ETV Bharat / state

ಚಿಕ್ಕಮಗಳೂರು: ಮಾಜಿ ಸಚಿವ ಸಿಟಿ ರವಿ ವಿರುದ್ಧ ಪ್ರಕರಣ ದಾಖಲು - Hate Post on Social Media - HATE POST ON SOCIAL MEDIA

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ವಿರುದ್ಧ ಪೋಸ್ಟ್ ಹಾಕಿರುವ ಬಗ್ಗೆ ಸಿಟಿ ರವಿ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ.

ಮಾಜಿ ಸಚಿವ ಸಿಟಿ ರವಿ
ಮಾಜಿ ಸಚಿವ ಸಿಟಿ ರವಿ
author img

By ETV Bharat Karnataka Team

Published : Mar 21, 2024, 7:11 PM IST

ಚಿಕ್ಕಮಗಳೂರು: ಮಾಜಿ ಸಚಿವ ಸಿಟಿ ರವಿ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲು ಮಾಡಲಾಗಿದೆ. ಇವರ ವಿರುದ್ದ ಕ್ರಮ ಕೈಗೊಳ್ಳುವಂತೆ ಮುಖ್ಯ ಚುನಾವಣಾಧಿಕಾರಿಯಿಂದ ಸೂಚನೆ ನೀಡಲಾಗಿದ್ದು, ಜಿಲ್ಲಾ ಚುನಾವಣಾ ಅಧಿಕಾರಿಗೆ ಸೂಚನೆ ನೀಡಲಾಗಿದೆ. ಸಿಟಿ ಅವರ (ಎಕ್ಸ್​​) ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಬಗ್ಗೆ ಕ್ರಮಕ್ಕೆ ಸೂಚನೆ ನೀಡಿದ್ದು, ಟ್ವಿಟ್ಟರ್​​ನಲ್ಲಿ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ವಿರುದ್ಧ ಪೋಸ್ಟ್ ಹಾಕಿರುವ ಬಗ್ಗೆ ಸಿಟಿ ರವಿ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ.

ನಗರ ಪೊಲೀಸ್ ಠಾಣೆಯಲ್ಲಿ ಸಿಟಿ ರವಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದ್ದು, ಸಹಾಯಕ ಚುನಾವಣಾಧಿಕಾರಿ ಜಯ ಲಕ್ಷ್ಮಮ್ಮ ದೂರಿನ ಹಿನ್ನೆಲೆ ಪ್ರಕರಣ ದಾಖಲು ಮಾಡಲಾಗಿದೆ. ಸಾಗರದ ಆಳವನ್ನ ಕಂಡು ಹಿಡಿಯಬಹುದು, ರಾಹುಲ್ ಗಾಂಧಿಯ ಹಿಂದೂಗಳ ಮೇಲಿನ ದ್ವೇಷವನ್ನ ಕಂಡು ಹಿಡಿಯಲಾಗದು ಎಂದು ಟ್ವಿಟರ್​​ನಲ್ಲಿ ರಾಹುಲ್ ಗಾಂಧಿ ವಿರುದ್ಧ ಸಿಟಿ ರವಿ ಸಂದೇಶ ಹಾಕಿದ್ದು, ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ನಗರ್ತಪೇಟೆ ಪ್ರತಿಭಟನೆ: ಪಿ.ಸಿ.ಮೋಹನ್, ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ ಸೇರಿ 43 ಜನರ ವಿರುದ್ಧ ಪ್ರಕರಣ

ಮತ್ತೊಂದೆಡೆ ಮೊಬೈಲ್ ಬಿಡಿ ಭಾಗಗಳ‌ ಮಾರಾಟಗಾರನ ಮೇಲೆ ಹಲ್ಲೆ ಖಂಡಿಸಿ ಬೆಂಗಳೂರಿನ ನಗರ್ತಪೇಟೆಯಲ್ಲಿ ಪ್ರತಿಭಟನೆ ನಡೆಸಿದ್ದ ಆರೋಪ ಸಂಬಂಧ ಮೂವರು ಸಂಸದರು, ಓರ್ವ ಶಾಸಕ ಸೇರಿದಂತೆ 43 ಮಂದಿ ವಿರುದ್ಧ ಹಲಸೂರು ಗೇಟ್​ಠಾಣೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚುನಾವಣಾ ಅಧಿಕಾರಿಗಳ ಸೂಚನೆ ಮೇರೆಗೆ ಇನ್ಸ್​​​ಪೆಕ್ಟರ್​ ಹನುಮಂತ ಕೆ.ಭಜಂತ್ರಿ ಅವರು ಸಂಸದರಾದ ಪಿ.ಸಿ.ಮೋಹನ್, ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ, ರಾಜ್ಯಸಭಾ ಸದಸ್ಯ, ಶಾಸಕ ಸಿ.ಕೆ.ರಾಮಮೂರ್ತಿ, ವಿಧಾನಪರಿಷತ್ ಸದಸ್ಯ ಸಪ್ತಗಿರಿಗೌಡ ಸೇರಿದಂತೆ 43 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಗರ್ತಪೇಟೆಯ ಸಿದ್ದಣ್ಣಗಲ್ಲಿಯಲ್ಲಿ ಮೊಬೈಲ್ ಬಿಡಿ ಭಾಗಗಳ ಮಾರಾಟ ಅಂಗಡಿ ಇಟ್ಟುಕೊಂಡಿದ್ದ ಮುಕೇಶ್ ತನ್ನ ಅಂಗಡಿಯಲ್ಲಿ ಭಕ್ತಿಗೀತೆ ಸೌಂಡ್ ಕಡಿಮೆ‌‌ ಮಾಡದ್ದಕ್ಕೆ ಯುವಕರ ಗುಂಪೊಂದು ಆಕ್ರೋಶಗೊಂಡು ಹಲ್ಲೆ‌ ನಡೆಸಿದ್ದರು.‌ ಬಳಿಕ ಮುಕೇಶ್ ನೀಡಿದ ದೂರಿನ ಮೇರೆಗೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಹಲ್ಲೆ ಖಂಡಿಸಿ ಬಿಜೆಪಿ ನಿಯೋಗ ಅನುಮತಿ ಪಡೆದುಕೊಳ್ಳದೇ ಸಿದ್ದಣ್ಣಗಲ್ಲಿಯಲ್ಲಿ ಸಾವಿರಾರು ಜನರನ್ನ ಜಮಾಯಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದರು. ಈ ವೇಳೆ‌, ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಇದೇ ವೇಳೆ ಪಿ.ಸಿ.ಮೋಹನ್, ಶೋಭಾ ಕರಂದ್ಲಾಜೆ ಹಾಗೂ ತೇಜಸ್ವಿ ಸೂರ್ಯ ಸೇರಿದಂತೆ ಇನ್ನಿತರರನ್ನು ವಶಕ್ಕೆ ಪಡೆದುಕೊಂಡು ಬಿಡುಗಡೆಗೊಳಿಸಲಾಗಿತ್ತು. ಸದ್ಯ ಸುಮೊಟೊ‌ ಪ್ರಕರಣ ದಾಖಲಿಸಿಕೊಂಡು 43 ಮಂದಿ ವಿರುದ್ಧ ಎಫ್ಐಆರ್ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.