ETV Bharat / state

ಬೆಂಗಳೂರಿನಿಂದ ಹೊರಟಿರುವ ಎಸ್.ಎಂ.ಕೃಷ್ಣ ಪಾರ್ಥಿವ ಶರೀರ: ಮಧ್ಯಾಹ್ನ ಹುಟ್ಟೂರಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ - SM KRISHNA LAST RITES

ಬೆಳಗ್ಗೆ 8 ಗಂಟೆಗೆ ಬೆಂಗಳೂರಿನ ಸದಾಶಿವನಗರದಿಂದ ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರ ಹೊರಟಿದ್ದು, ಕೆಂಗೇರಿ ಮಾರ್ಗವಾಗಿ ಮದ್ದೂರು ತಲುಪಲಿದೆ. ಮಧ್ಯಾಹ್ನ 3 ಗಂಟೆಗೆ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.

BENGALURU  S M KRISHNA  ಎಸ್ ಎಂ ಕೃಷ್ಣ  S M KRISHNA MORTAL REMAINS
ಬೆಂಗಳೂರಿನಿಂದ ಹೊರಟಿರುವ ಎಸ್.ಎಂ.ಕೃಷ್ಣ ಪಾರ್ಥಿವ ಶರೀರ (ETV Bharat)
author img

By ETV Bharat Karnataka Team

Published : Dec 11, 2024, 9:46 AM IST

ಬೆಂಗಳೂರು: ಅಗಲಿದ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಮೃತದೇಹದ ಅಂತಿಮ ವಿಧಿ ವಿಧಾನ ಇಂದು ಅವರ ಹುಟ್ಟೂರು ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಬೆಂಗಳೂರಿನ ಸದಾಶಿವನಗರದಿಂದ ಹೊರಟಿರುವ ಕೃಷ್ಣ ಅವರ ಪಾರ್ಥಿವ ಶರೀರ ಕೆಂಗೇರಿ ಮಾರ್ಗವಾಗಿ ಮದ್ದೂರು ತಲುಪಲಿದೆ. ಮಾರ್ಗಮಧ್ಯೆ ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣದಲ್ಲಿ ಕೆಲಕಾಲ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಮಧ್ಯಾಹ್ನ 3 ಗಂಟೆಗೆ ಎಸ್. ಎಂ. ಕೃಷ್ಣ ಅವರ ಹುಟ್ಟೂರು ಸೋಮನಹಳ್ಳಿಯಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ನೆರವೇರಲಿವೆ. ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.

ಬೆಂಗಳೂರಿನಿಂದ ಹೊರಟಿರುವ ಎಸ್.ಎಂ.ಕೃಷ್ಣ ಪಾರ್ಥಿವ ಶರೀರ: ಮಧ್ಯಾಹ್ನ ಹುಟ್ಟೂರಲ್ಲಿ ಅಂತ್ಯಕ್ರಿಯೆ (ETV Bharat)

"ಮಂಡ್ಯ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಕೆಲವರು ಒತ್ತಾಯಿಸಿದ್ದರು. ಆದರೆ ಆ ರೀತಿ ಮಾಡಲು ಸಾಧ್ಯವಾಗುವುದಿಲ್ಲ, ದಯವಿಟ್ಟು ಸಹಕರಿಸಬೇಕು. ಮಧ್ಯಾಹ್ನ ಮೂರು ಗಂಟೆಗೆ ಮದ್ದೂರಿನ ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ" ಎಂದು‌ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ.

ಸೋಮನಹಳ್ಳಿಯಲ್ಲಿ ಬಿಗಿ ಪೊಲೀಸ್ ಭದ್ರತೆ: ಗಣ್ಯರು ಸೇರಿ ಮಠಾಧೀಶರು ಹಾಗು ವಿಐಪಿಗಳು ಸೋಮನಹಳ್ಳಿಗೆ ಆಗಮಿಸುವ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆ ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಭದ್ರತೆಗೆ 300ಕ್ಕೂ ಹೆಚ್ಚು ಪೊಲೀಸ್​ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದ್ದು, ಮೂವರು SP, ಮೂವರು ASP, 10 DYSP, 30CPI, 50 PSI ಗೆ ಮೇಲುಸ್ತುವಾರಿ ವಹಿಸಲಾಗಿದೆ. 10 KSRP ತುಕಡಿ, 6 DR ತುಕಡಿ, 200 ಗೃಹರಕ್ಷಕ ಸಿಬ್ಬಂದಿ, 1000 ಪೊಲೀಸ್ ಸಿಬ್ಬಂದಿ ಭದ್ರತೆ ಒದಗಿಸುತ್ತಿದ್ದಾರೆ. ಹಾಗೇ ಪಾರ್ಕಿಂಗ್​, ಆಸನ ವ್ಯವಸ್ಥೆ ಸೇರಿದಂತೆ ಇತರ ಕೆಲಸಗಳು ಪೂರ್ಣಗೊಂಡಿದ್ದು, ಹಳೇ ಮೈ-ಬೆಂ ಹೆದ್ದಾರಿ ಸಂಚಾರ ಬದಲು ಸಾಧ್ಯತೆ ಇದೆ.

