ETV Bharat / state

ಯಡಿಯೂರಪ್ಪನವರಿಂದ ಅನ್ಯಾಯವಾಗಿದೆ ಅಂತ ಬಹಳ ಜನ ನೋವು ತೋಡಿಕೊಳ್ಳುತ್ತಿದ್ದಾರೆ: ಕೆ. ಎಸ್. ಈಶ್ವರಪ್ಪ - Lok Sabha polls 2024

ಪುತ್ರ ಕಾಂತೇಶ್ ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ
ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ
author img

By ETV Bharat Karnataka Team

Published : Mar 14, 2024, 2:38 PM IST

ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ: ಯಡಿಯೂರಪ್ಪನವರು ನನಗೆ ಅನ್ಯಾಯ, ಮೋಸ ಮಾಡುತ್ತಿದ್ದಾರೆ ಎಂದು ಬಹಳ ಜನ ನೋವು ತೋಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ‌. ನೋವು ಅನುಭವಿಸುತ್ತಿರುವರ ಧ್ವನಿಯಾಗಬೇಕಲ್ಲವೆ? ಆ ಬಗ್ಗೆ ನಾವು ಚಿಂತನೆ ಮಾಡಬೇಕು. ಎಲ್ಲವನ್ನು ನಾನು ಈಗಲೇ ಹೇಳಲ್ಲ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ರಾಧಮೋಹನ ಅಗರವಾಲ್ ನನಗೆ ಫೋನ್ ಮಾಡಿ ಕಾಂತೇಶನಿಗೆ ವಿಧಾನ ಪರಿಷತ್ ಟಿಕೆಟ್​ ನೀಡುವುದಾಗಿ ಹೇಳಿದ್ದಾರೆ. ಇದರಿಂದ ನಾನು ಮಾತುಕತೆ ನಡೆಸಿ ಎಲ್ಲವನ್ನು ತಿಳಿಸುತ್ತೇನೆ ಎಂದರು.

ಟಿಕೆಟ್​ ಕೈತಪ್ಪುವಲ್ಲಿ ಜಾತಿ ಕಾರಣ ಇದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಎಂದೂ ಜಾತಿ ನಾಯಕನಾಗಲಿಲ್ಲ. ಅದು ನನಗೆ ಹೆಮ್ಮೆ. ಹಿಂದೂತ್ವದ ವಿಚಾರದ ಪ್ರತಿಪಾದನೆ ಮಾಡಿರುವುದು ನನಗೆ ಹೆಮ್ಮೆ. ಆದರೆ, ಇದು ಅನ್ಯಾಯ ಆಗಿದೆ ಅಂತ ನನಗೆ ಈವರೆಗೂ ಅನ್ನಿಸಿಲ್ಲ. ಇದರಿಂದ ನಾನು ಚರ್ಚೆ ಮಾಡುತ್ತೇನೆ ಎಂದರು.

ಯಡಿಯೂರಪ್ಪ ಮತ್ತೆ ಸಿಗಲ್ಲವೆಂದು ತಪ್ಪು ತಿದ್ದಲು ಹೋದೆ: ಬಿಎಸ್​ವೈ ಮತ್ತು ನಾನು ಒಂದೇ ತಟ್ಟೆಯಲ್ಲಿ ಊಟ ಮಾಡಿದವರು. ಹಾಗಾಗಿ, ಈ ಸಲುಗೆಯಿಂದ ಇಂತಿಂತಹ ತಪ್ಪುಗಳನ್ನು ನೀವು ಮಾಡುತ್ತಿದ್ದೀರು ಅಂತ ಅವರ ಕೆಲವು ದೋಷಗಳನ್ನು ನಾನು ನೇರವಾಗಿ ಹೇಳಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ, ಕಾರಣ ನಮಗೆ ಮತ್ತೊಬ್ಬ ಯಡಿಯೂರಪ್ಪನವರು ಸಿಗಲ್ಲ ಎಂದು ಹಲವು ಸಲ ಹೇಳಿದೆ. ಅವರ ಬಗ್ಗೆ ಬಂದ ಆರೋಪ ನನಗೆ ಇಷ್ಟವಾಗುತ್ತಿರಲ್ಲಿಲ್ಲ. ನಾನು ಅದೇ ರೀತಿ ಮೂರ್ನಾಲ್ಕು ಸಲ ಅವರಿಗೆ ಹೇಳಿದಾಗ ಅವರು, ಇದು ನನ್ನ ವೈಯಕ್ತಿಕವಾದ ವಿಚಾರ, ಯಾರೂ ತಲೆ ಹಾಕಬೇಡಿ ಎಂದರು. ಇದರಿಂದ ನಾನು ಹಿಂದೆ ಸರಿದುಕೊಂಡೆ. ಬಳಿಕ ಅವರು ಕೆಜೆಪಿಗೆ ಹೋಗಿದ್ದರು. ಆದರೆ, ನಾನು ಹೋಗಲಿಲ್ಲ. ಇದೆಲ್ಲ ಹಳೆ ವಿಚಾರ ಇರಬಹುದು. ಪಕ್ಷದ ಪರವಾಗಿ ನಿಷ್ಠೆ ಹೊಂದಿದ ನಾನು, ವ್ಯಕ್ತಿ ಪರವಾಗಿ ಹೋಗಲಿಲ್ಲ. ಇದರಿಂದ ಅವರಿಗೆ ಬೇಸರವಾಗಿರಬಹುದು ಎಂದು ಹಳೆ ವಿಚಾರಗಳನ್ನು ಪ್ರಸ್ತಾಪಿಸಿದರು.

