ETV Bharat / state

ಮಹಿಳೆ ಮೇಲೆ ಬಿಎಂಟಿಸಿ ಕಂಡಕ್ಟರ್​ನಿಂದ ಹಲ್ಲೆ ಆರೋಪ: ಕಂಡಕ್ಟರ್ ವಿಚಾರಣಾ ಇತ್ಯರ್ಥ ಪೂರ್ವ ಅಮಾನತು - BMTC BUS CONDUCTOR - BMTC BUS CONDUCTOR

ಬಿಎಂಟಿಸಿ ಬಸ್​ನಲ್ಲಿ ಮಹಿಳೆ ಮೇಲೆ ಕಂಡಕ್ಟರ್ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಪ್ರಕರಣ ಸಂಬಂಧ ಆರೋಪಿತನ ವಿರುದ್ಧ ಶಿಸ್ತು ಕ್ರಮವನ್ನು ಕಾಯ್ದಿರಿಸಿ ಈ ಕೂಡಲೇ ಜಾರಿಗೆ ಬರುವಂತೆ ವಿಚಾರಣಾ ಇತ್ಯರ್ಥ ಪೂರ್ವ ಅಮಾನತಿನಲ್ಲಿಡಲಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.

ಮಹಿಳೆ ಮೇಲೆ ಬಿಎಂಟಿಸಿ ಕಂಡಕ್ಟರ್​ನಿಂದ ಹಲ್ಲೆ ಆರೋಪ: ಎಫ್​ಐಆರ್​ ದಾಖಲು

author img

By ETV Bharat Karnataka Team

Published : Mar 26, 2024, 5:14 PM IST

Updated : Mar 26, 2024, 8:40 PM IST

ಬೆಂಗಳೂರು: ಬಿಎಂಟಿಸಿ ಬಸ್​ನಲ್ಲಿ ಟಿಕೆಟ್ ಕೇಳಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ ಮಾಡಿರುವ ಆರೋಪ ಕಂಡಕ್ಟರ್ ವಿರುದ್ಧ ಕೇಳಿ ಬಂದಿದೆ. ಘಟನೆ ಇಂದು ಬೆಳಗ್ಗೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಡೈರಿ ಸರ್ಕಲ್ ಬಳಿ ನಡೆದಿದೆ. ಘಟನೆಯ ಎಲ್ಲಾ ದೃಶ್ಯಗಳು ಸಹ ಪ್ರಯಾಣಿಕರೊಬ್ಬರ ಮೊಬೈಲ್​ನಲ್ಲಿ ಸೆರೆಯಾಗಿವೆ. ಹಲ್ಲೆಗೊಳಗಾದ ತಂಜುಲಾ ದೂರಿನನ್ವಯ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 354- ಮಹಿಳೆಯ ಮೇಲೆ ಹಲ್ಲೆ, 323- ಉದ್ದೇಶಪೂರ್ವಕ ಹಲ್ಲೆ, 506- ಕ್ರಿಮಿನಲ್ ಉದ್ದೇಶದಿಂದ ಅಪರಾಧ, 509- ಮಹಿಳೆಯ ಘನತೆಗೆ ಅವಮಾನಕರ ರೀತಿ ನಡೆದುಕೊಳ್ಳುವ ಆರೋಪದಡಿ ಸಿದ್ದಾಪುರ ಪೊಲೀಸ್​ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಂಟಿಸಿ ಕಂಡಕ್ಟರ್ ಹೊನ್ನಪ್ಪರನ್ನ ಸಿದ್ದಾಪುರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಸ್​ನಲ್ಲಿ ನಡೆದಿದ್ದೇನು?: ಬಿಳೆಕಹಳ್ಳಿಯಲ್ಲಿ ಬಸ್ ಹತ್ತಿದ್ದ ದೂರುದಾರ ಮಹಿಳೆಗೆ ಟಿಕೆಟ್ ನೀಡಲು ಆಧಾರ್ ಕಾರ್ಡ್ ತೋರಿಸುವಂತೆ ಹೊನ್ನಪ್ಪ ಕೇಳಿದ್ದರು. ಆದರೆ ಮುಂದಿನ ಎರಡು ನಿಲ್ದಾಣಗಳು ಬಂದರೂ ಸಹ ಮಹಿಳೆ ತನ್ನ ಆಧಾರ್ ಕಾರ್ಡ್ ತೋರಿಸಿರಲಿಲ್ಲ. ಟಿಕೆಟ್ ಕ್ರಿಯೇಟಿಂಗ್ ಸ್ಟೇಜ್ ಮುಕ್ತಾಯ ಆಗುತ್ತದೆ, ಬೇಗ ಆಧಾರ್ ಕಾರ್ಡ್ ತೋರಿಸಿ ಅಥವಾ ಹಣ ಕೊಟ್ಟು ಟಿಕೆಟ್ ಖರೀದಿಸಿ ಎಂದು ಹೊನ್ನಪ್ಪ ಹೇಳಿದ್ದರು. ಇದರಿಂದ ಕೊಪಕೊಂಡ ಮಹಿಳೆ ಕಂಡಕ್ಟರ್​ಗೆ ಕಪಾಳಮೋಕ್ಷ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಕಂಡಕ್ಟರ್ ಹೊನ್ನಪ್ಪ ಮಹಿಳೆ ಮೇಲೆ ಹಲ್ಲೆ ಮಾಡಿದ್ದರು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಘಟನೆಯ ಕುರಿತು ವಿಷಾದ ವ್ಯಕ್ತಪಡಿಸಿರುವ ಬಿಎಂಟಿಸಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಮಹಿಳಾ ಪ್ರಯಾಣಿಕರ ಸುರಕ್ಷಿತಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ. ಸಂಸ್ಥೆಯು ಮಹಿಳೆಯರಿಗಾಗಿ ಬಸ್‌ಗಳಲ್ಲಿ ಪ್ರತ್ಯೇಕ ಆಸನ, ಪ್ರತ್ಯೇಕ ಬಾಗಿಲು, ಪ್ಯಾನಿಕ್ ಬಟನ್ ಅಳವಡಿಕೆ, ಸಿಸಿಟಿವಿ, ಮಾಹಿತಿ ಫಲಕಗಳ ಅಳವಡಿಕೆ, ಪ್ರಮುಖ ಬಸ್ ನಿಲ್ದಾಣಗಳಲ್ಲಿ ಮಹಿಳಾ ವಿಶ್ರಾಂತಿ ಕೊಠಡಿ, ಸಹಾಯವಾಣಿ ಸೇರಿದಂತೆ ಮಹಿಳಾ ಪ್ರಯಾಣಿಕರು ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಸುವುದು ಸುರಕ್ಷಿತ ಎನ್ನುವ ಭಾವನೆ ಉಂಟಾಗಲು ಅಗತ್ಯವಿರುವ ಕ್ರಮಗಳನ್ನು ಕೈಗೊಂಡಿದೆ ಎಂದಿದೆ.

