ETV Bharat / state

ಮೊದಲ ಬಾರಿಗೆ ಬೆಂಗಳೂರಿನಲ್ಲಿ ಗತಕಾಲದ ಕಾರುಗಳ 'ಪಯಣ'ದ ಜಗತ್ತು ಅನಾವರಣ - Vintage cars museum

ಶತಮಾನಕ್ಕೂ ಹಳೆಯ ಕಾರುಗಳ ವೈವಿಧ್ಯಮಯ ಲೋಕವನ್ನು 'ಪಯಣ' ವಸ್ತು ಸಂಗ್ರಹಾಲಯ ಮೊದಲ ಬಾರಿಗೆ ಬೆಂಗಳೂರಿನಲ್ಲಿ 'ದಿ ಆಟೋ ಎಕ್ಸ್​ಪೋ' ಮೂಲಕ ಸಾರ್ವಜನಿಕರ ವೀಕ್ಷಣೆಗೆ ತೆರೆದಿಟ್ಟಿದೆ.

Vintage car
ವಿಂಟೇಜ್​ ಕಾರು (ETV Bharat)
author img

By ETV Bharat Karnataka Team

Published : Sep 13, 2024, 8:13 PM IST

ಬೆಂಗಳೂರಿನಲ್ಲಿ ವಿಂಟೇಜ್​ ಕಾರುಗಳ ಪಯಣ (ETV Bharat)

ಬೆಂಗಳೂರು: ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಗತಕಾಲದ ಅಪರೂಪದ ಕಾರುಗಳ ಜಗತ್ತು ನಗರದ ಪ್ಯಾಲೇಸ್ ಮೈದಾನದ ತ್ರಿಪುರವಾಸಿನ ಗೇಟ್​ನಲ್ಲಿ ಇಂದಿನಿಂದ ಆರಂಭವಾದ 'ದಿ ಆಟೋ ಶೋ'ನಲ್ಲಿ ಅನಾವರಣಗೊಂಡಿದೆ. ಹಳೆಯ ಕಾಲದ ಜೊತೆಗಿನ ಅದ್ಭುತ ಪಯಣವನ್ನು ಸಿಲಿಕಾನ್ ಸಿಟಿಯ ಜನರ ಮುಂದೆ ತಂದು ನಿಲ್ಲಿಸಲಾಗಿದೆ.

ಈಗಲೂ ಸುಸ್ಥಿಯಲ್ಲಿರುವ ಶತಮಾನಕ್ಕೂ ಹಳೆಯ ಕಾರುಗಳ ವೈವಿಧ್ಯಮಯ ಲೋಕವನ್ನು "ಪಯಣ" ವಸ್ತು ಸಂಗ್ರಹಾಲಯ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸಾರ್ವಜನಿಕರ ವೀಕ್ಷಣೆಗೆ ತೆರೆದಿಟ್ಟಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಪಯಣ ಸಂಸ್ಥೆಗೆ ಮಾರ್ಗದರ್ಶಕರಾಗಿದ್ದಾರೆ. ವಿಂಟೇಜ್ ಕಾರುಗಳು ಮತ್ತು ಛಾಯಾಗ್ರಹಣದಲ್ಲಿನ ಹೆಗ್ಗಡೆಯವರ ಆಸಕ್ತಿಯೇ ಈ ಸಂಗ್ರಹವನ್ನು ಹುಟ್ಟುಹಾಕಿದೆ.

