ETV Bharat / state

ರಾಯಚೂರು: ಅಪಘಾತವಾದಂತೆ ನಟನೆ, ನೋಡಲು ಕಾರಿಳಿದು ಬಂದ ರೈಸ್ ಮಾಲೀಕನ ಕಿಡ್ನಾಪ್​ ಯತ್ನ - Kidnap Case - KIDNAP CASE

ರಾಯಚೂರಿನ ಹೊರವಲಯದಲ್ಲಿ ರೈಸ್ ಮಿಲ್ ಮಾಲೀಕನನ್ನು ಅಪಹರಿಸಲು ಯತ್ನಿಸಿದ ಆರೋಪಿಗಳನ್ನು ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರೈಸ್ ಮಾಲೀಕನ ಅಹಪರಿಸಲು ಯತ್ನಿಸಿದ ಆರೋಪಿಗಳ ಬಂಧನ
ರೈಸ್ ಮಾಲೀಕನ ಅಹಪರಿಸಲು ಯತ್ನಿಸಿದ ಆರೋಪಿಗಳ ಬಂಧನ (ETV Bharat)
author img

By ETV Bharat Karnataka Team

Published : Sep 14, 2024, 12:05 PM IST

ರಾಯಚೂರು ಎಸ್​ಪಿ ಮಾಹಿತಿ (ETV Bharat)

ರಾಯಚೂರು: ಅಪಘಾತವಾದಂತೆ ನಟಿಸಿ, ರೈಸ್ ಮಿಲ್ ಮಾಲೀಕನನ್ನು ಅಪಹರಿಸಲು ಯತ್ನಿಸಿದ ಘಟನೆ ರಾಯಚೂರು ಹೊರವಲಯದ ವೈಟಿಪಿಎಸ್ ಘಟಕದ ಎದುರು ಶುಕ್ರವಾರ ಸಂಜೆ ನಡೆದಿದೆ. ಆರೋಪಿಗಳಾದ ರಿಯಾಜ್ ಪಾಷಾ, ಗುರುರಾಜ್, ಶೇಕ್‌ಮುಕ್ತಿಯಾರ್, ಶೇಕ್ ಅಬ್ದುಲ್ ಹಾಗೂ ಗುರುಕುಮಾರ್ ಎಂಬುವರನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಘಟನೆಯ ವಿವರ: ಶುಕ್ರವಾರ ಸಂಜೆ 7.30ರ ಸುಮಾರಿಗೆ ಎರಡು ಬೈಕ್‌ಗಳಲ್ಲಿ ಬಂದ ಐವರು, ಬೈಕ್ ಅಪಘಾತವಾದಂತೆ ನಟಿಸಿ ಕೆಳಗೆ ಬಿದ್ದಿದ್ದರು. ಕಾರಿನಲ್ಲಿ ಮನೆಗೆ ಹೋಗುತ್ತಿದ್ದ ರೈಸ್ ಮಿಲ್ ಮಾಲೀಕ ನರೇಂದ್ರ ಕುಮಾರ ಅವರು ಕೆಳಗೆ ಬಿದ್ದವರನ್ನು ನೋಡಲು ಹೋಗಿದ್ದರು. ಆಗ ಆರೋಪಿಗಳು, ರೈಸ್ ಮಾಲೀಕರನ್ನು ಹಿಡಿದುಕೊಂಡು ಮಾರಕಾಸ್ತ್ರಗಳನ್ನು ತೋರಿಸಿ ಹೆದರಿಸಿದ್ದಾರೆ. ಆಗ ರೈಸ್ ಮಾಲೀಕರು ತಮ್ಮಲ್ಲಿದ್ದ 50 ಸಾವಿರ ರೂ. ಕೊಟ್ಟು ತಮ್ಮನ್ನು ಬಿಡುವಂತೆ ಕೋರಿದ್ದಾರೆ. ಆರೋಪಿಗಳು ಬಿಡದೆ, ಅವರ ಕಾರಿನಲ್ಲೇ ಅಪಹರಿಸಲು ಯತ್ನಿಸಿದ್ದಾರೆ. ಆದರೆ ರೈಸ್ ಮಿಲ್ ಮಾಲೀಕರು ಕಾರನ್ನು ಲಾಕ್ ಮಾಡಿದ್ದರಿಂದ ಕಾರು ಸ್ಟಾರ್ಟ್ ಆಗಿಲ್ಲ. ಬಳಿಕ ತಮ್ಮ ಬೈಕ್​ನಲ್ಲೇ ಕೆಲ ದೂರು ಕರೆದುಕೊಂಡು ಹೋಗಿ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಬಳಿಕ ಮತ್ತೆ ರೈಸ್ ಮಿಲ್ ಮಾಲೀಕರನ್ನು ಕಾರಿನ ಬಳಿ ಕರೆದುಕೊಂಡು ಬರುತ್ತಾರೆ. ಆಗ ಕಾರಿನ ಬಳಿ ಇದ್ದ ರೈಸ್ ಮಿಲ್ ಸಿಬ್ಬಂದಿಯವರಿಗೂ ಅರೋಪಿಗಳು ಬೆದರಿಕೆ ಹಾಕಿದ್ದಾರೆ. ಈ ವೇಳೆ ಸಿಬ್ಬಂದಿ ಕೂಗಾಡಿದ್ದಾರೆ. ಅಲ್ಲೇ ಗಸ್ತಿನಲ್ಲಿದ್ದ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ, ಓರ್ವನನ್ನು ಬಂಧಿಸಿದ್ದರು. ನಾಲ್ವರು ಪರಾರಿಯಾಗಿದ್ದರು. ಬಳಿಕ ಸೆರೆಸಿಕ್ಕ ಆರೋಪಿಯ ಮಾಹಿತಿ ಆಧರಿಸಿ ಎಲ್ಲರನ್ನೂ ಬಂಧಿಸಿದ್ದೇವೆ ಎಂದು ಎಸ್​ಪಿ ಪುಟ್ಟಮಾದಯ್ಯ ಮಾಹಿತಿ ನೀಡಿದ್ದಾರೆ.