ಮಹಿಳಾ ಪ್ರಯಾಣಿಕರಿಗೆ ಸುರಕ್ಷಿತ ಹಾಗೂ ಸುಲಲಿತ ಪ್ರಯಾಣದ ಭಾವನೆಯನ್ನು ಮೂಡಿಸುವ ಸಲುವಾಗಿ ಎಲ್ಲಾ 27,000 ಚಾಲನಾ ಸಿಬ್ಬಂದಿಗಳಿಗೆ ಲಿಂಗ ಸಂವೇದನಾ (Gender Sensitization) ತರಬೇತಿ ನೀಡಲಾಗುತ್ತಿದೆ. ಸಂಸ್ಥೆಯು ಮಹಿಳಾ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಿದ್ದು, ಮಹಿಳಾ ಪ್ರಯಾಣಿಕರ ಮೇಲೆ ಯಾವುದೇ ತರಹದ ದೌರ್ಜನ್ಯ, ಅಸಭ್ಯ ವರ್ತನೆ ಮತ್ತು ಅಹಿತಕರ ಘಟನೆಗಳು ಕಂಡುಬಂದಲ್ಲಿ ತಪ್ಪಿತಸ್ಥರ ಮೇಲೆ ಕಠಿಣ ಶಿಸ್ತು ಕ್ರಮ ಜರುಗಿಸಲಾಗುತ್ತದೆ. ಆದ್ದರಿಂದ ಸದ್ಯದ ಪ್ರಕರಣದಲ್ಲಿ ಆರೋಪಿತ ಹೊನ್ನಪ್ಪ ವಿರುದ್ಧ ಶಿಸ್ತು ಕ್ರಮವನ್ನು ಕಾಯ್ದಿರಿಸಿ ಈ ಕೂಡಲೇ ಜಾರಿಗೆ ಬರುವಂತೆ ವಿಚಾರಣಾ ಇತ್ಯರ್ಥ ಪೂರ್ವ ಅಮಾನತಿನಲ್ಲಿಡಲಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಟ್ರಾಫಿಕ್ ಕಾನ್ಸ್​ಟೇಬಲ್​ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದ ಬೈಕ್ ಸವಾರ ಅರೆಸ್ಟ್ - Bike Rider Arrested

Last Updated : Mar 26, 2024, 8:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.