ETV Bharat / state

ಶಿವಮೊಗ್ಗ: ಹೊತ್ತಿ ಉರಿದ ಆಯನೂರಿನ ಬೇಕರಿ - Fire In Bakery - FIRE IN BAKERY

ಶಿವಮೊಗ್ಗ ತಾಲೂಕಿನ ಆಯನೂರು ಗ್ರಾಮದ ಎಸ್​ಎಲ್​ವಿ ಅಯ್ಯಂಗಾರ್​ ಬೇಕರಿಯಲ್ಲಿ ಇಂದು ಮಧ್ಯಾಹ್ನ ಬೆಂಕಿ ಅವಘಡ ಸಂಭವಿಸಿತು. ಬೇಕರಿಯಲ್ಲಿರುವ ಸಿಲಿಂಡರ್ ಸ್ಪೋಟಗೊಂಡಿರಬಹುದು ಎಂದು ಶಂಕಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು.

SLV Iyengar Bakery
ಎಸ್​ಎಲ್​ವಿ ಅಯ್ಯಂಗಾರ್​ ಬೇಕರಿ (ETV Bharat)
author img

By ETV Bharat Karnataka Team

Published : Aug 21, 2024, 5:21 PM IST

ಶಿವಮೊಗ್ಗ: ತಾಲೂಕಿನ ಆಯನೂರು ಗ್ರಾಮದ ಬೇಕರಿಯಲ್ಲಿ ಇಂದು ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಕರಕಲಾದವು.

ಹಣಗೆರೆ ಕಟ್ಟೆ ರಸ್ತೆಯಲ್ಲಿನ ಎಸ್​ಎಲ್​ವಿ ಅಯ್ಯಂಗಾರ್ ಬೇಕರಿಯಲ್ಲಿ ಅವಘಡ ಸಂಭವಿಸಿತು. ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ನಂದಿಸಲು ಸಿಬ್ಬಂದಿ ಯತ್ನಿಸಿದ್ದಾರೆ. ಅದು ಸಾಧ್ಯವಾಗದೇ ಹೋದಾಗ, ಎಲ್ಲರೂ ಬೇಕರಿ ಬಿಟ್ಟು ಹೊರ ಓಡಿದ್ದಾರೆ. ಈ ವೇಳೆ ಸಿಲಿಂಡರ್ ಸ್ಪೋಟವಾಗಿರಬಹುದೆಂದು ಶಂಕಿಸಲಾಗಿದೆ.

ಬೆಂಕಿಯಿಂದಾಗಿ ಸಿಲಿಂಡರ್ ಸೇರಿದಂತೆ ಇತರೆ ವಸ್ತುಗಳು ಮೂರು ಸಲ ಸ್ಫೋಟಗೊಂಡಿವೆ. ಸ್ಪೋಟಕ್ಕೆ ಸ್ಥಳೀಯರು ಹೆದರಿ ಓಡಿ ಹೋಗಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಬೆಂಕಿ ನಂದಿಸಿದ್ದಾರೆ.

ತಪ್ಪಿದ ಭಾರೀ ಅನಾಹುತ: ಸ್ಪೋಟಗೊಂಡ ಬೇಕರಿಯ ಎದುರಿಗೆ ಪೆಟ್ರೋಲ್ ಬಂಕ್ ಇದ್ದು, ಯಾವುದೇ ಅನಾಹುತವಾಗಿಲ್ಲ. ಅಕ್ಕಪಕ್ಕದ ಅಂಗಡಿಗಳಿಗೆ ಸ್ವಲ್ಪ ಹಾನಿಯಾಗಿದೆ. ಕುಂಸಿ ಪೊಲೀಸ್ ಠಾಣೆಯ ಪಿಐ ಹರೀಶ್ ಪಟೇಲ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ಚಲಿಸುತ್ತಿದ್ದ ಸಾರಿಗೆ ಬಸ್​ನಲ್ಲಿ ಬೆಂಕಿ; ತಪ್ಪಿದ ಅನಾಹುತ - Bus Catches Fire

ETV Bharat Logo

Copyright © 2024 Ushodaya Enterprises Pvt. Ltd., All Rights Reserved.