ETV Bharat / state

ಯುವತಿಯರನ್ನು ಚುಡಾಯಿಸಿ ಕೀಟಲೆ ಮಾಡಿದ್ರೆ ಹುಷಾರ್! ದಾವಣಗೆರೆಗೆ ದುರ್ಗಾಪಡೆ ಎಂಟ್ರಿ - Davanagere Durgapade Police - DAVANAGERE DURGAPADE POLICE

ಇನ್ನು ಮುಂದೆ ದಾವಣಗೆರೆಯಲ್ಲಿ ಯುವತಿಯರಿಗೆ ಚುಡಾಯಿಸುವುದು, ಕೀಟಲೆ ಮಾಡುವಂತಿಲ್ಲ. ಇಂಥ ಚಟುವಟಿಕೆಗಳನ್ನು ತಡೆಯಲು ದುರ್ಗಾ ಪಡೆ ಪ್ರವೇಶಿಸಿದೆ.

durga-pade
ದುರ್ಗಾಪಡೆ (ETV Bharat)
author img

By ETV Bharat Karnataka Team

Published : Aug 22, 2024, 10:03 PM IST

ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಪ್ರತಿಕ್ರಿಯೆ (ETV Bharat)

ದಾವಣಗೆರೆ: ಯುವತಿಯರನ್ನು ಚುಡಾಯಿಸುವುದು, ಕಾಡಿಸುವುದು, ಕೀಟಲೆ ಮಾಡಿದರೆ ಹುಷಾರ್!. ರೋಡ್ ರೋಮಿಯೋಗಳಿಗೆ ಲಗಾಮು ಹಾಕಲೆಂದೇ ದಾವಣಗೆರೆಗೆ ದುರ್ಗಾ ಪಡೆ ಬಂದಿದೆ. ಅತ್ಯಾಚಾರ ಪ್ರಕರಣಗಳು ದೇಶದಲ್ಲಿ ಹೆಚ್ಚಾಗುತ್ತಿದ್ದು, ಯುವತಿಯರ ರಕ್ಷಣೆಗೆ ಪೊಲೀಸರು ಮುಂದಾಗಿದ್ದಾರೆ.

ಕಾನೂನು ಸುವ್ಯವಸ್ಥೆ ಹಾಳು ಮಾಡುವ ಪರೋಡಿಗಳ ಹೆಡೆಮುರಿ ಕಟ್ಟಲು ದುರ್ಗಾಪಡೆ ಸಜ್ಜಾಗಿದೆ. ಪಾರ್ಕ್ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಈ ತಂಡ ಯುವತಿಯರಲ್ಲಿ ಜಾಗೃತಿ ಮೂಡಿಸುತ್ತಿದೆ.

ಬೆಂಗಳೂರಿನಲ್ಲಿ ಯುವತಿ ಮೇಲೆ ಅತ್ಯಾಚಾರ ಯತ್ನ, ಪಶ್ಚಿಮ ಬಂಗಾಳದಲ್ಲಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಘಟನೆಗೆ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಅಲ್ಲದೇ ಈ ಘಟನೆಯನ್ನು ದೇಶದ ಜನರು ಒಕ್ಕೊರಲಿನಿಂದ ಖಂಡಿಸಿದ್ದರು.‌

ಎಸ್ಪಿ ಉಮಾ ಪ್ರಶಾಂತ್ ಅವರು ರೋಡ್ ರೋಮಿಯೋಗಳಿಗೆ ಲಗಾಮು ಹಾಕಿ ಹೆಡೆಮುರಿ ಕಟ್ಟಲು ಮತ್ತೆ ದುರ್ಗಾ ಪಡೆಯನ್ನು ಫೀಲ್ಡಿಗಿಳಿಸಿದ್ದಾರೆ. ನಗರದಲ್ಲಿ ಈಗಾಗಲೇ ದುರ್ಗಾ ಪಡೆ ಕೆಲಸ ಆರಂಭಿಸಿದೆ. ಪಾರ್ಕ್, ಸಾರ್ವಜನಿಕ ಪ್ರದೇಶಗಳಲ್ಲಿ ರೌಂಡ್ಸ್ ಹಾಕುತ್ತಿದೆ.‌ ಮಹಿಳೆಯರು ಹಾಗೂ ಶಾಲಾ, ಕಾಲೇಜು ವಿದ್ಯಾರ್ಥಿಗಳ ಸುರಕ್ಷತೆಯ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಪಿಎಸ್ಐ ಮಟ್ಟದ ಮಹಿಳಾ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಈ ಪಡೆಯಲ್ಲಿದ್ದಾರೆ.

ಕ್ಲಾಸ್ ಬಂಕ್ ಮಾಡಿ ಪಾರ್ಕ್​ನಲ್ಲಿ ಕುಳಿತ ಹುಡುಗ-ಹುಡುಗಿಯರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಲಾಗುತ್ತಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಅಶಿಸ್ತು ಪ್ರದರ್ಶಿಸಿ ಅಶಾಂತಿ ಸೃಷ್ಟಿಸುತ್ತಿರುವವರ ವಿರುದ್ಧ ಕ್ರಮಕ್ಕೆ ಎಸ್​ಪಿ ಮತ್ತು ಅವರ ತಂಡ ಸಿದ್ದವಾಗಿದೆ.