ಮಂಡ್ಯ ಡಿಸಿಯಿಂದ ಪ್ರಕ್ರಿಯೆಯ ಮಾಹಿತಿ: "3 ಎಕರೆ ಪ್ರದೇಶದಲ್ಲಿ ಎಲ್ಲಾ ಸಿದ್ಧತೆಗಳನ್ನು ನಿನ್ನೆಯಿಂದ ಪ್ರಾರಂಭ ಮಾಡಿದ್ದೇವೆ. ಎಲ್ಲಾ ಸಿದ್ಧತೆಯ ಪ್ರಕ್ರಿಯೆಗಳು ಕೂಡ ಈಗ ಪೂರ್ಣಗೊಂಡಿದೆ. ಬೆಂಗಳೂರಿನ ಅವರ ಸ್ವಗೃಹದಲ್ಲಿ ನಿನ್ನೆಯಿಂದ ಸಾರ್ವಜನಿಕರಿಗೆ ದರ್ಶನಕ್ಕಾಗಿ ವ್ಯವಸ್ಥೆಯನ್ನು ಮಾಡಿದ್ದರು. ಬೆಂಗಳೂರಿನಿಂದ ತೆರೆದ ವಾಹನದಲ್ಲಿ ಪಾರ್ಥಿವ ಶರೀರ ಬರುತ್ತಿದ್ದು, ಇಲ್ಲಿಗೆ ತಲುಪಿದ ನಂತರ ಮಧ್ಯಾಹ್ನ 2:30 ತನಕ ಸಾರ್ವಜನಿಕರಿಗೆ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡಲಾಗುವುದು. ಅದಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3 ಗಂಟೆಗೆ ಅಂತ್ಯಕ್ರಿಯೆಯ ಪ್ರಕ್ರಿಯೆಗಳು ಪ್ರಾರಂಭವಾಗುತ್ತವೆ".

ಮಂಡ್ಯ ಡಿಸಿ ಡಾ. ಕುಮಾರ ಅವರಿಂದ ಅಂತ್ಯಕ್ರಿಯೆಯ ಸಿದ್ಧತೆಯ ಬಗ್ಗೆ ಮಾಹಿತಿ. (ETV Bharat)

"ಈಗಾಗಲೇ ನಿನ್ನೆ ಸರ್ಕಾರದ ಅಧಿಸೂಚನೆಯಾಗಿದೆ. ಎಸ್​ಎಂ ಕೃಷ್ಣ ಅವರ ನಿಧನಕ್ಕೆ ಶೋಕಾಚರಣೆಯನ್ನು 3 ದಿವಸಗಳ ಕಾಲ ವ್ಯಕ್ತಪಡಿಸಿ, ಅದರ ಜತೆಗೆ ಇವತ್ತು ಸರ್ಕಾರಿ ರಜೆಯನ್ನು ಘೋಷಿಸಲಾಗಿದೆ. ಹಾಗಾಗಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರವನ್ನು ಮಾಡುವಂತ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಎಲ್ಲಾ ಸಿದ್ಧತೆಗಳನ್ನು ನಾವು ಮಾಡಿಕೊಂಡಿದ್ದೇವೆ".

