ETV Bharat / state

ಗೋಕಾಕ್​ನಲ್ಲಿ ನಕಲಿ ನೋಟು ಜಾಲ ಪತ್ತೆ: ಐವರು ಆರೋಪಿಗಳ ಬಂಧನ - Fake Currency Notes

ಬಂಧಿತ ಆರೋಪಿಗಳಿಂದ 100, 500 ರೂ. ಮುಖಬೆಲೆಯ 6,792 ನಕಲಿ ನೋಟುಗಳು ಹಾಗೂ ನೋಟು ಪ್ರಿಂಟ್​ಗೆ ಬಳಸಿದ್ದ 5,23,900 ರೂ. ಮೌಲ್ಯದ ವಿವಿಧ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Fake currency network detected in Gokak: Police arrested five accused
ಗೋಕಾಕ್​ನಲ್ಲಿ ನಕಲಿ ನೋಟು ಜಾಲ ಪತ್ತೆ (ETV Bharat)
author img

By ETV Bharat Karnataka Team

Published : Jul 3, 2024, 1:22 PM IST

Updated : Jul 3, 2024, 4:19 PM IST

ಬೆಳಗಾವಿ: ಸಿನಿಮೀಯ ಮಾದರಿಯಲ್ಲಿ ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಜಾಲವನ್ನು ಬಲೆಗೆ ಬೀಳಿಸುವಲ್ಲಿ ಜಿಲ್ಲೆಯ ಗೋಕಾಕ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಗೋಕಾಕ್​ನಲ್ಲಿ ನಕಲಿ ನೋಟು ಜಾಲ ಪತ್ತೆ: ಐವರು ಆರೋಪಿಗಳ ಬಂಧನ (ETV Bharat)

ಜೂನ್ 29ರಂದು ಗೋಕಾಕ್​-ಬೆಳಗಾವಿ ರಸ್ತೆಯ ಕಡಬಗಟ್ಟಿ ಗ್ರಾಮದ ಬಳಿ ಗಸ್ತು ಪೊಲೀಸರು ಕಾರೊಂದನ್ನು ತಡೆದು ತಪಾಸಣೆ ಮಾಡಿದಾಗ 100, 500 ರೂ. ಮುಖಬೆಲೆಯ 6,792 ನಕಲಿ ನೋಟುಗಳು ಪತ್ತೆಯಾಗಿದ್ದವು. ಕೂಡಲೇ ಐವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಮೂಡಲಗಿ ತಾಲ್ಲೂಕಿನ ಅರಭಾವಿಯ ಅನ್ವರ್ ಮಹ್ಮದ್ ಸಲೀಂ ಯಾದವಾಡ, ಮಹಾಲಿಂಗಪುರದ ಸದ್ದಾಂ ಮುಸಾ ಯಡಹಳ್ಳಿ, ರವಿ ಚನ್ನಪ್ಪ ಹ್ಯಾಗಡಿ, ದುಂಡಪ್ಪ ಮಹಾದೇವ ಒನಶೆಣವಿ ಮತ್ತು ವಿಠ್ಠಲ ಹನುಮಂತ ಹೊಸಕೋಟಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

Arrested accused
ಬಂಧಿತ ಆರೋಪಿಗಳು (ETV Bharat)