ನಗರದ ಶ್ರೀರಾಮ್ ಪಾರ್ಕ್, ವಿಶ್ವೇಶ್ವರಯ್ಯ ಪಾರ್ಕ್​ಗಳಲ್ಲಿ ಕಾಲಹರಣ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಕ್ಲಾಸ್ ತೆಗೆದುಕೊಂಡು ಬುದ್ಧಿವಾದ ಹೇಳಿ ಕಳುಹಿಸಲಾಗುತ್ತಿದೆ. ಕಾಲೇಜುಗಳ ಬಳಿ, ರಸ್ತೆಗಳಲ್ಲಿ ಸಂಚರಿಸುವ ವಿದ್ಯಾರ್ಥಿನಿಯರಿಗೆ, ಯುವತಿಯರಿಗೆ ಕೀಟಲೆ ಮಾಡುವ ಪುಂಡರ ಮೇಲೆ ದುರ್ಗಾಪಡೆ ಕಣ್ಣಿಟ್ಟಿದೆ. ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಮೂಲಕ ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ಸುರಕ್ಷತೆ ನೀಡಲು ಮುಂದಾಗಿದೆ.

ಶಾಲಾ-ಕಾಲೇಜು, ಬಸ್ ಸ್ಟ್ಯಾಂಡ್, ಉದ್ಯಾನವನ, ಒಂಟಿಯಾಗಿ ಮಹಿಳೆಯರು ಸಂಚರಿಸುವ ಪ್ರದೇಶಗಳ ಮೇಲೆ ದುರ್ಗಾ ಪಡೆ ಹಗಲು ರಾತ್ರಿ ರೌಂಡ್ಸ್ ಹಾಕುತ್ತಿದೆ. ಅಲ್ಲದೇ, ಶಾಲಾ-ಕಾಲೇಜುಗಳು, ಉದ್ಯಾನವನಗಳು, ವಿದ್ಯಾರ್ಥಿನಿ ನಿಲಯ ಹೀಗೆ ಸಾಕಷ್ಟು ಸ್ಥಳಗಳಿಗೆ ಭೇಟಿ ನೀಡಿ ಮಹಿಳೆಯರಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಪೋಕ್ಸೋ ಕಾಯ್ದೆಗಳ ಬಗ್ಗೆ, ಸರಗಳ್ಳರಿಂದ ಸುರಕ್ಷತೆಯ ಬಗ್ಗೆ, ಮಾದಕ ವಸ್ತುಗಳ ವ್ಯಸನದಿಂದಾಗುವ ದುಷ್ಪರಿಣಾಮಗಳ ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತಿದೆ. ಕಷ್ಟದ ಸಮಯದಲ್ಲಿ ತುರ್ತು ಸಹಾಯವಾಣಿ 112 ಬಳಕೆ ಬಗ್ಗೆಯೂ ತಿಳಿ ಹೇಳಲಾಗುತ್ತಿದೆ.‌

ದಾವಣಗೆರೆಯಲ್ಲಿ ಮಹಿಳೆ, ಯುವತಿಯರ, ಮಕ್ಕಳ ರಕ್ಷಣೆಗಾಗಿ ದುರ್ಗಾ ಪಡೆ ರಚಿಸಲಾಗಿದೆ. ಪಿಎಸ್ಐ ಸೇರಿದಂತೆ ಆರು ಜನ ಸಿಬ್ಬಂದಿ ಇದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲಾ, ಕಾಲೇಜುಗಳಿಗೆ ತೆರಳಿ ಜಾಗೃತಿ ಮೂಡಿಸಲಾಗುತ್ತಿದೆ. ಹಿರಿಯರಿಗೆ ಏನಾದರೂ ಸಮಸ್ಯೆಗಳಿದ್ರೆ ಅವುಗಳನ್ನೂ ಬಗೆಹರಿಸುವ ಪ್ರಯತ್ನ ನಡೆಯುತ್ತಿದೆ. ವಿದ್ಯಾರ್ಥಿನಿಯರ ನಿಲಯಗಳ ಮೇಲೂ ನಿಗಾವಹಿಸಲಾಗಿದೆ. ದುರ್ಗಾ ಪಡೆಗೆ ಸಮಾಜದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ ಎಂದರು.

ಇದನ್ನೂ ಓದಿ: ದಾವಣಗೆರೆ: ಖಾಕಿ ಬಲೆಗೆ ಬಿದ್ದ ಅಂತರ್​​ಜಿಲ್ಲಾ ಕಳ್ಳ - Thief Arrested

ETV Bharat Logo

Copyright © 2025 Ushodaya Enterprises Pvt. Ltd., All Rights Reserved.