ETV Bharat / state

ಕೌಟುಂಬಿಕ ಕಲಹ; ಪ್ರೀತಿಸಿ ಮದುವೆಯಾಗಿದ್ದ ಪತ್ನಿ ಕತ್ತು ಕೊಯ್ದು ಪೊಲೀಸರಿಗೆ ಶರಣಾದ ಗಂಡ - MURDER CASE

ತಾನೇ ತನ್ನ ಹೆಂಡತಿಯ ಕತ್ತು ಕೊಯ್ದು ಕೊಲೆ ಮಾಡಿರುವುದಾಗಿ ವ್ಯಕ್ತಿಯೊಬ್ಬ ಪೊಲೀಸ್​ ಠಾಣೆಗೆ ಬಂದು ಶರಣಾಗಿದ್ದಾನೆ.

husband kills wife
ಪತ್ನಿಯ ಕತ್ತು ಕೊಯ್ದು ಪೊಲೀಸರಿಗೆ ಶರಣಾದ ಗಂಡ (ETV Bharat)
author img

By ETV Bharat Karnataka Team

Published : Dec 5, 2024, 1:59 PM IST

Updated : Dec 5, 2024, 3:12 PM IST

ಮೈಸೂರು: ಕ್ಲುಲ್ಲಕ ಕಾರಣಕ್ಕೆ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯ ಕತ್ತು ಕೊಯ್ದು ಕೊಲೆ ಮಾಡಿದ ಪತಿಯೊಬ್ಬ ಸ್ವತಃ ತಾನೇ ಪೊಲೀಸ್​ ಠಾಣೆಗೆ ಬಂದು ಶರಣಾಗಿರುವ ಘಟನೆ ಇಲ್ಲಿನ ಲಕ್ಷ್ಮಿಕಾಂತ ನಗರದಲ್ಲಿ ನಡೆದಿದೆ. ಶೃತಿ (28) ಕೊಲೆಯಾದ ಗೃಹಿಣಿ. ಮನು ಕೊಲೆ ಮಾಡಿರುವ ಆರೋಪಿ ಪತಿ. ಈತ ಕೊಲೆ ಬಳಿಕ ಸ್ವತಃ ಪೊಲೀಸ್​ ಠಾಣೆಗೆ ಬಂದು ಶರಣಾಗಿದ್ದಾನೆ.

ವಿಷಯ ತಿಳಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ಸ್​ಪೆಕ್ಟರ್​ ಎ. ಮಲ್ಲೇಶ್ ನೇತೃತ್ವದಲ್ಲಿ ಘಟನಾ ಸ್ಥಳಕ್ಕೆ ಧಾವಿಸಿ ಸ್ಥಳ ಮಹಜರು ನಡಸಲಾಗಿದೆ. ಮೃತದೇಹವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶವಾಗಾರಕ್ಕೆ ಸ್ಥಳಾಂತರಿಸಿ ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.

''ಟೈಲ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮನುಗೆ ಐದು ವರ್ಷಗಳ ಹಿಂದೆ ಅಗ್ರಹಾರದ ತಮ್ಮ ಪುತ್ರಿ ಶೃತಿಯನ್ನು ಕೊಟ್ಟು ಮದುವೆ ಮಾಡಲಾಗಿತ್ತು. ಆದರೆ, ದಿನ ಕಳೆದಂತೆ ಅವರ ಕುಟುಂಬದಲ್ಲಿ ಒಡಕು ಶುರುವಾಗಿತ್ತು. ಹಿರಿಯರು ಅನೇಕ ಬಾರಿ ಬುದ್ಧಿ ಹೇಳಿ ಇಬ್ಬರನ್ನು ಒಂದುಗೂಡಿಸುವ ಕೆಲಸ ಮಾಡಿದ್ದರು. ಆದರೆ, ಇದಕ್ಕೆ ಕಿವಿಗೊಡದ ಮನು, ಪತ್ನಿಯ ಜೊತೆ ಜಗಳ ಮಾಡುತ್ತಿದ್ದ. ಮಂಗಳವಾರ ರಾತ್ರಿ ಎಂದಿನಂತೆ ಊಟ ಮಾಡಿ ಮಲಗಿದ್ದ ಶೃತಿಯನ್ನು, ಬುಧವಾರ ಬೆಳಗ್ಗೆ ಚಾಕುವಿನಿಂದ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ'' ಎಂದು ಆರೋಪಿಸಿ ಮೃತ ಶೃತಿಯ ಕುಟುಂಬದವರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಆರೋಪಿಯು ನ್ಯಾಯಾಂಗ ಬಂಧನದಲ್ಲಿದ್ದಾನೆ.

ಈ ಬಗ್ಗೆ ಪ್ರತಿಕ್ರಿಯೆಸಿದ ನಗರ ಕಾನೂನು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್, ''ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಮದುವೆ ಬಳಿಕ ಆಗಾಗ್ಗೆ ಇಬ್ಬರಲ್ಲಿ ಮನಸ್ತಾಪಗಳು ಬರುತ್ತಿದ್ದ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಮಂಗಳವಾರ ರಾತ್ರಿ ಕೂಡ ಜಗಳ ಮಾಡಿದ್ದರು. ಜಗಳದ ಬಳಿಕ ಮಲಗಿದ್ದರು. ಆದರೆ, ಬೆಳಗಿನ ಜಾವ ತಾನು ತನ್ನ ಪತ್ನಿಯ ಕುತ್ತಿಗೆ ಕೊಯ್ದು ಕೊಲೆ ಮಾಡಿರುವುದಾಗಿ ಸ್ವತಃ ಮನು ಹೆಬ್ಬಾಳ ಪೊಲೀಸ್​ ಠಾಣೆಗೆ ಬಂದು ಶರಣಾಗಿದ್ದಾನೆ. ಈ ಸಂಬಂಧ ಮೃತಳ ಸಂಬಂಧಿಕರು ನೀಡಿದ ದೂರಿನ ಅನ್ವಯ ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮೃತ ಮಹಿಳೆಯ ಶವ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಶವವನ್ನು ಹಸ್ತಾಂತರಿಸಲಾಗಿದೆ'' ಎಂದು ತಿಳಿಸಿದರು.

ಇದನ್ನೂ ಓದಿ: ಬೆಳಗಾವಿ: ಮಗಳ ಜೊತೆ ಮದುವೆಗೆ ನಿರಾಕರಿಸಿದ ತಾಯಿ, ಮಗನನ್ನು ಭೀಕರವಾಗಿ ಕೊಲೆಗೈದ ಯುವಕ

Last Updated : Dec 5, 2024, 3:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.