ETV Bharat / state

ಶಾಸಕ ಶಾಮನೂರು ಶಿವಶಂಕರಪ್ಪ ಹೆಸರಿನಲ್ಲಿ‌ ನಕಲಿ ಪತ್ರ ನೀಡಿ ಪಿಎ ಹುದ್ದೆ ಪಡೆದ ಚಾಲಾಕಿ; ಮಹಿಳೆ ವಿರುದ್ಧ ಎಫ್ಐಆರ್ - CHEATING CASE

author img

By ETV Bharat Karnataka Team

Published : Aug 25, 2024, 10:56 AM IST

ಕಾಂಗ್ರೆಸ್​ ಹಿರಿಯ ನಾಯಕ, ದಾವಣಗೆರೆ ಶಾಸಕ ಶಾಮನೂರ ಶಿವಶಂಕರಪ್ಪ ಅವರ ಹೆಸರಿನಲ್ಲಿ ನಕಲಿ ಲೆಟರ್​ಹೆಡ್​ ಸೃಷ್ಟಿಸಿ ಆಪ್ತ ಸಹಾಯಕರ ಹುದ್ದೆ ಪಡೆದ ಆರೋಪಿ ಮಹಿಳೆ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಲೇಡಿ ವಿರುದ್ಧ ಎಫ್ಐಆರ್
ಲೇಡಿ ವಿರುದ್ಧ ಎಫ್ಐಆರ್ (ETV Bharat)

ಬೆಂಗಳೂರು : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸಹಿ ಮತ್ತು ಲೆಟರ್ ಹೆಡ್ ದುರ್ಬಳಕೆ ಮಾಡಿಕೊಂಡು ಆಪ್ತ ಸಹಾಯಕರ ಹುದ್ದೆ ಪಡೆಯಲು ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ವಿಧಾನಸಭಾ ಸಚಿವಾಲಯದ ಅಧೀನ ಕಾರ್ಯದರ್ಶಿಗಳು ನೀಡಿರುವ ದೂರಿನನ್ವಯ ವಿನುತಾ ಕೆ.ಸಿ ಎಂಬುವರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಸೋಲೂರು‌ ಮೂಲದ ವಿನುತಾ ಕೆ.ಸಿ ಅವರನ್ನ ತಮ್ಮ ಆಪ್ತ ಸಹಾಯಕರನ್ನಾಗಿ ನೇಮಿಸುವಂತೆ ಶಾಸಕರು ಮನವಿ ಮಾಡಿರುವಂತೆ ಅವರ ಸಹಿ ಇರುವ ಲೆಟರ್ ಹೆಡ್ಅನ್ನ ವಿಧಾನಸಭಾ ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಶಾಮನೂರು ಶಿವಶಂಕರಪ್ಪ ಅವರೇ ನೀಡಿರುವ ಪತ್ರವೆಂದು ಭಾವಿಸಿದ್ದ ಸಚಿವಾಲಯ ಅದರಂತೆ ಆಪ್ತ ಸಹಾಯಕರನ್ನಾಗಿ ನೇಮಿಸಿ ಆದೇಶಿಸಿತ್ತು. ಬಳಿಕ ತಾವು ಪತ್ರ ನೀಡಿಲ್ಲ, ಅದು ನಕಲಿ ಎಂದು ಶಾಸಕರು ವಿಧಾನಸಭಾ ಸಚಿವಾಲಯದ ಗಮನಕ್ಕೆ ತಂದಿದ್ದಾರೆ.

ಸದ್ಯ ವಿಧಾನಸಭಾ ಸಚಿವಾಲಯದ ಅಧೀನ ಕಾರ್ಯದರ್ಶಿ ಲಲಿತಾ ಅವರು ನೀಡಿರುವ ದೂರಿನನ್ವಯ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಒಂದೇ ದಿನ 779 ಡ್ರಂಕ್ ಅಂಡ್ ಡ್ರೈವ್ ಪ್ರಕರಣ ದಾಖಲಿಸಿದ ಸಂಚಾರ ಪೊಲೀಸರು - DRUNK AND DRIVE CASES

ETV Bharat Logo

Copyright © 2024 Ushodaya Enterprises Pvt. Ltd., All Rights Reserved.