ETV Bharat / state

ಸರ್ಕಾರಿ ಶಾಲೆಯಲ್ಲಿ ಓದಿ ರಾಜ್ಯಕ್ಕೆ ಫಸ್ಟ್ ಬಂದ ರೈತನ ಮಗಳು: IAS ಅಧಿಕಾರಿಯಾಗುವ ಕನಸು - SSLC Topper

author img

By ETV Bharat Karnataka Team

Published : May 9, 2024, 2:31 PM IST

ಎಸ್​​ಎಸ್​​ಎಲ್​​ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಅಂಕಿತಾ ಬಸಪ್ಪ ತನ್ನ ಮುಂದಿನ ಕನಸಿನ ಬಗ್ಗೆ ಮಾತನಾಡಿದರು.

ರೈತನ ಮಗಳು ರಾಜ್ಯಕ್ಕೆ ಫಸ್ಟ್
ರೈತನ ಮಗಳು ರಾಜ್ಯಕ್ಕೆ ಫಸ್ಟ್ (ETV Bharat)

ಎಸ್​ಎಸ್​ಎಲ್​ಸಿ ಟಾಪರ್​ ಅಂಕಿತಾ ಮನೆಯಲ್ಲಿ ಸಂಭ್ರಮ (ETV Bharat)

ಬಾಗಲಕೋಟೆ: ಎಸ್​​ಎಸ್​​ಎಲ್​​ಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಬಾಗಲಕೋಟೆ ಜಿಲ್ಲೆಯ ಬಡ ರೈತರೊಬ್ಬರ ಮಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ವಿದ್ಯಾರ್ಥಿನಿಯು ಸರ್ಕಾರಿ ವಸತಿ ಶಾಲೆಯಲ್ಲಿದ್ದುಕೊಂಡು ಅಭ್ಯಾಸ ಮಾಡಿ ಈ ಸಾಧನೆಗೈದಿದ್ದಾರೆ.

ಅಂಕಿತಾ ಬಸಪ್ಪ ಕೊಣ್ಣೂರ 625ಕ್ಕೆ 625 ಅಂಕ ಗಳಿಸಿದ ವಿದ್ಯಾರ್ಥಿನಿ. ಮುಧೋಳ ತಾಲೂಕಿನ ವಜ್ಜರಮಟ್ಟಿ ಗ್ರಾಮದ ರೈತ ಬಸಪ್ಪ ಎಂಬವರ ಪುತ್ರಿಯಾಗಿರುವ ಅಂಕಿತಾ 6ನೇ ತರಗತಿಯಿಂದ 10ನೇ ತರಗತಿವರೆಗೆ ಮೆಳ್ಳಿಗೇರಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ.

ತಂದೆ ಬಸಪ್ಪ ಅವರಿಗೆ ನಾಲ್ಕು ಎಕರೆ ಜಮೀನಿದ್ದು, ಕೃಷಿಯೇ ಕುಟುಂಬದ ಮೂಲ ಆದಾಯ. ತಲೆ ಮೇಲೊಂದು ಸರಿಯಾದ ಮನೆ ಇಲ್ಲ, ಗುಡಿಸಲಲ್ಲೇ ಇವರ ಜೀವನ. 1ರಿಂದ 5ನೇ ತರಗತಿವರೆಗೆ ವಜ್ಜರಮಟ್ಟಿಯಲ್ಲೇ ವ್ಯಾಸಂಗ ಮಾಡಿದ್ದ ಅಂಕಿತಾ ಬಳಿಕ 98 ಅಂಕಗಳೊಂದಿಗೆ ಮುರಾರ್ಜಿ ಶಾಲೆಗೆ ಆಯ್ಕೆಯಾಗಿದ್ದರು. 6ರಿಂದ 10ನೇ ತರಗತಿವರೆಗೆ ಮೆಳ್ಳಿಗೇರಿಯ ಮುರಾರ್ಜಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ.

ಬಡತನದ ಮಧ್ಯೆ ವಸತಿ ಶಾಲೆಯಲ್ಲಿದ್ದುಕೊಂಡು ಸತತವಾಗಿ ಅಭ್ಯಾಸ ಮಾಡಿ, ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ. ರಾಜ್ಯಕ್ಕೆ ಮೊದಲ ಸ್ಥಾನಗಳಿಸಿರುವ ವಿದ್ಯಾರ್ಥಿನಿ ಅಂಕಿತಾಗೆ ಮುಂದೆ ಐಎಎಸ್ ಅಧಿಕಾರಿಯಾಗುವ ಕನಸಿದೆ.

"ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿರುವುದು ತುಂಬಾ ಖುಷಿ ತಂದಿದೆ. ನನ್ನ ಪೋಷಕರು ಮತ್ತು ಗುರುಗಳಿಗೆ ನನಗಿಂತ ಹೆಚ್ಚು ಸಂತಸವಾಗಿದೆ. ಮುಂದೆ ಪಿಯುಸಿ ಸೈನ್ಸ್ ವಿಭಾಗಕ್ಕೆ ಸೇರಿಕೊಳ್ಳುತ್ತೇನೆ. ಬಳಿಕ ಐಎಎಸ್ ಅಧಿಕಾರಿಗಾಗಿ ಸಮಾಜ ಸುಧಾರಣೆ ಮಾಡುವೆ" ಎಂದು ಅಂಕಿತಾ ಸಂತಸ ವ್ಯಕ್ತಪಡಿಸಿದರು.

"ಮಗಳ ಆಸೆಯಂತೆ ಮುಂದೆ ಶಿಕ್ಷಣ ಕಲಿಸುತ್ತೇವೆ. ಎಷ್ಟೇ ಕಷ್ಟವಾದರೂ ಆಕೆಯ ಆಸೆ ಈಡೇರಿಸುತ್ತೇವೆ" ಎಂದು ಪಾಲಕರು ಹೇಳಿದರು.

ಅಂಕಿತಾ ಸಾಧನೆಗೆ ವಸತಿ ಶಾಲೆಯ ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದು, ವಸತಿ ಶಾಲೆಯಲ್ಲಿ 6 ರಿಂದ 9 ನೇ ತರಗತಿವರೆಗೆ ಅತೀ ಹೆಚ್ಚು ಅಂಕ ಪಡೆದು ಪ್ರಥಮ ದರ್ಜೆಯಲ್ಲಿ ಪಾಸಾಗುತ್ತಿದ್ದಳು. ಈಗ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿರುವುದು ಸಂತಸ ಉಂಟುಮಾಡಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ವಜ್ಜರಮಟ್ಟಿ ಗ್ರಾಮಕ್ಕೆ ಸಚಿವ ಆರ್.ಬಿ.ತಿಮ್ಮಾಪೂರ ಭೇಟಿ ನೀಡಿ, ಅಂಕಿತಾ ಅವರನ್ನು ಸನ್ಮಾನಿಸಿದರು. ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹಾಗೂ ಜಿ.ಪಂ ಸಿಇಒ ಶಶಿಧರ ಕುರೇರ ಅವರು ಸಹ ವಿದ್ಯಾರ್ಥಿನಿಯನ್ನು ಅಭಿನಂದಿಸಿದ್ದಾರೆ.

ಜಿಲ್ಲಾಡಳಿತದಿಂದ ಸಹಕಾರದ ಭರವಸೆ: "ನಮ್ಮ ಜಿಲ್ಲೆಯ ಮುಧೋಳ ತಾಲೂಕಿನ ವಸತಿ ಶಾಲೆಯಲ್ಲಿ ಅಭ್ಯಾಸ ಮಾಡಿರುವ ಅಂಕಿತಾ ಬಸಪ್ಪ 625 ಕ್ಕೆ 625 ಗಳಿಸಿ ಜಿಲ್ಲೆಯ ಪ್ರತಿಷ್ಠೆಯನ್ನು ಹೆಚ್ಚಿಸಿದೆ. ಅವಳ ಪ್ರಯತ್ನಕ್ಕೆ ಜಿಲ್ಲಾಡಳಿತದಿಂದ ಹೃತ್ಪೂರ್ವಕ ಶುಭಾಶಯಗಳು. ಅಂಕಿತಾ ಇಡೀ ಜಿಲ್ಲೆಗೆ ಮಾದರಿಯಾಗಿದ್ದಾಳೆ. ಈಗ 9ನೇ ತರಗತಿ ವ್ಯಾಸಂಗ ಮಾಡುತ್ತಿರುವ ಉಳಿದ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ. ಅಂಕಿತಾ ಬಸಪ್ಪ ಇನ್ನೂ ಉತ್ತಮವಾದ, ಉನ್ನತ ಸಾಧನೆ ಮಾಡಲು ಅವಳಿಗೆ ಕುಟುಂಬ ಎಷ್ಟು ಸಾಥ್​ ನೀಡುತ್ತೋ ಅಷ್ಟೇ ನಾವೂ ಕೂಡ ಜಿಲ್ಲಾಡಳಿತ ಪರವಾಗಿ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ. ಅವಳ ಮುಂದಿನ ವಿದ್ಯಾಭ್ಯಾಸ ಅಗ್ರಗಣ್ಯವಾಗಿರಲಿ" ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹಾರೈಸಿದರು.

ಇದನ್ನೂ ಓದಿ: ಎಸ್​ಎಸ್​ಎಲ್​ಸಿ ಫಲಿತಾಂಶ: ಶಿರಸಿಯ ನಾಲ್ವರು ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದಲ್ಲಿ ದ್ವಿತೀಯ, ತೃತೀಯ ಸ್ಥಾನ - SSLC TOPPERS

ETV Bharat Logo

Copyright © 2024 Ushodaya Enterprises Pvt. Ltd., All Rights Reserved.