ETV Bharat / state

ತುಮಕೂರು: ಖಾಸಗಿ ಬಸ್​ನಲ್ಲಿ ಆ್ಯಸಿಡ್ ಬಾಟಲಿ ಸ್ಫೋಟ - ಐವರಿಗೆ ಗಾಯ - Acid bottle explosion

ತುಮಕೂರು ತಾಲೂಕಿನ ಗೂಳೂರು ಬಳಿ‌ ಖಾಸಗಿ ಬಸ್​ನಲ್ಲಿ ಶೌಚಾಲಯಕ್ಕೆ ಬಳಸುವ ಆ್ಯಸಿಡ್ ಬಾಟಲ್ ಸ್ಫೋಟವಾಗಿ ಹಲವರಿಗೆ ಸಣ್ಣಪುಟ್ಟ ಗಾಯವಾದ ಘಟನೆ ನಡೆದಿದೆ.

ಖಾಸಗಿ ಬಸ್​ನಲ್ಲಿ ಆ್ಯಸಿಡ್ ಬಾಟಲಿ ಸ್ಪೋಟ
ಖಾಸಗಿ ಬಸ್​ನಲ್ಲಿ ಆ್ಯಸಿಡ್ ಬಾಟಲಿ ಸ್ಪೋಟ
author img

By ETV Bharat Karnataka Team

Published : Mar 20, 2024, 9:14 PM IST

Updated : Mar 20, 2024, 9:23 PM IST

ಖಾಸಗಿ ಬಸ್​ನಲ್ಲಿ ಆ್ಯಸಿಡ್ ಬಾಟಲಿ ಸ್ಫೋಟ

ತುಮಕೂರು : ಖಾಸಗಿ ಬಸ್​ನಲ್ಲಿ ಶೌಚಾಲಯಕ್ಕೆ ಬಳಸುವ ಆ್ಯಸಿಡ್ ಬಾಟಲ್ ಸ್ಫೋಟವಾಗಿ ಐವರು ಪ್ರಯಾಣಿಕರಿಗೆ ಗಾಯಗಳಾಗಿರುವ ಘಟನೆ ತುಮಕೂರು ತಾಲೂಕು ಗೂಳೂರು ಬಳಿ ನಡೆದಿದೆ. ಕೂಡಲೇ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬುದಾಗಿ ತಿಳಿದು ಬಂದಿದೆ.

ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ನಾಜಿಯಾ ಸುಲ್ತಾನ್, ರಾಜಲಕ್ಷ್ಮಿ ಗಾಯಗೊಂಡವರು. ಆ್ಯಸಿಡ್ ಸಾಗಿಸುತ್ತಿದ್ದ ಶಕೀಲಾ ಬಾನು ಕೈಗೆ ಸಹ ಗಾಯವಾಗಿದೆ.

ಖಾಸಗಿ ಬಸ್​ನಲ್ಲಿ ಆ್ಯಸಿಡ್ ಬಾಟಲ್ ಇಟ್ಟುಕೊಂಡು ತುಮಕೂರು ಕಡೆ ಬರುತ್ತಿದ್ದ ಮಹಿಳೆ ತುಮಕೂರು ತಾಲೂಕಿನ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್​ನಲ್ಲಿ ಬಸ್ ಹತ್ತಿದ್ದರು. ಈ ವೇಳೆ ಖಾಸಗಿ ಬಸ್​ನಲ್ಲಿ ಆ್ಯಸಿಡ್ ತುಂಬಿದ್ದ ಬಾಟಲ್ ಸ್ಫೋಟಗೊಂಡಿದೆ. ಒಂದು ಕ್ಷಣ ಬಸ್​ನಲ್ಲಿದ್ದ ಪ್ರಯಾಣಿಕರು ಶಾಕ್ ಆಗಿದ್ದರು ಎಂಬುದು ತಿಳಿದು ಬಂದಿದೆ.

ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಣ್ಣ ಪುಟ್ಟ ಗಾಯವಾದವರನ್ನ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೇಲ್ನೋಟಕ್ಕೆ ಬಾಟಲ್​ನಲ್ಲಿ ಆ್ಯಸಿಡ್ ಒತ್ತಡ ಹೆಚ್ಚಾಗಿ ಸ್ಫೋಟಗೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಕಡಬ ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಪ್ರಕರಣ: ಇನ್ನಿಬ್ಬರು ವಶಕ್ಕೆ

Last Updated : Mar 20, 2024, 9:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.