ದಾವಣಗೆರೆ: ಭಾರತ-ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿ ಫೈನಲ್ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆಯ ಕ್ರೀಡಾಭಿಮಾನಿಗಳು ಟೀಂ ಇಂಡಿಯಾ ಗೆಲುವಿಗೆ ಶುಭ ಹಾರೈಸಿದ್ದಾರೆ.
"ಭಾರತ ಟೂರ್ನಿಯ ಎಲ್ಲಾ ಪಂದ್ಯಗಳಲ್ಲಿ ಗೆದ್ದು ಸೆಮಿಫೈನಲ್ಗೆ ಬಂದಿದೆ. ಇಲ್ಲಿಯೂ ಗೆದ್ದು ಫೈನಲ್‌ಗೇರಲಿದೆ. ತಂಡದ ಬ್ಯಾಟಿಂಗ್, ಬೌಲಿಂಗ್ ಲೈನಪ್ ಚೆನ್ನಾಗಿದೆ. ರೋಹಿತ್ ಶರ್ಮಾ ಒಳ್ಳೆಯ ಫಾರ್ಮ್‌ನಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ ಬೌಲಿಂಗ್ ಕೂಡಾ ಚೆನ್ನಾಗಿದೆ. ಹಾಗಾಗಿ ಈ ಬಾರಿ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲಿದೆ" ಎಂದು ಶೃತಿ ರಾಯ್ಕರ್ ಎಂಬವರು ಅಭಿಮಾನ ವ್ಯಕ್ತಪಡಿಸಿದರು.
ಮತ್ತೋರ್ವ ಅಭಿಮಾನಿ ಮಧುಶ್ರೀ ಮಾತನಾಡಿ, "ಭಾರತ ಫೈನಲ್‌ಗೇರಿ ಕಪ್ ಗೆಲ್ಲಲಿ" ಎಂದು ಆಶಿಸಿದರು.
"ಕೊಹ್ಲಿ ಕಾಕ ಕಳೆದ ಪಂದ್ಯಗಳಲ್ಲಿ ಚೆನ್ನಾಗಿ ಆಡಿಲ್ಲ. ಸೆಮಿಫೈನಲ್‌ನಲ್ಲಿ ಹಾಫ್ ಸೆಂಚುರಿ ಅಥವಾ ಸೆೆಂಚುರಿ ಹೊಡೆಯುವ ನಿರೀಕ್ಷೆ ಇದೆ. ಇಂದಿನ ಮ್ಯಾಚ್ ಗೆದ್ದು ಭಾರತ ಫೈನಲ್‌ಗೇರಲಿದೆ" ಎಂದು ನಿತಿನ್ ಹೇಳಿದರು. "ಈ ಬಾರಿ ಗೆದ್ದು ಸೇಡು ತೀರಿಸಿಕೊಳ್ಳುತ್ತೇವೆ'' ಎಂದು ವಿನಯ್ ಎಂಬವರು ತಿಳಿಸಿದರು.