"ಬಂದಿರುವ ಮಾಹಿತಿಯಂತೆ ಮೂರು ಕೇಂದ್ರ ಸಚಿವರು ಹಾಗೇ ಅಧಿವೇಶನ ನಡೆಯದೇ ಇರುವುದರಿಂದ ರಾಜ್ಯದ ಸಚಿವರು ಕೂಡ ಬರುತ್ತಿದ್ದಾರೆ. ಅನೇಕ ಬೇರೆ ಬೇರೆ ಜಿಲ್ಲೆಗಳಿಂದ ಎಲ್ಲಾ ವಿಧಾನಸಭೆ ಸದಸ್ಯರು ಮತ್ತು ಮಾಜಿ ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ತಿನ ಸದಸ್ಯರು ಹಾಗೇ ಅನೇಕ ಗಣ್ಯರು ಬರಲಿದ್ದಾರೆ. ಆಗಮಿಸುತ್ತಿರುವ ಎಲ್ಲಾ ಗಣ್ಯರಿಗೂ ಕೂಡ ಸೂಕ್ತ ವ್ಯವಸ್ಥೆಯನ್ನು, ಪಾರ್ಕಿಂಗ್​ ​ ವ್ಯವಸ್ಥೆಯನ್ನು, ಸೀಟಿಂಗ್​ ವ್ಯವಸ್ಥೆಯನ್ನು ಮಾಡಲಾಗಿದೆ".

"ಧಾರ್ಮಿಕ ಪ್ರಕ್ರಿಯೆಯನ್ನು ಮಾಡಲು ಅವರ ಕುಟುಂಬದಿಂದ ಮಾಹಿತಿಯನ್ನು ಪಡೆದುಕೊಂಡು ಅದರ ಪ್ರಕಾರ ನಮ್ಮಲ್ಲಿ ಶ್ರೇಷ್ಠ ಧಾರ್ಮಿಕ ಪ್ರಕ್ರಿಯೆಯನ್ನು ಮಾಡುವಂತ ಭಾನುಪ್ರಕಾಶ್​ ಸ್ವಾಮೀಜಿಯವರು ಇದ್ದಾರೆ. ಅವರ ನೇತೃತ್ವದಲ್ಲಿ ಮಾಡಲಾಗುತ್ತಿದೆ. ಅದಕ್ಕೆ ಕೂಡ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಪೂಜಾ ಕಾರ್ಯಕ್ಕೆ ಬೇಕಾದ ಸಾಮಗ್ರಿಗಳ ತಯಾರಿಯನ್ನು ಮಾಡಿಕೊಂಡಿದ್ದೇವೆ".

"ಸಾರ್ವಜನಿಕರ ದರ್ಶನಕ್ಕಾಗಿ ಸುಮಾರು 6 ಕಡೆ ಎಲ್​ಇಡಿ ಪರದೆಯ ವ್ಯವಸ್ಥೆಯನ್ನು ಮಾಡಿದ್ದೇವೆ. ಇದನ್ನು ಹೊರತುಪಡಿಸಿ ಹೊರಗಡೆ ಕೂಡ ಎಲ್​ಇಡಿ ಪರದೆಯ ವ್ಯವಸ್ಥೆಯನ್ನು ಮಾಡಿದ್ದೇವೆ. ಲೈವ್​ ಸಹ ನೀಡುತ್ತಿದ್ದೇವೆ" ಎಂದರು.

ಅಂತಿಮ ಸಂಸ್ಕಾರಕ್ಕೆ ಶ್ರೀಗಂಧದ ಕಟ್ಟಿಗೆ: "ರಾಜ್ಯ ಸರ್ಕಾರದ ಸೂಚನೆ, ಆದೇಶದಂತೆ ಈಗಾಗಲೇ ಅರಣ್ಯ ಇಲಾಖೆಗೆ ಪತ್ರ ವ್ಯವಹಾರವನ್ನು ಮಾಡಲಾಗಿದೆ. ಈಗ ಮೈಸೂರಿನಿಂದಲೂ ಸಹ ಶ್ರೀ ಗಂಧದ ತುಂಡುಗಳು ಬರುತ್ತಿದೆ. ಒಟ್ಟು 1 ಸಾವಿರ ಕೆ.ಜಿ. ಬರುತ್ತಿದೆ ಎಂದು ಮಂಡ್ಯ ಡಿಸಿ ಡಾ. ಕುಮಾರ ಅವರು ಸಂಪೂರ್ಣ ಮಾಹಿತಿ ನೀಡಿದ್ದಾರೆ".

ಇದನ್ನೂ ಓದಿ: ಎಸ್.ಎಂ.ಕೃಷ್ಣರ ಆಡಳಿತ ವೈಖರಿಯ ಬಗ್ಗೆ ಹೆಚ್.ವಿಶ್ವನಾಥ್ ಮನದಾಳದ ಮಾತು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.