ಬೆಂಗಳೂರು: ಬಿಎಂಟಿಸಿ ಬಸ್ ನಿರ್ವಾಹಕ ಹಾಗೂ ಚಾಲಕನ ಮೇಲೆ ಕಿಡಿಗೇಡಿಗಳು ಹಲ್ಲೆಗೈದ ಘಟನೆ ಶನಿವಾರ ಸಂಜೆ ಟ್ಯಾನರಿ ರಸ್ತೆಯಲ್ಲಿ ನಡೆದಿದೆ.
ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು, ನಿರ್ವಾಹಕ ಶಿವಕುಮಾರ್ ಮತ್ತು ಚಾಲಕ ಗಗನ್ ಮೇಲೆ ಹಲ್ಲೆ ಮಾಡಿದ್ದು, ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಸ್ತೆಯಲ್ಲೇ ಹೊಡೆದಾಡುತ್ತಿರುವ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಯಲಹಂಕ ಹಾಗೂ ಶಿವಾಜಿನಗರ ಮಾರ್ಗದ ಬಸ್ ಅನ್ನು ಚಾಲಕ ಸಂಜೆ 5.25ರ ಸುಮಾರಿಗೆ ಟ್ಯಾನರಿ ರಸ್ತೆಯ ಕೆನರಾ ಬ್ಯಾಂಕ್ ನಿಲ್ದಾಣದಲ್ಲಿ ನಿಲ್ಲಿಸಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ ಆರೋಪಿಗಳು ವಾಹನದ ಮುಂಬಾಗಿಲಿನಿಂದ ಒಳ ಪ್ರವೇಶಿಸಿ ಗಗನ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲಾರಂಭಿಸಿದ್ದಾರೆ. ಈ ವೇಳೆ ತಡೆಯಲು ಮುಂದಾದ ಶಿವಕುಮಾರ್ ಅವರನ್ನೂ ಸಹ ಬಸ್‌ನಿಂದ ಹೊರಗಡೆ ಎಳೆದೊಯ್ದು ಹಲ್ಲೆ ಮಾಡಿದ್ದಾರೆ ಎಂದು ದೂರಲಾಗಿದೆ.
ಗಗನ್ ನೀಡಿರುವ ದೂರಿನ ಅನ್ವಯ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುವ ಆರೋಪಿಗಳ ವಿರುದ್ಧ ಡಿ.ಜೆ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ
ಇದನ್ನೂ ಓದಿ: ಪತ್ನಿ-ಪ್ರಿಯಕರನ ಖಾಸಗಿ ವಿಡಿಯೋ ಪ್ರಕಟಿಸುವುದಾಗಿ ಬೆದರಿಕೆ: ಪತಿ ವಿರುದ್ಧ ಎಫ್ಐಆರ್