ETV Bharat / state

ಬೆಂಗಳೂರು: ಬನಶಂಕರಿ ದೇವಸ್ಥಾನದಲ್ಲಿ ಭಕ್ತರು ಎಸೆದು ಹೋದ ವಸ್ತುಗಳಿಂದ ಗೊಬ್ಬರ ತಯಾರಿಕೆ

author img

By ETV Bharat Karnataka Team

Published : Feb 18, 2024, 7:37 AM IST

Updated : Feb 18, 2024, 9:24 AM IST

ಬನಶಂಕರಿ ದೇವಸ್ಥಾನದಲ್ಲಿ ಭಕ್ತರು ಬಳಸಿ ಬಿಟ್ಟು ಹೋದ ವಸ್ತುಗಳನ್ನುಪಯೋಗಿಸಿ ಗೊಬ್ಬರ ತಯಾರಿಸಲಾಗುತ್ತಿದೆ.

Fertilizer making by using materials which used in Banashankari temple
ಬನಶಂಕರಿ ದೇವಸ್ಥಾನದಲ್ಲಿ ಬಳಕೆಯಾದ ವಸ್ತುಗಳನ್ನುಯೋಗಿಸಿ ಗೊಬ್ಬರ ತಯಾರಿ

ಬೆಂಗಳೂರು: ನಗರದ ಪ್ರಸಿದ್ಧ 'ಬನಶಂಕರಿ ದೇವಸ್ಥಾನ'ಕ್ಕೆ ಬರುವ ಭಕ್ತರು ಒಮ್ಮೆ ಬಳಸುವ ವಸ್ತುಗಳಾದ ಆರತಿ ಬೆಳಗುವ ಅಡಕೆ ತಟ್ಟೆ, ನಿಂಬೆಹಣ್ಣು, ಹೂವು - ಹಣ್ಣುಗಳ ಕಸವನ್ನು ರಸವನ್ನಾಗಿ ಮಾಡುವ ಮಹತ್ವದ ಯೋಜನೆಗೆ ಬನಶಂಕರಿ ದೇವಾಲಯದ ಆಡಳಿತ ಮಂಡಳಿ ಮುಂದಾಗಿದೆ.

ತ್ಯಾಜ್ಯ ಬಳಸಿ ಗೊಬ್ಬರ ಮಾಡುವ ಯೋಜನೆ: ಬನಶಂಕರಿ ದೇವಾಲಯಕ್ಕೆ ಆಗಮಿಸುವ ಭಕ್ತರು ಅಡಕೆ ತಟ್ಟೆಯಲ್ಲಿ ಆರತಿ ಮಾಡುತ್ತಾರೆ. ಬಳಿಕ ಆ ತಟ್ಟೆಗಳನ್ನು ದೇವಾಲಯದ ಸುತ್ತಮುತ್ತಲೇ ಬಿಟ್ಟು ಹೋಗುತ್ತಿದ್ದಾರೆ. ಈ ಕಾರಣಕ್ಕೆ ಅಡಿಕೆ ತಟ್ಟೆ ಹಾಗೂ ಪ್ಲಾಸ್ಟಿಕ್ ಕವರ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡುವಂತಿಲ್ಲ ಎಂದು ಬನಶಂಕರಿ ದೇವಾಲಯದ ಆಡಳಿತ ಮಂಡಳಿ ಸೂಚನೆಯನ್ನು ನೀಡಿದ್ದರೂ ಸಹ ಕೆಲ ಜನರು ಅಲಲ್ಲಿ ಚೆಲ್ಲಾಪಿಲ್ಲಿಯಾಗಿ ಬಿಸಾಡುತ್ತಿರುವುದು ಕಂಡು ಬರುತ್ತಿದೆ. ಅದಕ್ಕಾಗಿ ದೇವಾಲಯದ ಆವರಣದಲ್ಲಿ ಎಸೆಯುತ್ತಿರುವ ಕಸವನ್ನು ಬಳಸಿಕೊಂಡು ಗೊಬ್ಬರ ಮಾಡುವ ಯೋಜನೆಯನ್ನು ಆಡಳಿತ ಮಂಡಳಿ ಕೈಗೆತ್ತಿಕೊಂಡಿದೆ.

ಸ್ವಚ್ಛತೆ ಕಾಪಾಡಲು ಇದೊಂದು ಮಾರ್ಗ: ದೇವಾಲಯಕ್ಕೆ ಆಗಮಿಸುವ ಭಕ್ತರು ಬಳಸುವಂತಹ ಏಕ ಬಳಕೆ ವಸ್ತುಗಳಾದ ಅಡಿಕೆ ತಟ್ಟೆ ಹಾಗೂ ಪೂಜಾ ಸಾಮಾಗ್ರಿಗಳ ಕೆಜಿಗಟ್ಟಲೆ ತ್ಯಾಜ್ಯ ದೇಗುಲದ ಆವರಣದಲ್ಲಿ ಸಂಗ್ರಹವಾಗುತ್ತಿತ್ತು. ಇದರಿಂದ ದೇವಾಲಯದ ಆವರಣದಲ್ಲಿ ಕಸದ ರಾಶಿಯೇ ಕಾಣುತ್ತಿತ್ತು. ಸುತ್ತಮುತ್ತ ಸ್ವಚ್ಛತೆ ಕಾಪಾಡಲು ಹರಸಾಹಸ ಪಡುವಂತಾಗುತ್ತಿತ್ತು.

