ETV Bharat / state

ತಾಯಾನೆಯಿಂದ ಬೇರ್ಪಟ್ಟು ಮರಿಯಾನೆ ಅಸ್ವಸ್ಥ: ಆರೈಕೆ ಮಾಡಿ ತಾಯಿ ಮಡಿಲು ಸೇರಿಸಿದ ಅರಣ್ಯ ಇಲಾಖೆ - Calf Reunite With Mother Elephant

author img

By ETV Bharat Karnataka Team

Published : Jun 11, 2024, 10:56 PM IST

ತಾಯಾನೆಯಿಂದ ಬೇರ್ಪಟ್ಟು ಅಸ್ವಸ್ಥಗೊಂಡಿದ್ದ ಮರಿಯಾನೆಗೆ ಅರಣ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆ ನೀಡಿ ಆರೈಕೆ ಮಾಡಿ ಮತ್ತೆ ತಾಯಿಯ ಮಡಿಲು ಸೇರಿಸಿದ ಘಟನೆ ಚಾಮರಾಜನಗರದ ಯಳಂದೂರು ವನ್ಯಜೀವಿ ವಲಯದಲ್ಲಿ ನಡೆದಿದೆ.

ಮರಿಯಾನೆಯನ್ನು ತಾಯಿ ಮಡಿಲು ಸೇರಿಸಿದ ಅರಣ್ಯ ಇಲಾಖೆ ಸಿಬ್ಬಂದಿ
ಮರಿಯಾನೆಯನ್ನು ತಾಯಿ ಮಡಿಲು ಸೇರಿಸಿದ ಅರಣ್ಯ ಇಲಾಖೆ ಸಿಬ್ಬಂದಿ (ETV Bharat)

ಚಾಮರಾಜನಗರ: ತಾಯಾನೆಯಿಂದ ಬೇರ್ಪಟ್ಟು ಅಸ್ವಸ್ಥಗೊಂಡಿದ್ದ ಮರಿಯಾನೆಗೆ ಅರಣ್ಯ ಇಲಾಖೆ ಚಿಕಿತ್ಸೆ ಕೊಟ್ಟು ಆರೈಕೆ ಮಾಡಿ ಮತ್ತೆ ತಾಯಿಯ ಮಡಿಲು ಸೇರಿಸಿದ ಘಟನೆ ಬಿಆರ್​ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಯಳಂದೂರು ವನ್ಯಜೀವಿ ವಲಯದಲ್ಲಿ ನಡೆದಿದೆ. ಅಂದಾಜು ಎರಡ್ಮೂರು ವರ್ಷದ ಗಂಡಾನೆ ಮರಿ ಮರಳಿ ತಾಯಾನೆ ಸೇರಿದೆ.

ಬೇತಾಳಕಟ್ಟೆ ಗಸ್ತಿನ ಗಂಜಿಗಟ್ಟಿ ಅರಣ್ಯ ಪ್ರದೇಶದಲ್ಲಿ ಜೂ.10ರಂದು ಇಲಾಖಾ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಜಯಣ್ಣ ಎಂಬವರ ಜಮೀನಿನಲ್ಲಿ ಮರಿಯಾನೆಯೊಂದು ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಕಂಡುಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಬಂಡೀಪುರದ ಅರಣ್ಯಾಧಿಕಾರಿಗಳು ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಮರಿ ಅರಸುತ್ತಾ ಬಂದ ತಾಯಾನೆ ಚಿಕಿತ್ಸೆ ಕೊಡಲು ಬಂದಿದ್ದ ಸಿಬ್ಬಂದಿ ಮೇಲೆ ದಾಳಿ ಮಾಡಲು ಮುಂದಾಯಿತು.

ಆದರೂ ಹರಸಾಹಸದಿಂದ ವೈದ್ಯರು ಮರಿಯಾನೆಗೆ ಆ್ಯಂಟಿಬಯೋಟಿಕ್, ಕಬ್ಬು, ಹಸಿ ಹುಲ್ಲು ಕೊಟ್ಟು ಆರೈಕೆ ಮಾಡಿದರು. ಮಂಗಳವಾರ ಸಂಜೆಯವರೆಗೂ ಆನೆ ಮರಿಗೆ ಆರೈಕೆ ಮಾಡಿ, ಚೇತರಿಕೆ ಕಂಡುಬಂದ ನಂತರ ತಾಯಾನೆ ಮಡಿಲಿಗೆ ಸೇರಿಸಿದ್ದಾರೆ. ಜೊತೆಗೆ, 24 ತಾಸು ಮರಿಯಾನೆ ಮೇಲೆ ನಿಗಾ ಇರಿಸಲು ಬಿಆರ್​ಟಿ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.

ಈ ಕುರಿತು ಬಿಆರ್​ಟಿ ಡಿಸಿಎಫ್ ದೀಪಾ ಜೆ.ಕಂಟ್ರಾಕ್ಟರ್ ಮಾತನಾಡಿ, ತಾಯಾನೆಯಿಂದ ಮರಿ ಬೇರ್ಪಟ್ಟ ಕಾರಣ ಸೂಕ್ತ ಆಹಾರ ಸಿಗದೇ ಅಸ್ವಸ್ಥಗೊಂಡಿತ್ತು‌. ಪಶು ವೈದ್ಯರಿಂದ ಅಗತ್ಯ ಚಿಕಿತ್ಸೆ ಕೊಡಲಾಗಿದ್ದು, ಮರಿಯಾನೆ ಮೇಲೆ ನಿರಂತರ ನಿಗಾ ಇರಿಸಲು ಸೂಚನೆ ಕೊಡಲಾಗಿದೆ. ಸದ್ಯ ಮರಿಯಾನೆ ತನ್ನ ತಾಯಿಯೊಟ್ಟಿಗೆ ಕಾಡಿನಲ್ಲಿದ್ದು, ಆರೋಗ್ಯವಾಗಿ ಇರುವಂತೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವಿದ್ಯುತ್ ಸ್ಪರ್ಶ: ಎರಡು ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ 'ಅಶ್ವತ್ಥಾಮ' ಸಾವು; ತನಿಖೆಗೆ ಸಚಿವ ಖಂಡ್ರೆ ಸೂಚನೆ - Mysuru dasara elephant dies

ETV Bharat Logo

Copyright © 2024 Ushodaya Enterprises Pvt. Ltd., All Rights Reserved.