ETV Bharat / state

ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣ: ಕೆಫೆ ಸೂಪರ್​ವೈಸರ್​ ನೀಡಿದ ದೂರಿನಲ್ಲೇನಿದೆ? - ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ

ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಟೆಲ್​ ಸೂಪರ್ವೈಸರ್ ನೀಡಿರುವ ದೂರಿನಲ್ಲಿ ಏನಿದೆ ಎಂಬುದು ನೋಡೊಣಾ ಬನ್ನಿ..

Explosion case  Rameswaram Cafe  Complaint from cafe supervisor  ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ  ಕೆಫೆ ಸೂಪರ್ವೈಸರ್ ನೀಡಿದ ದೂರು
ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣ
author img

By ETV Bharat Karnataka Team

Published : Mar 2, 2024, 1:20 PM IST

Updated : Mar 2, 2024, 2:34 PM IST

ಬೆಂಗಳೂರು : ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣದ ಕುರಿತು ಎಚ್ಎಎಲ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸ್ಫೋಟ ಸಂಭವಿಸಿರುವ ರಾಮೇಶ್ವರಂ ಕೆಫೆಯ ಫ್ಲೋರ್ ಸೂಪರ್​ವೈಸರ್​ ಕೆ.ವಿ. ರಾಜೇಶ್ ನೀಡಿರುವ ದೂರಿನನ್ವಯ ಎಚ್ಎಎಲ್ ಠಾಣಾ ಪೊಲೀಸರು ಐಪಿಸಿ ಸೆಕ್ಷನ್ 120B (ಕ್ರಿಮಿನಲ್ ಒಳಸಂಚಿನಿಂದ ಅಪರಾಧ ಕೃತ್ಯ), 324 (ಮಾರಣಾಂತಿಕ ಆಯುಧದಿಂದ ಗಾಯಗೊಳಿಸುವಿಕೆ), 307 (ಹತ್ಯೆ ಯತ್ನ), ಸ್ಫೋಟಕಗಳ ಕಾಯ್ದೆ ಹಾಗೂ UAPA (ಕಾನೂನುಬಾಹಿರ ಚಟುವಟಿಕೆ) ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೂರಿನಲ್ಲಿರುವ ಅಂಶವೇನು? : ಹೋಟೆಲ್ ಪ್ರತಿದಿನ ಬೆಳಗ್ಗೆ 6.00 ಗಂಟೆಗೆ ಪ್ರಾರಂಭವಾಗಿ ಮಧ್ಯರಾತ್ರಿ 1.00 ಗಂಟೆಯವರೆಗೂ ತೆರೆದಿರುತ್ತದೆ. 'ರಾಮೇಶ್ವರಂ ಕೆಫೆ' ಹೋಟೆಲ್ ಬೆಂಗಳೂರಿನಲ್ಲಿ ಪ್ರಸಿದ್ಧಿ ಪಡೆದಿದ್ದು, ಪ್ರತಿದಿನ ಸಾವಿರಾರು ಗ್ರಾಹಕರು ಬಂದು ಹೋಗುತ್ತಾರೆ. ಮಧ್ಯಾಹ್ನ 12 ರಿಂದ 3ರ ವರೆಗೆ ಹೆಚ್ಚಿನ ಗ್ರಾಹಕರಿರುತ್ತಾರೆ. ಮಾರ್ಚ್ 1ರಂದು ಬೆಳಗ್ಗೆ ಹೋಟೆಲ್ ಪ್ರಾರಂಭವಾಗಿದ್ದು, ಮಧ್ಯಾಹ್ನ 12:50 ರಿಂದ 1 ಗಂಟೆ ಸುಮಾರಿಗೆ ಗ್ರಾಹಕರು ಕುಳಿತುಕೊಳ್ಳುವ ಜಾಗದಲ್ಲಿ‌ರುವ ಹೋಟೆಲ್‌ನ ವಾಶ್ ಬೇಸಿನ್ ಸಮೀಪದಲ್ಲಿ ಭಾರಿ ಪ್ರಮಾಣದ ಸ್ಫೋಟ ಸಂಭವಿಸಿದೆ. ಸ್ಥಳದಲ್ಲಿದ್ದ ಗ್ರಾಹಕರು ಕುಸಿದು ಬಿದ್ದರು. ಹೋಟೆಲ್‌ನಲ್ಲಿದ್ದ ಗ್ರಾಹಕರು ಸ್ಫೋಟದ ಸುದ್ದಿಗೆ ಭಯಭೀತಗೊಂಡು ಓಡಲು ಪ್ರಾರಂಭಿಸಿದರು.