ಗೊಬ್ಬರ ಮಾರಾಟ ಹಣ ದೇಗುಲಕ್ಕೆ ಬಳಕೆ: ದೇಗುಲದ ಆಡಳಿತ ಮಂಡಳಿಯ ಆವರಣದಲ್ಲಿ ಸಂಗ್ರಹವಾದ ತ್ಯಾಜ್ಯಗಳ ನಿರ್ವಹಣೆಗಾಗಿ ಎರಡು ತಿಂಗಳಿನಿಂದ ಘನತ್ಯಾಜ್ಯ ಸಂಸ್ಕರಣಾ ಘಟಕವನ್ನು ಆರಂಭಿಸಲಾಗಿದೆ. ಭಕ್ತರು ತಂದು ಬಳಸಿ ಎಸೆದು ಹೋದ ಅಡಿಕೆ ತಟ್ಟೆಗಳನ್ನು ಹಾಗೂ ಅನ್ನದಾಸೋಹಕ್ಕಾಗಿ ಬಳಸಿಕೊಂಡ ತರಕಾರಿ ಸಿಪ್ಪೆ ಹಾಗೂ ಉಳಿದ ಪದಾರ್ಥಗಳನ್ನು ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಹಾಕಲಾಗುತ್ತಿದೆ. ಈವರೆಗೆ ಸುಮಾರು 400 ಕೆ.ಜಿ ಗೊಬ್ಬರ ತಯಾರಿಸಲಾಗಿದೆ. ಇದನ್ನು ಕೆಜಿಗೆ 15 ರಿಂದ 20 ರೂಪಾಯಿಗೆ ರೈತರಿಗೆ ಮಾರಾಟ ಮಾಡಲಾಗುತ್ತಿದೆ. ಈ ಗೊಬ್ಬರವನ್ನು ಮಾರಾಟ ಮಾಡಿದ ಮೊತ್ತವನ್ನು ದೇವಾಲಯದ ಅಗತ್ಯ ಖರ್ಚಿಗೆ ಬಳಸಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ: ಕುತೂಹಲ ಕೆರಳಿಸುತ್ತದೆ ಭಿಂಬೆಟ್ಕಾ ಶಿಲಾ ವರ್ಣಚಿತ್ರಗಳು; ಮಾನವ ಇತಿಹಾಸದಲ್ಲಡಗಿವೆ ಹಲವು ರಹಸ್ಯಗಳು

''ದೇವಾಲಯಕ್ಕೆ ಆಗಮಿಸುವವರು ಅಡಿಕೆ ತಟ್ಟೆಗಳನ್ನು, ಪ್ಲಾಸ್ಟಿಕ್ ಕವರ್‌ಗಳನ್ನು ಅಲ್ಲಲ್ಲೇ ಎಸೆದು ಹೋಗುತ್ತಾರೆ. ತಟ್ಟೆಗಳಲ್ಲಿ ನಿಂಬೆ ಹಣ್ಣು ಬಳಸಿ ದೀಪ ಬೆಳಗುವುದರಿಂದ ಪುನರ್‌ ಬಳಕೆ ಸಾಧ್ಯವಾಗುತ್ತಿರಲಿಲ್ಲ. ಅವರು ಬಿಟ್ಟುಹೋದ ತಟ್ಟೆ, ಕವರ್‌ಗಳ ವಿಲೇವಾರಿ ಕೆಲಸ ದೊಡ್ಡ ಸಮಸ್ಯೆಯೇ ಆಗುತ್ತಿತ್ತು. ಈಗ ಗೊಬ್ಬರ ತಯಾರಿಸುತ್ತಿರುವುದರಿಂದ ಬಹಳಷ್ಟು ಸಮಸ್ಯೆ ಪರಿಹಾರವಾಗಲಿದೆ'' - ದೇವಾಲಯ ಆಡಳಿತ ಮಂಡಳಿ ಸದಸ್ಯೆ ದೀಪ.

ಇದನ್ನೂ ಓದಿ: ಮುಂದುವರಿದ 'ದೆಹಲಿ ಚಲೋ': ಪ್ರತಿಭಟನೆಯ ಚಿತ್ರಣ ಕಂಡಿದ್ದು ಹೀಗೆ

Last Updated : Feb 18, 2024, 9:24 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.