ವಿಚಾರಣೆಯಲ್ಲಿ ತಮ್ಮ ಕೃತ್ಯದ ಬಗ್ಗೆ ಬಾಯ್ಬಿಟ್ಟ ಆರೋಪಿಗಳು, 1 ಲಕ್ಷ ರೂ. ಹಣಕ್ಕೆ 6 ಲಕ್ಷ ರೂ. ನಕಲಿ ನೋಟ್​ಗಳನ್ನು ನೀಡುತ್ತಿದ್ದ ಕುರಿತು ತಿಳಿಸಿದ್ದಾರೆ. ಸುಮಾರು 5,23,900 ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಅರಭಾವಿ ಗ್ರಾಮದ‌ ಮನೆಯೊಂದರಲ್ಲಿ ಖೋಟಾ ನೋಟು ಪ್ರಿಂಟ್ ಮಾಡಿ ಚಲಾವಣೆ ಮಾಡುತ್ತಿದ್ದರು. ಮುಧೋಳ, ಮಹಲಿಂಗಪುರ, ಗೋಕಾಕ್​, ಹಿಡಕಲ್, ಬೆಳಗಾವಿ, ಧಾರವಾಡ ಸೇರಿ ಮತ್ತಿತರ ಕಡೆಗಳಲ್ಲಿ ಈ ನೋಟುಗಳನ್ನು ಚಲಾಯಿಸಿ ವಂಚಿಸುತ್ತಿದ್ದುದು ತನಿಖೆಯಿಂದ ಗೊತ್ತಾಗಿದೆ. ಈ ಕುರಿತು ಗೋಕಾಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Arrested accused
ಬಂಧಿತ ಆರೋಪಿಗಳು (ETV Bharat)

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ‌.ಭೀಮಾಶಂಕರ ಗುಳೇದ ಪ್ರತಿಕ್ರಿಯಿಸಿ, "ಖೋಟಾ ನೋಟು ಪ್ರಿಂಟ್ ಮಾಡಿ ಚಲಾವಣೆ ಮಾಡುವ ಹಾಗೂ ಮನಿ ಡಬ್ಲಿಂಗ್ ಮಾಡಿ ಜಿಲ್ಲೆಯ ಹಲವೆಡೆ ಅಸಲಿ ನೋಟು ಎಂದು ನಂಬಿಸಿ ಮೋಸ ಮಾಡುತ್ತಿರುವುದು ತಿಳಿದುಬಂದಿದೆ. ಆರೋಪಿಗಳಿಂದ ನೋಟು ಪ್ರಿಂಟ್​ಗೆ ಬಳಸುತ್ತಿದ್ದ ಕಂಪ್ಯೂಟರ್, ಸಿಪಿಯು, ಪ್ರಿಂಟರ್, ಸ್ಕ್ರೀನಿಂಗ್ ಬೋರ್ಡ್, ಪೈಂಟ್, ಶೈನಿಂಗ್, ಸ್ಟೀಕರ್, ಡಿಕೋಟಿಂಗ್ ಪೌಡರ್, ಪ್ರಿಂಟಿಂಗ್ ಪೇಪರ್, ಕಟರ್ ಬ್ಲೇಡ್​ಗಳು, ಆರು ಮೊಬೈಲ್, ಒಂದು ಬಿಳಿ ಬಣ್ಣದ ಕಾರು ಸೇರಿದಂತೆ 5,23,900 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ತಿಳಿಸಿದರು.

"ಖೋಟಾ ನೋಟು ವಿಚಾರದಲ್ಲಿ ಮೋಸ ಹೋದವರು ದೂರು ನೀಡಬೇಕು. ಅದೇ ರೀತಿ ಇತರೆ ಜನರೂ ಕೂಡ ಎಚ್ಚೆತ್ತುಕೊಳ್ಳಬೇಕು. ನೋಟುಗಳನ್ನು ಸರಿಯಾಗಿ ಪರೀಕ್ಷಿಸಿಯೇ ವ್ಯವಹರಿಸಬೇಕು" ಎಂದು ಅವರು ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ: ದಕ್ಷಿಣ ಕನ್ನಡ: ಖೋಟಾ ನೋಟು ಪ್ರಕರಣದ ಆರೋಪಿಗಳಿಂದ ಮತ್ತಷ್ಟು ಮಾಹಿತಿ, ಲಕ್ಷಾಂತರ ರೂ. ಮೌಲ್ಯದ ಹಣ ಜಪ್ತಿ - Fake Note

Last Updated : Jul 3, 2024, 4:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.