ಹಾವೇರಿ : ಡಿ.ಕೆ ಶಿವಕುಮಾರ್ ನಮ್ಮ ಭಿನ್ನಮತದ ಬಗ್ಗೆ ಮಾತನಾಡುತ್ತಿದ್ದರು. ಕೋಲಾರ ಘಟನೆ ಬಗ್ಗೆ ಈಗ ಏನು ಹೇಳುತ್ತಾರೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಅಸುಂಡಿಯಲ್ಲಿ ಮಾತನಾಡಿದ ಅವರು, ಅಲ್ಲಿ ಎರಡು ಪ್ರತ್ಯೇಕ ಟೀಂಗಳಿವೆ. ಅವರು ಪ್ರತಿಷ್ಠೆಯಾಗಿ ತೆಗೆದುಕೊಂಡು, ರಾಜೀನಾಮೆ ನೀಡುವಂತಹ ಎಕ್ಸ್ಟ್ರೀಮ್ ಸ್ಟೆಪ್ಗೆ ಹೋಗಿದ್ದಾರೆ ಎಂದು ಬೊಮ್ಮಾಯಿ ಟೀಕಿಸಿದರು. ಕೋಲಾರದಷ್ಟೇ ಅಲ್ಲ, ಚಿಕ್ಕಬಳ್ಳಾಪುರ, ಬಾಗಲಕೋಟೆ ಜಿಲ್ಲಾ ಕಾಂಗ್ರಸ್ನಲ್ಲಿ ಭಿನ್ನಮತ ಇದೆ ಎಂದು ಬೊಮ್ಮಾಯಿ ಹೇಳಿದರು. ಹೆಚ್. ಕೆ ಪಾಟೀಲ್ ನಮ್ಮ ಹಿರಿಯರು. ಅವರು ಆ ವಯಸ್ಸಿನಲ್ಲಿ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದಾರೆ. ಅಂತಹುದರಲ್ಲಿ ನಾನು ಸಂಸದನಾಗಿ ಆಯ್ಕೆ ಆಗಿ ಕೆಲಸ ಮಾಡುವುದರಲ್ಲಿ ತಪ್ಪೇನು ಅಲ್ಲವಲ್ಲ ಎಂದು ಬೊಮ್ಮಾಯಿ ಮರು ಪ್ರಶ್ನೆಯನ್ನು ಹಾಕಿದರು.
ಚುನಾವಣೆ ಸಂದರ್ಭದಲ್ಲಿ ವೈಯಕ್ತಿಕ ವಿಚಾರ ಚರ್ಚೆ ಮಾಡ್ತಾ ಇದ್ದಾರೆ. ಡೆಸ್ಪರೇಟ್ ಆಗಿ ಹೀಗೆಲ್ಲ ಟೀಕೆ ಮಾಡ್ತಿದ್ದಾರೆ. ಅವರು ಈ ವಯಸ್ಸಿನಲ್ಲಿ ಮಂತ್ರಿಗಿರಿಯಲ್ಲಿದ್ದಾರೆ. ನಾನು ಸಂಸದ ಆಗಿ ಕೆಲಸ ಮಾಡೋಕೆ ಏನು ತೊಂದರೆ ಇದೆ ಎಂದರು. ಅವರಿಗೆ ಬೇರೆ ಏನೂ ಮಾತಾಡೋಕೆ ಅವಕಾಶ ಇಲ್ಲ. ಸುಸಂಸ್ಕೃತ ಮಂತ್ರಿ ಅಂತ ನಾವು ತಿಳಿದುಕೊಂಡಿದ್ದೇವೆ. ಅವರು ನಮ್ಮ ಹಿರಿಯರು. ಅವರಿಗೆ ಒಳ್ಳೆದಾಗಲಿ ಎಂದು ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದರು.
ಇದನ್ನೂ ಓದಿ : ಕೋಲಾರದಲ್ಲಿ ಯಾವ ಶಾಸಕರೂ ರಾಜೀನಾಮೆ ನೀಡಲ್ಲ, ಅಭ್ಯರ್ಥಿಯ ಗೆಲುವಿಗೆ ಒಟ್ಟಾಗಿ ಕೆಲಸ: ಡಿಕೆಶಿ - D K Shivakumar