ETV Bharat / state

ಹಬ್ಬದ ಸಾಲು ಸಾಲು ರಜೆಯಿಂದ ಊರಿಗೆ ತೆರಳಿದ ಜನ: ಬೆಂಗಳೂರಲ್ಲಿ ಕಳೆಗುಂದಿದ ಪಟಾಕಿ ವ್ಯಾಪಾರ

ಸಾಲು ಸಾಲು ರಜೆ ಹಿನ್ನೆಲೆ ಬೆಂಗಳೂರು ಜನರು ತಮ್ಮ ಊರುಗಳಿಗೆ ತೆರಳಿರುವುದರಿಂದ ಪಟಾಕಿ ವ್ಯಾಪಾರ ಕಡಿಮೆಯಾಗಿದೆ. ಈ ಕುರಿತು ಈಟಿವಿ ಭಾರತ ಕನ್ನಡ ವರದಿಗಾರ ಸನತ್ ದೇಸಾಯಿ ಮಾಡಿರುವ ವರದಿ ಇಲ್ಲಿದೆ..

ಕಳೆಗುಂದಿದ ಪಟಾಕಿ ವ್ಯಾಪಾರ
ಕಳೆಗುಂದಿದ ಪಟಾಕಿ ವ್ಯಾಪಾರ (ETV Bharat)
author img

By ETV Bharat Karnataka Team

Published : Nov 2, 2024, 8:58 PM IST

ಬೆಂಗಳೂರು: ದೀಪಾವಳಿಯ ಕೊನೆಯ ದಿನವಾದ ಇಂದು ಬಲಿಪಾಡ್ಯಮಿ ಹಬ್ಬವನ್ನು ನಗರದಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ ಸಾಲು ಸಾಲು ರಜೆ ಹಾಗೂ ವೀಕೆಂಡ್​ನಲ್ಲಿ ಹಬ್ಬ ಬಂದಿರುವ ಹಿನ್ನೆಲೆಯಲ್ಲಿ ಸಾಕಷ್ಟು ಜನರು ತಮ್ಮ ಊರುಗಳಿಗೆ ತೆರಳಿರುವುದು ಪಟಾಕಿ ವ್ಯಾಪಾರಸ್ಥರಿಗೆ ನಿರಾಸೆ ಮೂಡಿಸಿದೆ.

ಕೇವಲ ಹಸಿರು ಪಟಾಕಿಯನ್ನು ಅಧಿಕೃತ ಮಳಿಗೆಗಳ ಮೂಲಕ ಮಾರಾಟ ಮಾಡಲಾಗುತ್ತಿದ್ದು, ಕೆಲವೆಡೆ ಅನಧಿಕೃತ ವ್ಯಾಪಾರ ನಡೆದರೂ ಅದನ್ನು ಪಾಲಿಕೆ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹತೋಟಿಗೆ ತರುವಲ್ಲಿ ಬಹುತೇಕ ಯಶಸ್ವಿಯಾಗಿದೆ. ಆದರೆ ವೀಕೆಂಡ್​ ನೆಪದಲ್ಲಿ ಜನರು ತಮ್ಮ ತಮ್ಮ ಊರುಗಳಿಗೆ ಮತ್ತು ಪ್ರವಾಸಿ ಸ್ಥಳಗಳಿಗೆ ತೆರಳಿರುವುದು ಲಕ್ಷ ಲಕ್ಷ ಬಂಡವಾಳ ಹಾಕಿರುವ ಪಟಾಕಿ ವ್ಯಾಪಾರಸ್ಥರಿಗೆ ನಷ್ಟ ಉಂಟಾಗಿದೆ.

ಬೆಂಗಳೂರಲ್ಲಿ ಕಳೆಗುಂದಿದ ಪಟಾಕಿ ವ್ಯಾಪಾರ (ETV Bharat)