ಬಸವರಾಜ ಬೊಮ್ಮಯಿ ಒತ್ತಾಯದಿಂದ ಸ್ಪರ್ಧಿಸುತ್ತಿದ್ದಾರೆ: ನಾನು ಶಾಸಕನಿದ್ದು, ಮಾಜಿ ಸಿಎಂ ಸಹ ಆಗಿರುವೆ. ಹಾಗಾಗಿ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಬಸವರಾಜ ಬೊಮ್ಮಯಿ ಚುನಾವಣಾ ಸಭೆಯಲ್ಲಿಯೇ ಹೇಳಿದ್ದರು. ಅಲ್ಲದೆ ಕಾಂತೇಶನಿಗೆ ಟಿಕೆಟ್ ನೀಡಿ​ ಹಾವೇರಿನಲ್ಲಿ ನಿಲ್ಲಿಸಿ ಎಂದಿದ್ದರು. ಬೊಮ್ಮಾಯಿ ದೆಹಲಿ ಸಭೆಯಲ್ಲೂ ಸಹ ಕಾಂತೇಶ್ ಪರ ಹೇಳುತ್ತೇನೆ ಎಂದಿದ್ದರು. ಈ ನಡುವೆ ಬೊಮ್ಮಾಯಿಗೆ ಒತ್ತಾಯ ಮಾಡಿ ಸ್ಪರ್ಧೆ ಮಾಡಿಸುತ್ತಿದ್ದಾರೆ ಎಂದು ಬಿಎಸ್​ವೈ ವಿರುದ್ಧ ಪರೋಕ್ಷವಾಗಿ ಈಶ್ವರಪ್ಪ ಕಿಡಿಕಾರಿದರು.

ಇದು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ನಳಿನ್​ ಕುಮಾರ್ ಕಟೀಲ್, ಪ್ರತಾಪ ಸಿಂಹ, ನಾನು ಹಾಗೂ ಯತ್ನಾಳ್ ಅವರು ಹಿಂದೂ ವಿರೋಧಿಗಳಿಗೆ ಉತ್ತರ ಕೊಡುತ್ತಿದ್ದಾರೆ ಎಂದರು. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಬದಿಗೆ ಸರಿಸುವ ಕೆಲಸವನ್ನು ಯಡಿಯೂರಪ್ಪ ಮಾಡಿದ್ದಾರೆ ಎಂಬ ಭಾವನೆ ಬಹಳ‌ ಜನಕ್ಕೆ ಬಂದಿದೆ. ಈಗ ಯಾವುದೇ ತೀರ್ಮಾನವನ್ನು ಹೇಳುವುದಿಲ್ಲ. ನಾಳೆ ಸಂಜೆ ಶಿವಮೊಗ್ಗದ ಬಂಜಾರ ಭವನದಲ್ಲಿ ನಡೆಸುವ ಸಭೆಯಲ್ಲಿ ಬಹಿರಂಗಪಡಿಸುವೆ ಎಂದು ಈಶ್ವರಪ್ಪ ತಿಳಿಸಿದರು.

ಇದನ್ನೂ ಓದಿ: ವರಿಷ್ಠರ ಸೂಚನೆಯಂತೆ ಲೋಕಸಭೆಗೆ ಸ್ಪರ್ಧೆ, ಸಮೀಕ್ಷೆ ವರದಿ ಆಧಾರದಲ್ಲಿ ಟಿಕೆಟ್ ಸಿಕ್ಕಿದೆ: ಬೊಮ್ಮಾಯಿ ಸ್ಪಷ್ಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.