್ವರಿಗೆ ಗಾಯ (ETV Bharat)

ಶಿವಮೊಗ್ಗ: ನಿರಂತರ ಮಳೆಯಿಂದಾಗಿ ಮನೆ ಗೋಡೆ ಕುಸಿದು ನಾಲ್ವರು ಗಾಯಗೊಂಡಿರುವ ಘಟನೆ ಶಿಕಾರಿಪುರ ತಾಲೂಕು ಕಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶಿವಮೂರ್ತಿ ಎಂಬವರಿಗೆ ಸೇರಿದ ಮನೆ ಶೇ.80ರಷ್ಟು ಕುಸಿದಿದೆ. ಶಿವಮೂರ್ತಿ, ಪತ್ನಿ ಹಾಗೂ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಶಿವಮೂರ್ತಿ ಕೈಗೆ ಗಾಯವಾಗಿದ್ದರೆ, ಪತ್ನಿಯ ಮುಖದ ಮೇಲೆ ಗೋಡೆ ಬಿದ್ದು ಮೂಗಿಗೆ ಗಾಯವಾಗಿದೆ. ಇಬ್ಬರು ಮಕ್ಕಳು ಕೂಡ ಗಾಯಗೊಂಡಿದ್ದು, ನಾಲ್ವರನ್ನೂ ಗ್ರಾಮಸ್ಥರು ಶಿಕಾರಿಪುರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.

ಕಪ್ಪನಹಳ್ಳಿ ಗ್ರಾಮದಲ್ಲಿ ಮನೆ ಕುಸಿತ
ಕಪ್ಪನಹಳ್ಳಿ ಗ್ರಾಮದಲ್ಲಿ ಮನೆ ಗೋಡೆ ಕುಸಿತ (ETV Bharat)

ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದೊಂದು ವಾರದಿಂದ ಶಿವಮೊಗ್ಗದಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ, ಕಾಲೇಜುಗಳಿಗೆ ಶನಿವಾರದವರೆಗೆ ಜಿಲ್ಲಾಡಳಿತ ರಜೆ ಘೋಷಿಸಿತ್ತು. ನದಿ, ಜಲಪಾತ​ಗಳತ್ತ ಹೋಗದಂತೆಯೂ ಜನರಿಗೆ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ ಪ್ರಕರಣ: ನಾಪತ್ತೆಯಾದ ತಂದೆಯನ್ನು ಹುಡುಕಿಕೊಡುವಂತೆ ಹೆಣ್ಣು ಮಕ್ಕಳ ಮನವಿ - Shiruru Hill Collapse

ಹಾವೇರಿ: ಮಳೆಗೆ ಮನೆ ಮೇಲ್ಚಾವಣಿ ಕುಸಿದು ಮೂವರು ಸಾವು, ಮೃತರ ಕುಟುಂಬಸ್ಥರಿಗೆ ತಲಾ ₹5 ಲಕ್ಷ ಪರಿಹಾರ - Haveri House Collapse

ETV Bharat Logo

Copyright © 2024 Ushodaya Enterprises Pvt. Ltd., All Rights Reserved.