ETV Bharat / state

ಕೋವಿಡ್ ನಂತರ ಜನರ ಆರೋಗ್ಯದಲ್ಲಿ ಏರುಪೇರು, ಸಂಶೋಧನೆ ಅಗತ್ಯವಿದೆ: ಆರಗ ಜ್ಞಾನೇಂದ್ರ - ಸಂತಾಪ ಸೂಚನಾ ನಿರ್ಣಯ

''ಕೋವಿಡ್ ನಂತರ ಜನರ ಆರೋಗ್ಯದಲ್ಲಿ ಏರುಪೇರು, ಸಂಶೋಧನೆ ಅಗತ್ಯವಿದೆ'' ಎಂದ ಬಿಜೆಪಿ ಹಿರಿಯ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

Araga Jnanendra  ಅರಗ ಜ್ಞಾನೇಂದ್ರ  ಸ್ಪೀಕರ್ ಯು ಟಿ ಖಾದರ್  ಸಂತಾಪ ಸೂಚನಾ ನಿರ್ಣಯ  ರಾಜಾ ವೆಂಕಟಪ್ಪ ನಾಯ್ಕ
ಕೋವಿಡ್ ನಂತರ ಜನರ ಆರೋಗ್ಯದಲ್ಲಿ ಏರುಪೇರು, ಸಂಶೋಧನೆ ಅಗತ್ಯವಿದೆ: ಮಾಜಿ ಸಚಿವ ಆರಗ ಜ್ಞಾನೇಂದ್ರ
author img

By ETV Bharat Karnataka Team

Published : Feb 26, 2024, 2:32 PM IST

ಬೆಂಗಳೂರು: ''ಕೋವಿಡ್ ನಂತರ ಜನರ ಆರೋಗ್ಯದಲ್ಲಿ ಏರುಪೇರಾಗಿದ್ದು, ಚಿಕ್ಕ ವಯಸ್ಸಿನಲ್ಲೇ ಯುವಕ - ಯುವತಿಯರು ಮೃತಪಡುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಶೋಧನೆಗೆ ಕ್ರಮ ಕೈಗೊಳ್ಳಬೇಕು'' ಎಂದು ಬಿಜೆಪಿ ಹಿರಿಯ ಶಾಸಕ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ಮನವಿ ಮಾಡಿದ್ದಾರೆ.

ಸ್ಪೀಕರ್ ಯು.ಟಿ.ಖಾದರ್ ಮಂಡಿಸಿದ ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಅವರು, ''ಕೋವಿಡ್ ನಂತರ ಏನೋ ಆಗಿದೆ. 22 ರಿಂದ 23ನೇ ವಯಸ್ಸಿನ ಯುವಕ - ಯುವತಿಯರು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಬ್ರೈನ್ ಹ್ಯಾಮರೇಜ್ ಕೂಡ ಆಗುತ್ತಿದೆ. ಈ ಬಗ್ಗೆ ಸಂಶೋಧನೆ ನಡೆಸುವ ಅಗತ್ಯವಿದೆ. ಎಲ್ಲ ಆಸ್ಪತ್ರೆಗಳಲ್ಲಿ ಪರೀಕ್ಷೆ ನಡೆಸಲು ಕಟ್ಟುನಿಟ್ಟಿನ ಸೂಚನೆ ನೀಡಬೇಕು'' ಎಂದು ಸಲಹೆ ನೀಡಿದರು.

''ನಿತ್ಯ ಐದಾರು ಮೃತದೇಹಗಳಿಗೆ ಹಾರ ಹಾಕುವ ಪರಿಸ್ಥಿತಿ ಬಂದಿದೆ. ಕಿರಿಯ ವಯಸ್ಸಿನಲ್ಲಿ ಸಾವು ಹೆಚ್ಚಾಗುತ್ತಿರುವ ಬಗ್ಗೆ ವೈದ್ಯಕೀಯ ತಜ್ಞರೊಂದಿಗೆ ಸಮಾಲೋಚಿಸಿ ಈ ಬಗ್ಗೆ ಅಧ್ಯಯನ ನಡೆಸುವ ಅಗತ್ಯವಿದೆ. ಆ ಮೂಲಕ ಪರಿಹಾರ ಕಂಡುಕೊಂಡು ಕಿರಿಯ ವಯಸ್ಸಿನಲ್ಲಿ ನಿಧನರಾಗುವುದನ್ನು ತಪ್ಪಿಸಬಹುದಾಗಿದೆ'' ಎಂದು ಹೇಳಿದರು. ರಾಜಾ ವೆಂಕಟಪ್ಪ ನಾಯಕ​ ಅವರು ನಿಧನರಾಗಿರುವ ಸುದ್ದಿ ನಂಬಲು ಸಾಧ್ಯವಾಗಲಿಲ್ಲ. ಗ್ರಾಮ ಪಂಚಾಯಿತಿಯಿಂದ ಶಾಸಕರಾಗುವವರೆಗೂ ಹೋರಾಟ ಮಾಡಿದ ಜನಪ್ರತಿನಿಧಿ ಅವರು'' ಎಂದರು.

ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ''ರಾಜಾ ವೆಂಕಟಪ್ಪ ನಾಯಕ ಅವರು ಸರಳ, ಸಜ್ಜನಿಕೆ ಜನಪ್ರತಿನಿಧಿ ಮಾತ್ರವಲ್ಲ. ಬೇಡಿ ಬಂದವರಿಗೆ ಸಹಾಯ ಹಸ್ತ ಚಾಚುತ್ತಿದ್ದರು. ಅವರು ಮೃತರಾಗಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ನಮ್ಮ ಕುಟುಂಬದ ಜೊತೆ ಉತ್ತಮ ಸಂಬಂಧವಿತ್ತು. ನನಗೆ ಹಿರಿಯಣ್ಣನಂತೆ ಇದ್ದರು. ರಾಜಮನೆತನದಿಂದ ಬಂದಿದ್ದರೂ ಶ್ರೀಸಾಮಾನ್ಯರ ಜೊತೆ ಬೆರೆಯುತ್ತಿದ್ದರು. ಬ್ರಿಟಿಷರ ವಿರುದ್ಧ ಹೋರಾಡಿದ ಮನೆತನ ಅವರದು. ಪಠ್ಯ ಪುಸ್ತಕದಲ್ಲಿ ಅವರ ಮನೆತನದ ವಿಚಾರವಿತ್ತು. ಕಳೆದ ಸರ್ಕಾರದ ಅವಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆಯಾದಾಗ ಕೆಲವೊಂದು ವಿಚಾರ ಬಿಟ್ಟುಹೋಗಿತ್ತು. ಆಗ ನಾವು ಕಲಬುರ್ಗಿಯಲ್ಲಿ ಅಹೋರಾತ್ರಿ ಧರಣಿ ಕೈಗೊಂಡಾಗ ಅವರೂ ಕೂಡ ಬಂದು ಭಾಗಿಯಾಗಿದ್ದರು. ವಿಶಾಲ ಹೃದಯವುಳ್ಳವರಾಗಿದ್ದರು. ನನಗೂ ಅವರ ಪ್ರೋತ್ಸಾಹ ಸಿಕ್ಕಿತ್ತು'' ಎಂದರು.

ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಮಾತನಾಡಿ, ''ಕಲ್ಯಾಣ ಕರ್ನಾಟಕ ಭಾಗದಲ್ಲಿ ಅವರ ಮನೆತನದ ಬಗ್ಗೆ ಗೌರವವಿದೆ. ಸ್ವಾತಂತ್ರ್ಯ ಹೋರಾಟದಲ್ಲೂ ಅವರ ಮನೆತನದ ಕೊಡುಗೆಯಿದೆ. ಜನರೊಂದಿಗೆ ಪ್ರೀತಿ ಅಭಿಮಾನದಿಂದ ಬೆರೆಯುತ್ತಿದ್ದರು. ನಿಸ್ವಾರ್ಥ ಸೇವೆ ಮಾಡುತ್ತಿದ್ದರು. ಅವರ ಅಗಲಿಕೆಯಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ'' ಎಂದು ಹೇಳಿ ಸಂತಾಪ ಸೂಚಿಸಿದರು.

