ETV Bharat / state

ಬೆಳಕಿನ‌ ಹಬ್ಬಕ್ಕೆ ಬಗೆ ಬಗೆಯ ದೀಪಗಳ ಸಂಗಮ: ತಮಿಳುನಾಡಿನಿಂದ ಬಂದ ಹಣತೆಗಳಿಗೆ ಹೆಚ್ಚಿದ ಬೇಡಿಕೆ

ತಮಿಳುನಾಡಿನಿಂದ ಹುಬ್ಬಳ್ಳಿಗೆ ಪ್ರತಿ ವರ್ಷದಂತೆ ಈ ವರ್ಷವೂ ದೀಪಾವಳಿಗೆ ಹಣತೆಗಳು ಬಂದಿದ್ದು ಗ್ರಾಹಕರ ಗಮನ ಸೆಳೆಯುತ್ತಿವೆ.

Diwali Festival In Hubli:  Increased demand for Tamil Nadu deepam
ದೀಪಗಳನ್ನು ಖರೀದಿಸುತ್ತಿರುವ ಗ್ರಾಹಕರು (ETV Bharat)
author img

By ETV Bharat Karnataka Team

Published : Oct 24, 2024, 5:39 PM IST

ಹುಬ್ಬಳ್ಳಿ: ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಶುರುವಾಗಿದೆ. ಮಾರುಕಟ್ಟೆಯಲ್ಲಿ ಹಬ್ಬದ ಸಂಭ್ರಮವೂ ಕಳೆಕಟ್ಟಿದೆ. ಬಗೆ ಬಗೆಯ ಆಕಾಶಬುಟ್ಟಿ, ಬಣ್ಣ ಬಣ್ಣದ ಲೈಟಿಂಗ್ಸ್​, ದೇವರ ಪೂಜಾ ಸಾಮಗ್ರಿಗಳು ಗಮನ ಸೆಳೆಯುತ್ತಿವೆ. ಇವುಗಳ ಜೊತೆಗೆ ತಮಿಳುನಾಡಿನಿಂದ ಬಂದಿರುವ ವಿವಿಧ ಬಗೆಯ ಮಣ್ಣಿನ ಹಣತೆಗಳು ಕೂಡ ಗ್ರಾಹಕರನ್ನು ಕೇಂದ್ರೀಕರಿಸುತ್ತಿವೆ.

ದೀಪಾವಳಿಯ ಸಂಭ್ರಮ ಇಮ್ಮಡಿಗೊಳಿಸಲು ಪ್ರತಿವರ್ಷಂತೆ ಈ ವರ್ಷವೂ ತಮಿಳುನಾಡಿನ ಕೋಯಿಮತ್ತೂರು, ಮಧುರೈ, ಚೆನ್ನೈನಿಂದ ರಾಜ್ಯದ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ 60 ಲಕ್ಷಕ್ಕೂ ಅಧಿಕ ಬಗೆ ಬಗೆಯ ಹಣತೆಗಳು ಲಗ್ಗೆ ಇಟ್ಟಿವೆ.

ದೀಪಾವಳಿ ಸಂಭ್ರಮ (ETV Bharat)

ಮೊದಲೆಲ್ಲ ಮಣ್ಣಿನಿಂದ ತಯಾರಿಸಿದ ಮಣ್ಣಿನ ಹಣತೆಗಳಿಗೆ ಭಾರೀ ಬೇಡಿಕೆ ಇತ್ತು. ಆದ್ರೆ ಈಗ ಈ ಭಾಗದಲ್ಲಿ ಮಣ್ಣಿನ ಹಣತೆ ತಯಾರಿಸುವವರ ಸಂಖ್ಯೆ ಸಂಪೂರ್ಣವಾಗಿ ಕ್ಷೀಣಿಸಿದೆ. ಸ್ಥಳೀಯವಾಗಿ ತಯಾರಿಸುವ ಮಣ್ಣಿನ ಹಣತೆಗಳಿಗೂ ತಮಿಳುನಾಡಿನಿಂದ ಆಗಮಿಸುವ ಹಣತೆಗಳಿಗೂ ವ್ಯತ್ಯಾಸವಿದೆ. ಸ್ಥಳೀಯವಾಗಿ ಸಾಮಾನ್ಯ ಮಣ್ಣಿನಲ್ಲಿ ತಯಾರಿಸಿದ ಹಣತೆ ದೊರೆತರೆ, ತಮಿಳುನಾಡಿನಿಂದ ಬಂದಿರುವ ಹಣತೆಯನ್ನು ಹೆಂಚು ತಯಾರಿಕೆಗೆ ಬಳಸುವ ಮಣ್ಣಿನಿಂದ ಸಿದ್ಧಪಡಿಸಲಾಗುತ್ತದೆ. ಇವು ಸಾಮಾನ್ಯ ಮಣ್ಣಿಗಿಂತ ಹೆಚ್ಚು ಬಾಳಿಕೆ ಬರುವುದರಿಂದ ಇವುಗಳಿಗೆ ಬೇಡಿಕೆಯೂ ಸಹ ಹೆಚ್ಚಾಗಿದೆ. ಅದೇ ಕಾರಣಕ್ಕೆ ಈ ಸಲ ಭಾರಿ ಪ್ರಮಾಣದಲ್ಲಿ ಮಣ್ಣಿನ ಹಣತೆಗಳು ಮಾರುಕಟ್ಟೆ ಪ್ರವೇಶಿಸಿವೆ.

