ETV Bharat / state

ಮೆರವಣಿಗೆ ತೆರಳುವಾಗ ಹಿಂದೂಗಳು ಮುಂಜಾಗ್ರತೆ ವಹಿಸಬೇಕು: ಪ್ರತಾಪ್​ ಸಿಂಹ - Pratap Simha

ನಾಗಮಂಗಲದ ಘಟನೆ ನಂತರವೂ ಕಲ್ಲು ತೂರಾಟ ಮಡುವ ಪ್ರಕರಣಗಳು ಸಂಭವಿಸುತ್ತಿವೆ ಎಂದರೆ ರಾಜ್ಯ ಸರ್ಕಾರಕ್ಕೆ ಭದ್ರತೆ ಕೊಡಬೇಕೆಂಬ ಕನಿಷ್ಠ ಜವಾಬ್ದಾರಿ ಇಲ್ಲ. ಹಾಗಾಗಿ ಹಿಂದೂಗಳು ಮುಂಜಾಗ್ರತೆ ವಹಿಸಬೇಕು ಎಂದು ಮಾಜಿ ಸಂಸದ ಪ್ರತಾಪ್​ ಸಿಂಹ ಹೇಳಿದರು.

ಪ್ರತಾಪ್​ ಸಿಂಹ
ಪ್ರತಾಪ್​ ಸಿಂಹ (ETV Bharat)
author img

By ETV Bharat Karnataka Team

Published : Sep 22, 2024, 4:02 PM IST

ಯಾದಗಿರಿ: ನಾಗಮಂಗಲದ ಘಟನೆ ನಂತರವೂ ಕಲ್ಲು ತೂರಾಟ ಮಡುವ ಪ್ರಕರಣಗಳು ನಡೆಯುತ್ತಿವೆ ಎಂದರೆ ರಾಜ್ಯ ಸರ್ಕಾರಕ್ಕೆ ಭದ್ರತೆ ಕೊಡಬೇಕೆಂಬ ಕನಿಷ್ಠ ಜವಾಬ್ದಾರಿ ಇಲ್ಲ. ಹಾಗಾಗಿ ಹಿಂದೂಗಳು ಮುಂಜಾಗ್ರತೆ ವಹಿಸಬೇಕೆಂಬುದು ಸ್ಪಷ್ಟವಾಗುತ್ತಿದೆ ಎಂದು ಮಾಜಿ ಸಂಸದ ಪ್ರತಾಪ್​ ಸಿಂಹ ಹೇಳಿದರು.

ಶಹಾಪುರ ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತಿಯ ಭಾವನೆ ಬಿಟ್ಟು ಹಿಂದೂಗಳೆಲ್ಲ ಒಂದು ಎಂಬ ಭಾವನೆ ಬರುವವರೆಗೆ ನಿಮ್ಮ ಮೇಲೆ ಆಕ್ರಣಗಳು ಮುಂದುವರೆಯುತ್ತಿರುತ್ತವೆ. ಮುಂದೊಂದಿನ ಗಂಡಾಂತರವನ್ನು ನೀವೇ ಮೈಮೇಲೆ ಎಳೆದುಕೊಳ್ಳುತ್ತೀರಿ. ಹೀಗಾಗಿ ಒಗಟ್ಟಿನಿಂದ ಇರುವುದನ್ನು ಹಿಂದೂಗಳು ಕಲಿತುಕೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರತಾಪ್​ ಸಿಂಹ (ETV Bharat)

ತಿರುಮಲ ದೇವಸ್ಥಾನದಲ್ಲಿ ಲಡ್ಡು ತಯಾರಿಕೆಯಲ್ಲಿ ಕಲಬೆರಕೆ ತುಪ್ಪ ಬಳಕೆ ಆರೋಪದ ಕುರಿತು ಪ್ರತಿಕ್ರಿಯಿಸಿ, ಜಗನ್​ಮೋಹನ್​ ರೆಡ್ಡಿ ಸರ್ಕಾರದ ಅವಧಿಯಲ್ಲಿ ಟಿಟಿಡಿಗೆ ಕ್ರಿಶ್ಚಿಯನ್ನರನ್ನು ತಂದು ಹಾಕುವ ಕೆಲಸ ನಡೆಯಿತು. ತಿರುಮಲ ದೇವಸ್ಥಾನದ ಲಡ್ಡು ಪರಿಮಳ ಬರುತ್ತಿತ್ತು. ಆ ಲಡ್ಡುವನ್ನು ಅಪವಿತ್ರ ಮಾಡುವ ಕೆಲಸ ನಡೆದಿದೆ. ಅದರಲ್ಲಿ ದನದ, ಹಂದಿಯ ಕೊಬ್ಬು, ಮೀನಿನ ಎಣ್ಣೆ ಹಾಕಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವ ಕೆಲಸವನ್ನು ಜಗನ್​ಮೋಹನ್​ ರೆಡ್ಡಿ ಮಾಡಿದ್ದಾರೆ ಎಂದು ದೂರಿದರು.

ಇದನ್ನೂ ಓದಿ: ತಿರುಪತಿ ಲಡ್ಡುವಿನಲ್ಲಿ ಮಾಂಸದ ಕೊಬ್ಬು: ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು - ಪ್ರಲ್ಹಾದ್ ಜೋಶಿ - Union minister pralhad joshi

ETV Bharat Logo

Copyright © 2024 Ushodaya Enterprises Pvt. Ltd., All Rights Reserved.