ಸ್ಫೋಟದ ರಭಸಕ್ಕೆ, ಹೋಟೆಲ್ ಹೊರಗೆ ಜಗುಲಿಗೆ ಹೊಂದಿಕೊಂಡಂತೆ ಹೊರಗಿನ ಜಾಗಕ್ಕೆ ಹಾಕಿದ್ದ ಟಾರ್ಪಲಿನ್ ಶೆಲ್ಮರ್ ಚಿದ್ರಗೊಂಡು, ಹೋಟೆಲ್ ಕಬ್ಬಿಣದ ಚಾವಣೆ ಜಖಂಗೊಂಡಿದೆ. ಗೋಡೆಗೆ ಆಳವಡಿಸಿದ ಗ್ಲಾಸುಗಳು ಪುಡಿಪುಡಿಯಾಗಿವೆ. ಆಗ ಫ್ಲೋರ್ ಮ್ಯಾನೇಜರ್ ಭಯಭೀತರಾಗಿ ಗಾಬರಿಯಿಂದ ಸ್ಫೋಟವಾದ ಸ್ಥಳದ ಸಮೀಪ ಹೋದಾಗ, ಅದೇ ಸಮಯಕ್ಕೆ ಹೋಟೆಲ್ ಕೆಲಸಗಾರರಾದ ಬಾಷಾ, ರಾಜೇಶ್, ಬಸವರಾಜು, ಅಮಿತ್, ನವೀನ್, ಬಸವಣ್ಣ, ಹರಿಹರನ್, ಶಿವ, ಜಿಯಾ, ಕಪಿಲ್ ಇನ್ನು ಮುಂತಾದವರು ಗಾಬರಿಯಿಂದ ಸ್ಫೋಟವಾದ ಸ್ಥಳಕ್ಕೆ ಬಂದರು.

ಸ್ಥಳದಲ್ಲಿ ಹೋಟೆಲ್‌ನ ಸಿಬ್ಬಂದಿಯಾದ ಫಾರೂಕ್ ಹುಸೇನ್ ಸೇರಿದಂತೆ ಐದಾರು ಜನ ಗ್ರಾಹಕರಿಗೆ ಗಾಯಗಳಾಗಿ ರಕ್ತ ಸುರಿಯುತ್ತಿದ್ದು, ಕೂಡಲೇ ಹೋಟೆಲ್ ಸಿಬ್ಬಂದಿ ಹಾಗೂ ಕೆಲ ಗ್ರಾಹಕರು ಗಾಯಾಳುಗಳನ್ನು ಪಕ್ಕಕ್ಕೆ ಕರೆದುಕೊಂಡು ಬಂದು ಆಸ್ಪತ್ರೆಗೆ ಸಾಗಿಸಿದ್ದಾರೆ. ಆನಂತರ ದೂರುದಾರರಾದ ರಾಜೇಶ್ ಅವರು ಸೂಕ್ಷ್ಮವಾಗಿ ಸ್ಥಳವನ್ನು ಪರಿಶೀಲಿಸಿದಾಗ 'ಜಗಲಿಯ ಕಬ್ಬಿಣದ ಹಿಲರ್​ಗೆ ಹಾಕಿದ ಟೈಲ್ಸ್ ಗಳೆಲ್ಲವೂ ಕಿತ್ತು ಬಂದಿದ್ದು, ಸ್ಥಳದಲ್ಲಿ ಕಬ್ಬಿಣದ ಬೋಲ್ಟ್ ನಟ್ಸ್, ವಾಶರ್ಸ್ ಬಿದ್ದಿರುವುದು ಹಾಗೂ ಟೈಲ್ಸ್ ಮೇಲೆ ಸ್ಫೋಟವಾಗಿರುವ ಕಲೆಗಳು ಇದ್ದು ಹೋಟೆಲ್ ಭಾವಣಿ ಸೇರಿದಂತೆ ಹಲವಾರು ಸ್ಥಳಗಳು ಸ್ಫೋಟದ ತೀವ್ರತೆಗೆ ಜಖಂ ಆಗಿರುವುದು ಕಂಡು ಬಂದಿರುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಘಟನೆಯನ್ನು ಪರೀಶೀಲಿಸಿದಾಗ ಯಾರೋ ದುಷ್ಕರ್ಮಿಗಳು ಹೆಚ್ಚು ಜನ ದಟ್ಟಣೆ ಇರುವ ‘ದಿ ರಾಮೇಶ್ವರಂ ಕೆಫೆ’ಯಲ್ಲಿ ಸ್ಫೋಟಿಸಿದರೆ ಹೆಚ್ಚಿನ ಹಾನಿಯಾಗುತ್ತದೆ ಎಂದು ಪೂರ್ವ ನಿಯೋಜಿತ ಸಂಚು ರೂಪಿಸಿ, ಬಾಂಬ್ ತಯಾರಿಸಿ ಅದನ್ನು ಹೋಟೆಲ್‌ನಲ್ಲಿ ಹೆಚ್ಚು ಗ್ರಾಹಕರು ಇರುವ ಸ್ಥಳದಲ್ಲಿ ಇಟ್ಟು ಸ್ಫೋಟಿಸಿದ್ದಾರೆ. ಸಾರ್ವಜನಿಕರನ್ನ ಕೊಲ್ಲುವ ಉದ್ದೇಶಗಳಿಂದ ಈ ಕೃತ್ಯವನ್ನು ಎಸಗಿರುತ್ತಾರೆ ಎಂದು ದೂರಿನಲ್ಲಿ ನಮೂದಿಸಲಾಗಿದೆ.

