ETV Bharat / state

ಬತ್ತಿದ ವರದಾ ನದಿಗೆ ಕೊಳವೆಬಾವಿಯಿಂದ ನೀರು ಹರಿಸುತ್ತಿರುವ ರೈತ - Borewell Water To River - BOREWELL WATER TO RIVER

ಹಾವೇರಿ ಜಿಲ್ಲೆ ರೈತರೊಬ್ಬರು ತಮ್ಮ ಕೊಳವೆ ಬಾವಿಯಿಂದ ಬತ್ತಿದ ವರದಾ ನದಿಗೆ ನೀರು ಹರಿಸುತ್ತಿದ್ದಾರೆ.

haveri
ಹಾವೇರಿ
author img

By ETV Bharat Karnataka Team

Published : Apr 8, 2024, 9:15 PM IST

ರೈತ ಪುಟ್ಟಪ್ಪ ಸೊಪ್ಪಿನ

ಹಾವೇರಿ: ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚುತ್ತಿದೆ. ಜಲಾಶಯಗಳು, ನದಿಗಳು, ಕೆರೆ ಕಟ್ಟೆಗಳು ಒಣಗುತ್ತಿವೆ. ಜೀವಜಲಕ್ಕಾಗಿ ಪ್ರಾಣಿ, ಪಕ್ಷಿಗಳು ಹಪಹಪಿಸುತ್ತಿವೆ. ಹಲವು ಗ್ರಾಮಗಳಲ್ಲಿ ಸರ್ಕಾರ ಕೊಳವೆಬಾವಿಗಳ ಮೂಲಕ ಜನರಿಗೆ ನೀರು ಪೂರೈಸುತ್ತಿದೆ. ಇನ್ನು ಕೆಲವೆಡೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಇನ್ನೊಂದೆಡೆ ಬಿಸಿಲ ಝಳಕ್ಕೆ ಬೆಳೆಗಳ ಸಂರಕ್ಷಣೆಗೆ ರೈತರು ಕೊರೆಸುತ್ತಿರುವ ಕೊಳವೆ ಬಾವಿಗಳ ಸಂಖ್ಯೆ ಅಧಿಕವಾಗುತ್ತಿದೆ. ಆದರೆ ನೀರು ಸಿಗುವುದು ವಿರಳ. ಸಾವಿರ ಅಡಿವರೆಗೆ ಕೊರೆಸಿದರೂ ನೀರಿನ ಬದಲು ಕಲ್ಲಿನ ಪುಡಿಯೇ ಏಳುತ್ತಿದೆ.

ಇಂತಹ ಪರಿಸ್ಥಿತಿಯಲ್ಲಿ ಜನಸಾಮಾನ್ಯರ, ಪ್ರಾಣಿ ಪಕ್ಷಿಗಳ ನೆರವಿಗೆ ಕೆಲವರು ಮುಂದಾಗಿದ್ದಾರೆ. ಅಂಥವರಲ್ಲಿ ಒಬ್ಬರು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೂಡಲ ಗ್ರಾಮದ ಪುಟ್ಟಪ್ಪ ಸೊಪ್ಪಿನ. ಪುಟ್ಟಪ್ಪ ಸೊಪ್ಪಿನ ಅವರು ಕಳೆದ ಕೆಲವು ದಿನಗಳಿಂದ ತಮ್ಮ ಕೊಳವೆ ಬಾವಿಯಿಂದ ವರದಾ ನದಿಗೆ ನೀರು ಬಿಡಲಾರಂಭಿಸಿದ್ದಾರೆ. ಇದರಿಂದ ನದಿಯಲ್ಲಿ ಚಿಕ್ಕ ಹೊಂಡ ನಿರ್ಮಾಣವಾಗಿದೆ.

ಈ ಹೊಂಡದಲ್ಲಿ ಜನರು ತಮ್ಮ ಜಾನುವಾರುಗಳ ಬಾಯಾರಿಕೆ ನೀಗಿಸುತ್ತಿದ್ದಾರೆ. ಕುರಿಗಾಹಿಗಳು ಕುರಿಗಳ ಹಿಂಡನ್ನು ತೆಗೆದುಕೊಂಡು ಬಂದು ಇಲ್ಲಿ ನೀರು ಕುಡಿಸುತ್ತಿದ್ದಾರೆ. ವಿಶೇಷ ದಿನಗಳಲ್ಲಿ ಜಾನುವಾರುಗಳ ಮೈ ತೊಳೆಯುತ್ತಿದ್ದಾರೆ. ಹೆಣ್ಣುಮಕ್ಕಳು ತಮ್ಮ ಬಟ್ಟೆಬರೆಗಳನ್ನು ಶುಚಿಗೊಳಿಸುತ್ತಿದ್ದಾರೆ. ಕಳೆದ 12 ವರ್ಷದ ಹಿಂದೆ ಬರಗಾಲ ಬಿದ್ದಾಗಲೂ ಸಹ ಪುಟ್ಟಪ್ಪ ಸೊಪ್ಪಿನ ನದಿಗೆ ನೀರು ಬಿಟ್ಟಿದ್ದರು.

''ಪ್ರಸ್ತುತ ವರ್ಷ ಭೀಕರ ಬರಗಾಲ ಶುರುವಾಗಿದೆ. ಜನ ಜಾನುವಾರುಗಳು, ಪ್ರಾಣಿ-ಪಕ್ಷಿಗಳು ಜೀವಜಲವಿಲ್ಲದೆ ಪರದಾಡುತ್ತಿವೆ. ಕಳೆದೊಂದು ತಿಂಗಳಿಂದ ವರದಾ ನದಿಗೆ ನೀರು ಬಿಡುತ್ತಿದ್ದೇನೆ. ನಮ್ಮ ಜಮೀನಿನಲ್ಲಿ ಮೂರು ಕೊಳವೆ ಬಾವಿಗಳಿದ್ದು, ಮೂರರಲ್ಲೂ ನೀರಿದೆ. ಅವುಗಳಲ್ಲಿ ಎರಡು ಕೊಳವೆಬಾವಿಗಳಿಂದ ಇದ್ದ ಬೆಳೆಗೆ ನೀರು ಹಾಯಿಸುತ್ತೇವೆ. ಉಳಿದಂತೆ ನದಿ ಸಮೀಪವಿದ್ದ ಕೊಳವೆ ಬಾವಿಯಿಂದ ನದಿಗೆ ನೀರು ಬಿಡುತ್ತಿದ್ದೇವೆ. ದಿನದ 24 ಗಂಟೆಗಳಲ್ಲಿ ಹೆಸ್ಕಾಂ 7 ಗಂಟೆ ಮಾತ್ರ ಮೂರು ಪೇಸ್ ವಿದ್ಯುತ್ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಪೂರೈಕೆ ತ್ರಿಪೇಸ್ ಇರುವವರೆಗೆ ನೀರು ಪೂರೈಸುತ್ತೇವೆ'' ಎಂದು ರೈತ ಹೇಳಿದ್ದಾರೆ.

ಇದನ್ನೂ ಓದಿ: ಕಾಡು ಪ್ರಾಣಿಗಳ ದಾಹ ನೀಗಿಸಲು ನದಿಗೆ ಬೋರ್​ವೆಲ್​ ನೀರು ಹರಿಸುವ ರೈತ ಪಾಪಣ್ಣ ಭಟ್ಟರು - Borewell Water To River

ETV Bharat Logo

Copyright © 2024 Ushodaya Enterprises Pvt. Ltd., All Rights Reserved.