ETV Bharat / state

ಹೆಣ್ಣು ಭ್ರೂಣ ಹತ್ಯೆ ಪ್ರಕರಣ: ಮೈಸೂರಿನಲ್ಲಿ 17 ಮಂದಿ ವಿರುದ್ಧ ಎಫ್ಐಆರ್ - Female Foeticide case - FEMALE FOETICIDE CASE

ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ 17 ಮಂದಿ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

female foeticide case
ಹೆಣ್ಣು ಭ್ರೂಣ ಹತ್ಯೆ ಪ್ರಕರಣ
author img

By ETV Bharat Karnataka Team

Published : May 2, 2024, 4:34 PM IST

ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಸಂಬಂಧ ಡಾ.ಎಸ್. ಗೋಪಿನಾಥ್ ಮಾಹಿತಿ

ಮೈಸೂರು: ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ 17 ಮಂದಿ ವಿರುದ್ಧ ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ದೂರು ನೀಡಿದ್ದಾರೆ.

ರಾಜ್ಯದ 5 ಜಿಲ್ಲೆಗಳಲ್ಲಿ ಸದ್ದು ಮಾಡಿದ್ದ ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಸಿದ್ದು, ಈ ತನಿಖೆಯ ವರದಿಯ ಆದೇಶದ ಮೇರೆಗೆ 17 ಮಂದಿ ವಿರುದ್ಧ ದೂರು ದಾಖಲಿಸಲಾಗಿದೆ. ದೂರು ದಾಖಲಿಸಲು ಸಿಐಡಿ ವರದಿಯಲ್ಲಿ ಸೂಚಿಸಿದ ಹಿನ್ನೆಲೆ ಮೈಸೂರಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯಾಧಿಕಾರಿ ಡಾ. ಎಸ್​. ಗೋಪಿನಾಥ್ 17 ಜನರ ವಿರುದ್ಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್ಐಆರ್ ದಾಖಲಿಸಲಾಗಿದೆ.

17 ಮಂದಿ ಯಾರು? ಶಿವನಂಜೇಗೌಡ, ನಯನ್ ಕುಮಾರ್, ಸುನಂದ, ಡಾ. ತುಳಸಿ ರಾಮ್, ಸಿದ್ದೇಶ್, ಪುಟ್ಟರಾಜು, ಎ. ಎಲ್ ಸತ್ಯ, ಅಭಿಷೇಕ್ ಗೌಡ, ಧನಂಜಯ್ ಗೌಡ, ಡಾ. ಚಂದನ್ ಬಲ್ಲಾಳ್, ನವೀನ್ ಕುಮಾರ್, ವಿರೇಶ್, ಮೀನಾ, ರಿಜ್ಞಾಖಾನಂ, ನಿಸಾರ್ ಅಹಮ್ಮದ್, ಮಂಜುಳ, ಉಷಾರಾಣಿ - ಆರೋಪಿತರು.

ಆರೋಪ ಏನು? ಶಿವನಂಜೇಗೌಡ, ನಯನ್ ಕುಮಾರ್, ಸುನಂದ ಎಂಬುವವರು ಲ್ಯಾಬ್ ಪರೀಕ್ಷೆಗೆ ಬರುತ್ತಿದ್ದ ಗರ್ಭಿಣಿಯರು ಹಾಗೂ ಡಾ. ತುಳಸಿರಾಮ್, ಸಿದ್ದೇಶ್, ಪುಟ್ಟರಾಜು, ಎ.ಎಲ್​​ ಸತ್ಯ, ಅಭಿಷೇಕ್ ಗೌಡ, ಧನಂಜಯ್ ಗೌಡ ಎಂಬುವವರು (ಗರ್ಭಿಣಿಯರನ್ನ ಕರೆತರುತ್ತಿದ್ದ ಮಧ್ಯವರ್ತಿಗಳು) ಗರ್ಭಿಣಿಯರನ್ನು ಮಂಡ್ಯ ಜಿಲ್ಲೆ ಬಳಿಯ ಹಾಡ್ಯ ಗ್ರಾಮದಲ್ಲಿದ್ದ ಆಲೆಮನೆಗೆ ಸ್ಕಾನಿಂಗ್​ಗೆ ಕರೆ ತರುತ್ತಿದ್ದರು.