ರಾಜಾ ವೆಂಕಟಪ್ಪ ನಾಯಕಗೆ ಶ್ರದ್ಧಾಂಜಲಿ ಸಲ್ಲಿಕೆ: ಕಾಂಗ್ರೆಸ್ ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯ್ಕ ಅವರ ನಿಧನಕ್ಕೆ ವಿಧಾನಸಭೆಯಲ್ಲಿ ಇಂದು (ಸೋಮವಾರ) ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಇಂದು ಬೆಳಗ್ಗೆ ಸದನ ಸೇರಿದಾಗ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರು, ರಾಜಾ ವೆಂಕಟಪ್ಪ ನಾಯಕ ಅವರು ನಿನ್ನೆ ನಿಧನರಾಗಿದ್ದಾರೆ ಎಂಬ ವಿಷಯವನ್ನು ಸದನಕ್ಕೆ ತಿಳಿಸಿ, ಅವರಿಗೆ ಸಂತಾಪ ಸಲ್ಲಿಸುವ ನಿರ್ಣಯ ಮಂಡಿಸಿದರು. ರಾಜಾ ವೆಂಕಟಪ್ಪ ನಾಯಕ ಅವರು 1957 ರ ನವೆಂಬರ್ 23 ರಂದು ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಜನಿಸಿದ್ದರು. ವೃತ್ತಿಯಲ್ಲಿ ಕೃಷಿಕರಾಗಿದ್ದ ಅವರು, 1987ರಲ್ಲಿ ಪೇಠ ಅಮ್ಮಾಪುರ ಮಂಡಲ ಪಂಚಾಯಿತಿಯ ಸದಸ್ಯರಾಗುವುದರ ಮೂಲಕ ರಾಜಕೀಯ ಪ್ರವೇಶ ಮಾಡಿ ಅದೇ ಅವಧಿಯಲ್ಲಿ ಮಂಡಲ ಪ್ರಧಾನರಾಗಿ ಸೇವೆ ಸಲ್ಲಿಸುವ ಮೂಲಕ ಜನಾನುರಾಗಿಯಾಗಿದ್ದರು ಎಂದು ಸ್ಪೀಕರ್ ಅವರು ಸದನಕ್ಕೆ ತಿಳಿಸಿದರು.

1994 ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಚುನಾಯಿತರಾಗಿದ್ದ ಅವರು, 1999, 2013 ಹಾಗೂ 2023ರಲ್ಲಿ 16ನೇ ವಿಧಾನಸಭೆಗೆ ಆಯ್ಕೆಯಾಗಿ ಪ್ರಸ್ತುತ ಸದನದಲ್ಲಿ ಸದಸ್ಯರಾಗಿ ಸಕ್ರಿಯರಾಗಿದ್ದರು. ಇತ್ತೀಚೆಗೆ ಉಗ್ರಾಣ ನಿಗಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಎಲ್ಲಾ ಸಮುದಾಯದ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಸರಳ ಸಜ್ಜನಿಕೆಯ ನಾಯಕರಾಗಿದ್ದ ರಾಜಾ ವೆಂಕಟಪ್ಪ ನಾಯ್ಕ ಅವರ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.

ಪ್ರತಿಯೊಬ್ಬರ ಸಾವು ನಮಗೆಲ್ಲಾ ದೊಡ್ಡ ಮಟ್ಟದ ಸಂದೇಶವನ್ನು ನೀಡುತ್ತದೆ. ದೇವರು ಎಷ್ಟು ವರ್ಷ ಆಯಸ್ಸು ಕೊಡುತ್ತಾನೋ ಅಷ್ಟು ದಿನ ನೆಮ್ಮದಿ ಜೀವನ ನಡೆಸಬೇಕು, ಇನ್ನೊಬ್ಬರ ನೆಮ್ಮದಿಗೂ ಸಹಕರಿಸಬೇಕು. ದ್ವೇಷ, ಕೋಪ, ಸಣ್ಣಪುಟ್ಟ ವಿಚಾರಕ್ಕೆ ತೊಂದರೆ ಕೊಡುವುದರಿಂದ ಮುಂದೆ ಪಶ್ಚಾತ್ತಾಪ ಪಡಬೇಕಾಗಬಹುದು. ದ್ವೇಷರಹಿತ, ಅಸೂಯೆ ರಹಿತ ಜೀವನ ನಡೆಸುವಂತಾಗಲಿ. ರಾಜಾ ವೆಂಕಟಪ್ಪ ನಾಯಕ ಅವರ ನಿಧನ ಅತ್ಯಂತ ನೋವು ತಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಂತಾಪ ಸೂಚನಾ ನಿರ್ಣಯ ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸುರಪುರದ ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ಅವರು ನಿಧನರಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ನೋಡಲು ಹೋಗಿದ್ದೆ. ಆಗ ಅವರು ತುರ್ತು ಚಿಕಿತ್ಸಾ ಘಟಕದಲ್ಲಿದ್ದರು. ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ ಎನ್ನಿಸಿರಲಿಲ್ಲ. ಕಾಂಗ್ರೆಸ್‍ನ ನಿಷ್ಠಾವಂತ ಶಾಸಕ, ನಾಲ್ಕು ಬಾರಿ ಶಾಸಕರಾಗಿದ್ದು, ಅತ್ಯಂತ ಸರಳ, ಸಜ್ಜನಿಕೆಯಿಂದ ಇದ್ದರು. ತಮ್ಮ ಜಿಲ್ಲೆ ಹಾಗೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕಳಕಳಿ ಹೊಂದಿದ್ದರು. ತಮ್ಮ ಅನಾರೋಗ್ಯವನ್ನು ಲೆಕ್ಕಿಸದೇ ಜನಪರ ಕಾರ್ಯ ಮಾಡುತ್ತಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೂ ಆಪ್ತರಾಗಿದ್ದರು. ಅವರನ್ನು ಉಗ್ರಾಣ ನಿಗಮದ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಅವರ ಕುಟುಂಬ ವರ್ಗದವರಿಗೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಹೇಳಿದರು.

ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ''ರಾಜಾ ವೆಂಕಟಪ್ಪ ನಾಯಕ ಅವರ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ಐದು ವರ್ಷ ಈ ಸದನದ ಸದಸ್ಯರಾಗಿರುವಂತೆ ಚುನಾವಣಾ ಆಯೋಗ ಗ್ಯಾರಂಟಿ ಕೊಟ್ಟಿತ್ತು. ಆದರೆ ವಿಧಿ ಅವಕಾಶ ಮಾಡಿಕೊಡಲಿಲ್ಲ. ಸರಳ, ಸಜ್ಜನಿಕೆಯುಳ್ಳವರಾಗಿದ್ದ ಅವರು, ಅವರಾಯಿತು, ಅವರ ಕ್ಷೇತ್ರವಾಯಿತು ಎಂಬಂತಿದ್ದರು. ಅವರ ಮನೆತನ ಸ್ವಾತಂತ್ರ್ಯ ಹೋರಾಟದ ಮನೆತನವಾಗಿತ್ತು'' ಎಂದು ಸ್ಮರಿಸಿದರು.

ಸಚಿವರಾದ ಮಧು ಬಂಗಾರಪ್ಫ, ಜಮೀರ್ ಅಹಮ್ಮದ್ ಖಾನ್, ಪ್ರಿಯಾಂಕ್ ಖರ್ಗೆ, ಡಾ.ಶರಣ ಪ್ರಕಾಶ್ ಪಾಟೀಲ್, ಶಾಸಕರಾದ ಮಾನಪ್ಪ ವಜ್ಜಲ್​​, ಆರಗ ಜ್ಞಾನೇಂದ್ರ, ಅಜಯ್ ಧರ್ಮಸಿಂಗ್, ನಾಗರಾಜ, ಎನ್.ಟಿ.ಶ್ರೀನಿವಾಸ್ ಅವರು ಮಾತನಾಡಿ, ರಾಜಾ ವೆಂಕಟಪ್ಪ ನಾಯ್ಕ ಅವರ ಸೇವೆಯನ್ನು ಸ್ಮರಿಸಿ, ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ಸದನದ ಸದಸ್ಯರೆಲ್ಲ ಎದ್ದು ನಿಂತು ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಸಂತಾಪ ಸೂಚಿಸಿದರು. ಸದನದಲ್ಲಿ ಕೈಗೊಂಡ ಸಂತಾಪ ನಿರ್ಣಯದ ಪ್ರತಿಯನ್ನು ಅವರ ಕುಟುಂಬ ವರ್ಗಕ್ಕೆ ಕಳುಹಿಸಿಕೊಡುವುದಾಗಿ ಸ್ಪೀಕರ್ ಪ್ರಕಟಿಸಿದರು.

ಇದನ್ನೂ ಓದಿ: ರಾಜ್ಯಸಭಾ ಚುನಾವಣೆ ಮುನ್ನ ಸಿಎಂ, ಡಿಸಿಎಂ ಭೇಟಿಯಾದ ಜನಾರ್ದನ ರೆಡ್ಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.