Vintage car
ವಿಂಟೇಜ್​ ಕಾರು (ETV Bharat)

ಪ್ರತಿಯೊಂದು ಕಾರೂ ಸುಸ್ಥಿತಿಯಲ್ಲಿವೆ: ಇಲ್ಲಿ ಪ್ರದರ್ಶನಕ್ಕಿರುವ ಪ್ರತಿಯೊಂದು ಕಾರುಗಳೂ ಸಹ ಉತ್ತಮವಾಗಿ ಸಂರಕ್ಷಿಸಲ್ಪಟ್ಟಿವೆ. ಕೇವಲ ಕಾರುಗಳ ಇತಿಹಾಸ ಮಾತ್ರವಲ್ಲದೆ ನಾವೀನ್ಯತೆ, ಕರಕುಶಲತೆ ಮತ್ತು ಸೌಂದರ್ಯದ ನಿರಂತರ ಅನ್ವೇಷಣೆಯನ್ನು ತೆರೆದಿಟ್ಟಿದೆ. ವಾಹನ ವಿನ್ಯಾಸದ ವಿಕಾಸ ಮತ್ತು ಉದ್ಯಮವನ್ನು ರೂಪಿಸಿದ ಪ್ರಮುಖ ಕ್ಷಣಗಳನ್ನು ನೋಡಿ ಅರ್ಥಮಾಡಿಕೊಳ್ಳಬಹುದಾಗಿದೆ. ಸುಮಾರು ಹತ್ತು ಗತಕಾಲದ ಅಪರೂಪದ ಕಾರುಗಳನ್ನು 'ದಿ ಆಟೋ ಶೋ'ನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಇಂದಿನಿಂದ ಮೂರು ದಿನಗಳ ಕಾಲ ಶೋ ಇರಲಿದೆ.

Vintage car
ವಿಂಟೇಜ್​ ಕಾರು (ETV Bharat)

"ಶ್ರೀರಂಗಪಟ್ಟಣದ ಬಳಿಯಿರುವ ಪಯಣ ಸಂಸ್ಥೆಯು ವಿಂಟೇಜ್ ಆಟೋಮೊಬೈಲ್‌ಗಳ ಸೌಂದರ್ಯ ಮತ್ತು ಇಂಜಿನಿಯರಿಂಗ್ ಅದ್ಭುತಗಳನ್ನು ತೋರ್ಪಡಿಸುವ ಇತಿಹಾಸದ ದಾರಿದೀಪವಾಗಿ ನಿಂತಿದೆ. ನಮ್ಮ ಮ್ಯೂಸಿಯಂ ಸಂಗ್ರಹಕ್ಕಿಂತ ಹೆಚ್ಚಾಗಿ ಶೈಕ್ಷಣಿಕ ಪ್ರವಾಸದಂತೆ ಗೋಚರಿಸುತ್ತದೆ. ಮೋಟಾರಿಂಗ್‌ನ ಸುವರ್ಣ ಯುಗಕ್ಕೆ ಮರುಜೀವವನ್ನು ನೀಡಿದೆ. ಇಲ್ಲಿನ ಪ್ರತಿಯೊಂದು ಕಾರು ಒಂದು ಕಥೆಯನ್ನು ಹೇಳುತ್ತದೆ. ಪ್ರತಿ ಪ್ರದರ್ಶನವು ಆಟೋಮೋಟಿವ್ ಶ್ರೇಷ್ಠತೆಯ ಒಂದು ಅಧ್ಯಾಯ ತೆರೆದಿಡುತ್ತದೆ. ಈ ಟೈಮ್‌ಲೆಸ್ ಕ್ಲಾಸಿಕ್‌ಗಳ ಪರಂಪರೆ ಅನ್ವೇಷಿಸಲು, ಕಲಿಯಲು ಮತ್ತು ಸ್ಫೂರ್ತಿ ಪಡೆಯಲು ಬೆಂಗಳೂರಿನಲ್ಲಿ ಸಹ ಪ್ರದರ್ಶನ ಏರ್ಪಡಿಸಲಾಗಿದೆ" ಎಂದು ಪಯಣ ಮ್ಯೂಸಿಯಂನ ಮ್ಯಾನೇಜರ್ ವಿವೇಕ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

Vintage car
ವಿಂಟೇಜ್​ ಕಾರು (ETV Bharat)