ಹೋಟೆಲ್‌ನ ಫ್ಲೋರ್ ಮ್ಯಾನೇಜರ್ ಹರಿಹರನ್ ಎಂಬುವವರು ಸುಮಾರು 11-30 ಗಂಟೆ ಸಮಯದಲ್ಲಿ, ಉಪಹಾರವನ್ನು ತೆಗೆದುಕೊಂಡಿದ್ದಂತಹ ಒಬ್ಬ ವ್ಯಕ್ತಿಯು ತನ್ನ ಕೈಯಲ್ಲಿದ್ದ ಬ್ಯಾಗ್ ಅನ್ನು ಸ್ಫೋಟವಾದ ಸ್ಥಳದಲ್ಲಿ ಇಟ್ಟು ಹೋಗಿರುವುದನ್ನು ಗಮನಿಸಿದ್ದಾನೆ. ಸಾರ್ವಜನಿಕರನ್ನು ಸಾಯಿಸುವ ಉದ್ದೇಶದಿಂದ ಭಯೋತ್ಪಾದಕ ಕೃತ್ಯವೆಸಗುವ ಸಂಚು ರೂಪಿಸಿ, ಅದರಂತೆ ಬಾಂಬ್ ಅನ್ನು ತಯಾರು ಮಾಡಿ ಹೋಟೆಲ್‌ನಲ್ಲಿ ಇಟ್ಟು ಹೋಗಿದ್ದಾರೆ. ಬಾಂಬ್ ಸ್ಫೋಟದ ಕೃತ್ಯವೆಸಗಿದ ಆರೋಪಿಗಳನ್ನು ಪತ್ತೆ ಮಾಡಿ ಸೂಕ್ತ ಕಾನೂನು ರೀತ್ಯಾ ಕ್ರಮ ಜರುಗಿಸುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಟೈಮರ್​ ಫಿಕ್ಸ್​ ಮಾಡಿ ಸ್ಫೋಟ: ಬಾಂಬ್ ಬ್ಲಾಸ್ಟ್​ ಬಗ್ಗೆ ಗಂಭೀರ ತನಿಖೆ; ಸಿಎಂ ಸಿದ್ದರಾಮಯ್ಯ

ಮತ್ತೊಂದೆಡೆ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಸ್ಫೋಟದಿಂದ 9 ಜನರಿಗೆ ಗಾಯಗಳಾಗಿವೆ. ಹೋಟೆಲ್ ಸಿಬ್ಬಂದಿ ಫಾರುಖ್ (19), ಅಮೆಜಾನ್ ಕಂಪನಿ ಸಿಬ್ಬಂದಿ ದೀಪಾಂಶು (23), ಗ್ರಾಹಕರಾದ ಸ್ವರ್ಣಾಂಬ (49), ಮೋಹನ್ (41), ನಾಗಶ್ರೀ (35), ಬಲರಾಮ್ ಕೃಷ್ಣನ್ (31), ಮೋಮಿ (30), ನವ್ಯಾ (25), ಶ್ರೀನಿವಾಸ್​ (67) ಎಂಬುವರಿಗೆ ಗಾಯಗಳಾಗಿತ್ತು. ಗಾಯಾಳುಗಳನ್ನ ಬೆಂಗಳೂರಿನ ಮಣಿಪಾಲ್, ವೈದೇಹಿ ಮತ್ತು ಬ್ರೂಕ್​ಫೀಲ್ಡ್​ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

ಓದಿ:ಟೈಮರ್​ ಫಿಕ್ಸ್​ ಮಾಡಿ ಸ್ಫೋಟ: ಬಾಂಬ್ ಬ್ಲಾಸ್ಟ್​ ಬಗ್ಗೆ ಗಂಭೀರ ತನಿಖೆ; ಸಿಎಂ ಸಿದ್ದರಾಮಯ್ಯ

Last Updated : Mar 2, 2024, 2:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.