ಬಂಧಿತರಿಂದ ಕೃತ್ಯಕ್ಕೆ ಬಳಸಿದ ಚಾಕು, ಎರಡು ಬೈಕ್ ಹಾಗೂ 50 ಸಾವಿರ ರೂ. ನಗದು ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಪಿಐ ಸಾಬಯ್ಯ ಹಾಗೂ ಇನ್ಸ್​ಪೆಕ್ಟರ್ ಪ್ರಕಾಶ್ ಡಂಬಳ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದರು. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಕುರಿತು ಡಕಾಯಿತಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಅಪಹರಿಸಲು ಯತ್ನಿಸಿದವರಲ್ಲಿ ಓರ್ವ ಆರೋಪಿಯು ರೈಸ್ ಮಾಲೀಕರಿಗೆ ಪರಿಚಯಸ್ಥನಾಗಿದ್ದಾನೆ. ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರಿಂದ ರೈಸ್ ಮಾಲೀಕರು ಗಾಯಗೊಂಡಿದ್ದಾರೆ. ಆರೋಪಿಗಳನ್ನು ಸ್ಥಳಕ್ಕೆ ಕರೆದೊಯ್ದ ಪೊಲೀಸರು ಮಹಜರು ನಡೆಸಿದ್ದಾರೆ.

ಇದನ್ನೂ ಓದಿ: ಕಲಬುರಗಿ: ಮಗನನ್ನು ಶಾಲೆಗೆ ಬಿಟ್ಟು ಬರುತ್ತಿದ್ದ ಗ್ರಾ.ಪಂ ಮಾಜಿ ಉಪಾಧ್ಯಕ್ಷನಿಗೆ ಗುಂಡಿಕ್ಕಿ ಕೊಲೆ - ALANDA MURDER

ETV Bharat Logo

Copyright © 2025 Ushodaya Enterprises Pvt. Ltd., All Rights Reserved.