ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ದಾಖಲೆಯ 15ನೇ ಮುಂಗಡ ಪತ್ರ ಮಹಿಳೆಯರ ಅಭ್ಯುದಯದ ಪೂರಕವಾಗಿದೆ. ಸ್ತ್ರೀ ಸಬಲೀಕರಣದ ಆಶಯಗಳನ್ನು ಹೊಂದಿದೆ ಎಂದು ಎಫ್‌ಕೆಸಿಸಿಐನ ಉಪಾಧ್ಯಕ್ಷರಾದ ಮಹಿಳಾ ಉದ್ಯಮಿ ಉಮಾರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಬಜೆಟ್ನಲ್ಲಿ ಘೋಷಣೆ ಮಾಡಿರುವ ಗ್ರಾಮೀಣ ಪ್ರದೇಶದಲ್ಲಿ ಕೆಫೆ ಸಂಜೀವಿನಿ ಕ್ಯಾಂಟೀನ್ ಯೋಜನೆ ಉತ್ತಮವಾಗಿದೆ. ಇದು ಮಹಿಳಾ ಅಭ್ಯುದಯದ ಹೆಜ್ಜೆ. 2,500 ಕಾಫಿ ಕಿಯಾಸ್ಕ್ ಯೋಜನೆ ಸಹ ಆಕರ್ಷಕವಾಗಿದೆ. ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆಯನ್ನು ಸಿದ್ದರಾಮಯ್ಯ ಮುಂಗಡಪತ್ರದಲ್ಲಿ ಪ್ರಸ್ತಾಪಿಸಿರುವುದು ಸ್ವಾಗತಾರ್ಹ. ನೂತನ ಕೈಗಾರಿಕಾ ನೀತಿ ಜಾರಿಗೆ ತರುವ ಬಗ್ಗೆ ಸಿಎಂ ತಿಳಿಸಿದ್ದಾರೆ. ಇದರ ಜೊತೆಗೆ ''ಮಹಿಳಾ ಉದ್ಯಮ ಶೀಲ'' ನೀತಿಯನ್ನೂ ಸಹ ಜಾರಿಗೆ ತರಬೇಕೆಂದು ಉಮಾ ರೆಡ್ಡಿ ಒತ್ತಾಯಿಸಿದರು.
ಮಹಿಳೆಯರು ಉದ್ಯಮಿದಾರರಾಗಿ ಬೆಳೆದು ಉದ್ಯಮ ಆರಂಭಿಸಿ 50 ಜನರಿಗೆ ಕೆಲಸ ಕೊಡುವಂತಹ ಸ್ಥಿತಿ ತಲುಪಿದಾಗ ಹೆಚ್ಚಿನ ಪ್ರಮಾಣದ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ ಎಂದು ರೆಡ್ಡಿ ಹೇಳಿದ್ದಾರೆ.
ಇದನ್ನೂ ಓದಿ: ಬಜೆಟ್ನಲ್ಲಿ ಘೋಷಣೆಯಾದ ಹೊಸ ಯೋಜನೆಗಳೇನು? ಇಲ್ಲಿದೆ ಮಾಹಿತಿ