ಈ ಕುರಿತು ಗಾಂಧಿನಗರದ ಮೈದಾನದಲ್ಲಿ ಪಟಾಕಿ ಅಂಗಡಿಯನ್ನು ಇಟ್ಟಿರುವ ಸಿ.ಎಂ.ಎಲ್ ದಿಲೀಪ್ 'ಈಟಿವಿ ಭಾರತ ಕನ್ನಡ'ದ ಜೊತೆ ಮಾತನಾಡಿ, "ಈ ಬಾರಿ ಹತ್ತು ಹಲವು ವಿಧದ ಪಟಾಕಿಯನ್ನು ತರಿಸಲಾಗಿತ್ತು. ಡ್ಯಾನ್ಸಿಂಗ್ ಮತ್ತು ರೊಟೇಟಿಂಗ್ ಸ್ಪಾರ್ಕಲ್, ಕ್ರ್ಯಾಕ್ಲಿಂಗ್ ಕ್ಯಾಂಡಿ, ಲಾಲಿಪಾಪ್ ಕ್ಯಾಂಡಿ, ಹಾರುವ - ನೆಗೆಯುವ ಹಲವು ರೀತಿಯ ಪಟಾಕಿಗಳನ್ನು ಮಕ್ಕಳಿಗಾಗಿ ತರಿಸಲಾಗಿತ್ತು. 50 ವಿಧದ ಫ್ಲವರ್​ಪಾಟ್​ಗಳು ಬಂದಿದ್ದವು. ಸುಮಾರು 5 ಸಾವಿರ ವಿಧದ ಪಟಾಕಿಗಳು ಈ ಬಾರಿ ಮಾರುಕಟ್ಟೆಗೆ ಬಂದಿದ್ದವು. ಆದರೆ ಈ ಬಾರಿ ಜನರು ಪಟಾಕಿ ಅಂಗಡಿಗಳ ಕಡೆಗೆ ಬರದಿರುವುದು ನಿರಾಶೆಯನ್ನುಂಟು ಮಾಡಿದೆ" ಎಂದು ಬೇಸರ ವ್ಯಕ್ತಪಡಿಸಿದರು.

"ಹಸಿರು ಪಟಾಕಿಯನ್ನೇ ಬಹುತೇಕ ವ್ಯಾಪಾರಸ್ಥರು ಮಾರಾಟ ಮಾಡುತ್ತಿದ್ದಾರೆ. ಬೇರಿಯಂ ನೈಟ್ರೇಟ್ ಬಳಸದಂತೆ 2019 ರಲ್ಲೇ ಸುಪ್ರೀಂಕೋರ್ಟ್ ಆದೇಶವನ್ನು ನೀಡಿತ್ತು. ಅದನ್ನು ಬಹುತೇಕ ಪಟಾಕಿ ತಯಾರಿಕಾ ಕಂಪನಿಗಳು ಅಳವಡಿಸಿಕೊಂಡಿವೆ. ಇದರಿಂದ ಬಹುತೇಕ ವಾಯು ಮತ್ತು ಶಬ್ಧ ಮಾಲಿನ್ಯ ಕಡಿಮೆಯಾಗುತ್ತಿದೆ. ಕಟ್ಟುನಿಟ್ಟಿನ ಕ್ರಮಗಳಿಂದ ದರಗಳು ಸ್ವಲ್ಪ ಹೆಚ್ಚಾಗಿದೆ. ಆದರೆ ಜನರಿಗೆ ಕೈಗೆಟಕುವ ದರದಲ್ಲಿ ನೀಡಲಾಗುತ್ತಿದ್ದರೂ ವ್ಯಾಪಾರ ವಹಿವಾಟು ಕಡಿಮೆಯಾಗಿರುವುದು ಬೇಸರ ಮೂಡಿಸಿದೆ" ಎಂದು ಅಭಿಪ್ರಾಯಪಟ್ಟರು.

"ಸಾಲಾಗಿ ನಾಲ್ಕೈದು ದಿನ ರಜೆ ಹಿನ್ನೆಲೆ ಜನರು ಊರುಗಳಿಗೆ ತೆರಳಿರುವುದರಿಂದ ಶೇ.40 ರಷ್ಟು ವ್ಯಾಪಾರ ಕಡಿಮೆಯಾಗುವುದಕ್ಕೆ ಕಾರಣವಾಗಿದೆ. ಹಸಿರು ಪಟಾಕಿಗಳಿಂದ ಕನಿಷ್ಠ 30 ರಷ್ಟು ಮಾಲಿನ್ಯ ಕಡಿಮೆಯಾಗಿದೆ. ನೂರಾರು ಕುಟುಂಬಗಳು ಪಟಾಕಿ ತಯಾರಿಕೆ ಮತ್ತು ವ್ಯಾಪಾರದಿಂದ ಬದುಕು ಸಾಗಿಸುತ್ತಿವೆ. ಜನರು ಈ ಕಾರಣದಿಂದ ಜಾಸ್ತಿಯಲ್ಲದಿದ್ದರೂ ಒಂದಿಷ್ಟು ಪಟಾಕಿಗಳನ್ನು ಕೊಂಡುಕೊಳ್ಳಬೇಕು" ಎಂದು ಗಾಂಧಿನಗರದ ಮೈದಾನದಲ್ಲಿ ಪಟಾಕಿ ವ್ಯಾಪಾರ ಮಾಡುತ್ತಿರುವ ಸೂರ್ಯ ಪ್ರಕಾಶ್ ಮನವಿ ಮಾಡಿದರು.

ಇದನ್ನೂ ಓದಿ: ಬೆಂಗಳೂರಲ್ಲಿ ಪಟಾಕಿ ಅಕ್ರಮ ಮಾರಾಟ, ದಾಸ್ತಾನು: 56 ಪ್ರಕರಣ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.