ದಾವಣಗೆರೆ : ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲವೆಂದು ಭದ್ರಾ ಕಾಲುವೆಗಿಳಿದು ಪ್ರತಿಭಟನೆ ರೈತರು ನಡೆಸಿದ್ದಾರೆ. ದಾವಣಗೆರೆ ನಗರದ ಕುಂದುವಾಡ ಬಳಿ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತ ಮುಖಂಡರಾದ ನಾಗೇಶ್ವರರಾವ್, ಕೊಳೆನಹಳ್ಳಿ ಸತೀಶ್ ಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ರೈತರು ಭಾಗಿಯಾಗಿದರು. ನೀರಿಲ್ಲದೆ ದಾವಣಗೆರೆಯಲ್ಲಿ ಕಾಲುವೆಗಳು ಬತ್ತಿವೆ. ಎಲ್ಲೆಡೆ ನೀರಿಗೆ ಬರ ಆವರಿಸಿದೆ. ಜನ ಜಾನುವಾರುಗಳಿಗೆ ಕುಡಿಯಲು ನೀರು ಸಿಗದೆ ಹೈರಾಣಾಗಿಸಿದೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ಭದ್ರಾ ಡ್ಯಾಂ ನಿಂದ 14 ದಿನ ನೀರು ಹರಿಸಿದರು ಕೂಡ ನೀರಿ ಮಾತ್ರ ಕಾಲುವೆಗಳಿಗೆ ಬಂದಿಲ್ಲ. ಹೀಗಾಗಿ ನೀರಿಲ್ಲದೆ ಜನ, ಜಾನುವಾರುಗಳ ಪರದಾಟಕ್ಕೆ ಕಾರಣವಾಗಿದೆ. ಪಂಪ್ ಸೆಟ್ ತೆರವು ಮಾಡಿ ಕೊನೆ ಭಾಗಕ್ಕೆ ನೀರು ಹರಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸಿಲ್ಲ. ಕೆಲಸ ಮಾಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಹೋಗಿ ಎಂದು ರೈತರು ಆಗ್ರಹಿಸಿದರು. ಸೋಮವಾರದ ಒಳಗೆ ನೀರು ಹರಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುತ್ತೇವೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ದಾವಣಗೆರೆ: ಬೇಸಿಗೆ ಮುನ್ನವೇ 126 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತತ್ವಾರ