ಸ್ಕ್ಯಾನಿಂಗ್​ನಲ್ಲಿ ಹೆಣ್ಣು ಮಗು ಎಂದು ಗೊತ್ತಾದ್ದಾರೆ ಡಾ. ಚಂದನ್ ಬಲ್ಲಾಳ್ ಅವರಿಗೆ ಸೇರಿದ ಮೈಸೂರಿನ ಮಾತಾ ಹಾಸ್ಪಿಟಲ್ ಹಾಗೂ ಆಯುರ್ವೇದಿಕ್ ಫೈಲ್ ಡೇಕೇರ್ ಸೆಂಟರ್​ನಲ್ಲಿ ಮೀನಾ, ರಿಜ್ವಾಖಾನಂ, ನಿಸಾರ್ ಅಹಮ್ಮದ್ ಹಾಗೂ ಮಂಜುಳಾ ಮೂಲಕ ಗರ್ಭಪಾತ ಮಾಡಿಸುತ್ತಿದ್ದರು. ಇಲ್ಲಿ ಗರ್ಭಪಾತ ಆದ ಭ್ರೂಣಗಳನ್ನು ನಿಸಾರ್ ಅಹಮ್ಮದ್ ವಿಲೇವಾರಿ ಮಾಡಿಸುತ್ತಿದ್ದ. ಹಾಗೂ, ಗರ್ಭಪಾತ ಮಾಡಿಸಿಕೊಳ್ಳಲು ಒಪ್ಪದ ಮಹಿಳೆಯರನ್ನು ಮೈಸೂರಿನ ಚಾಮುಂಡೇಶ್ವರಿ ಆಸ್ಪತ್ರೆಯಲ್ಲಿ ವೈದ್ಯರಿಗೆ ಹಾಗೂ ಮಾಲೀಕರಿಗೆ ಗೊತ್ತಾಗದಂತೆ ಉಷಾರಾಣಿ ಗರ್ಭಪಾತ ಮಾಡಿಸಿ, ಕಮಿಷನ್ ಹಣವನ್ನು ಮಧ್ಯವರ್ತಿಗಳಿಗೆ ನಗದು ರೂಪದಲ್ಲಿ ನೀಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಎರಡನೇ ಹಂತದ ಲೋಕಸಭೆ ಚುನಾವಣೆ: ಮನೆಯಿಂದಲೇ 34,110 ಮಂದಿ ಮತದಾನ - Vote from Home

ದೂರು ನೀಡಿರುವ ಡಾ. ಎಸ್. ಗೋಪಿನಾಥ್ ಹೇಳಿದ್ದೇನು? ಈ ಹೆಣ್ಣುಭ್ರೂಣ ಹತ್ಯೆ ಪ್ರಕರಣದ ಬಗ್ಗೆ ಸಿಐಡಿ ತನಿಖೆ ಕೈಗೊಂಡಿದ್ದು, ವರದಿ ಬಂದಿದೆ. ಈ ಪ್ರಕರಣ ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ನಗರ, ಮಂಗಳೂರಿನಲ್ಲಿ ನಡೆದಿರುವುದರಿಂದ ಒಟ್ಟಿಗೆ ಈ ಪ್ರಕರಣವನ್ನು ತನಿಖೆ ಮಾಡಲು ಮೈಸೂರು ನಗರದ ಉದಯಗಿರಿ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಪೊಲೀಸರು ಆ ಜಾಗವನ್ನು ಮಹಜರು ಮಾಡುತ್ತಾರೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.