ಇಲ್ಲಿದೆ ವಿಂಟೇಜ್​ ಕಾರುಗಳ ಬಹುದೊಡ್ಡ ಸಂಗ್ರಹ: "ಪಯಣ ಮ್ಯೂಸಿಯಂ ವಿಂಟೇಜ್ ಕಾರುಗಳ ಬಹುದೊಡ್ಡ ಸಂಗ್ರಹವನ್ನು ಹೊಂದಿದೆ. ಇದು ದಕ್ಷಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿರುವ ಮಂಜುಷಾ ಮ್ಯೂಸಿಯಂನ ವಿಸ್ತರಣೆಯಾಗಿದೆ. ಸ್ಟಾಂಡರ್ಡ್ 2000, ಕಾಂಟೆಸ್ಸಾ, ಅಂಬಾಸಿಡರ್, ಮಾರುತಿ ಝೆನ್, ಫಿಯೆಟ್ ಪಾಲಿಯೋ, ರೀವಾ, ಮಟಿಜ್, ಡಾಲ್ಫಿನ್, ಮಾರಿಸ್ ಮೊದಲಾದ ಕಾರುಗಳು ನಮ್ಮ ಸಂಗ್ರಹದಲ್ಲಿವೆ" ಎಂದರು.

Vintage car
ವಿಂಟೇಜ್​ ಕಾರು (ETV Bharat)

"ಆಟೋಮೊಬೈಲ್ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿದ ತಂತ್ರಜ್ಞಾನಗಳು ಮತ್ತು ನಾವೀನ್ಯತೆಗಳಿಗೆ ಸಂಬಂಧಿಸಿದ ಆಟೋಮೋಟಿವ್ ಮತ್ತು ಇವಿಯ ಪ್ರಗತಿಯನ್ನು ಪ್ರದರ್ಶಿಸಲು ಪರಿಪೂರ್ಣ ವೇದಿಕೆಯನ್ನು ನಮ್ಮ ಆಟೋ ಷೋ ನೀಡಿದೆ. ಪಯಣ ವಸ್ತುಸಂಗ್ರಹಾಲಯ 23 ಎಕರೆಗಳಲ್ಲಿ ಹರಡಿದ್ದು ಅಲ್ಲಿ ವಿನೂತನ 69 ವಾಹನಗಳನ್ನು ಸಂಹ್ರಹಿಸಿದೆ. 1925ರಿಂದ ವಿಂಟೇಜ್ ಕಾರುಗಳಿಂದ ಹಿಡಿದು ಹೊಸ ಮಾದರಿ ಕಾರುಗಳು ವೀಕ್ಷಣೆಗೆ ಇವೆ. ಅಲ್ಲಿನ ಕೆಲ ಕಾರುಗಳನ್ನು ತಂದು ಸಿಲಿಕಾನ್ ಸಿಟಿಯ ಜನರ ವೀಕ್ಷಣೆಗೆ ವೇದಿಕೆ ಕಲ್ಪಿಸಲು ಸಂತಸ ತಂದಿದೆ" ಎಂದು ಆಟೋ ಷೋನ ಮಾರ್ಕೆಟಿಂಗ್ ಆ್ಯಂಡ್ ಸೇಲ್ಸ್ ಡೈರಕ್ಟರ್ ನರೇಶ್ ಈಟಿವಿ ಭಾರತಕ್ಕೆ ತಿಳಿಸಿದರು.

ಇದನ್ನೂ ಓದಿ: 32 ಕಿ.ಮೀ ಮೈಲೇಜ್​ ನೀಡುವ ಸ್ವಿಫ್ಟ್ ಸಿಎನ್‌ಜಿ ಕಾರು ಪರಿಚಯಿಸಿದ ಮಾರುತಿ ಸುಜುಕಿ! ಗ್ರಾಹಕರು ಫುಲ್​ ಖುಷ್​ - New Swift CNG Car Launched

ETV Bharat Logo

Copyright © 2024 Ushodaya Enterprises Pvt. Ltd., All Rights Reserved.