ಯುಗಾದಿ ಸಂಭ್ರಮ ಮುಗಿಯುತ್ತಿದ್ದಂತೆ ದೀಪಾವಳಿಗೆ ಬೇಕಾಗುವ ಹಣತೆ ತಯಾರಿಸುವುದು ವಾಡಿಕೆ. ಅದರಂತೆ ವಿವಿಧ ಶೈಲಿಯ ಹಣತೆ ಸಿದ್ಧಪಡಿಸಲಾಗಿದೆ. ಹುಬ್ಬಳ್ಳಿ ಸೇರಿದಂತೆ ದೊಡ್ಡ ದೊಡ್ಡ ನಗರಗಳಿಗೆ ಈಗಾಗಲೇ ಲಾರಿಗಳ ಮೂಲಕ ಸರಬರಾಜು ಮಾಡಲಾಗಿದ್ದು, ಮಾರುಕಟ್ಟೆಗೂ ಲಗ್ಗೆ ಇಟ್ಟಿವೆ. ಇಲ್ಲಿನ ಬಿಡಿ ಹಾಗೂ ಚಿಕ್ಕಪುಟ್ಟ ವ್ಯಾಪಾರಿಗಳು ಅವುಗಳನ್ನು ಖರೀದಿಸಿ ಹೋಲ್​ಸೇಲ್ ದರದಲ್ಲಿ ಸದ್ಯ ಮಾರಾಟ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ತಮಿಳುನಾಡು ಹಣತೆಗಳ ಮಾರಾಟ ಜೋರಾಗಿ ನಡೆಯುತ್ತಿದೆ.

ಕಳೆದ ಬಾರಿ ಉತ್ತರ ಕರ್ನಾಟಕ ಭಾಗದಲ್ಲಿಯೇ 35 ಲಕ್ಷಕ್ಕೂ ಅಧಿಕ ಹಣತೆಗಳು ಮಾರಾಟವಾಗಿದ್ದವು. ಇಲ್ಲಿ ಸ್ಥಳೀಯವಾಗಿ ಮಾರಾಟ ಮಾಡುವ ರಿಟೇಲರ್​ಗಳ ಹೆಚ್ಚಿನ ಬೇಡಿಕೆ ಹಿನ್ನೆಲೆಯಲ್ಲಿ ಈ ಬಾರಿ 60 ಲಕ್ಷಕ್ಕೂ ಅಧಿಕ ಹಣತೆಗಳು ಮಾರಾಟಕ್ಕೆ ಬಂದಿವೆ. ಸಾಮಾನ್ಯವಾಗಿ ಸ್ಥಳೀಯವಾಗಿ ಸಿಗುವ ಚಿಕ್ಕದಾಗಿರುವ ಡಜನ್ ಹಣತೆಗೆ 40 ರಿಂದ 50 ರೂಪಾಯಿ ಇದ್ದರೆ, ತಮಿಳುನಾಡಿನ ಹಣತೆಗಳು ಡಜನ್‌ಗೆ 25 ರಿಂದ 30 ಸಿಗುತ್ತವೆ. ಇನ್ನು ಇವರ ಬಳಿ ಹಣತೆಗಳ ವಿನ್ಯಾಸ, ಬಣ್ಣ ಹಾಗೂ ಆಕರ್ಷಣೆಗೆ ತಕ್ಕಂತೆ ದರಗಳಿವೆ. ನಕ್ಷತ್ರ ದೀಪ, ಗಣೇಶ ದೀಪ, ಲಕ್ಷ್ಮೀ ದೀಪ, ಲ್ಯಾಂಪ್‌ ಆಕಾರದ ದೀಪ ಸೇರಿದಂತೆ ನಾನಾ ತರಹದ ಹಣತೆಗಳು ಗ್ರಾಹಕರನ್ನು ಸೆಳೆಯುತ್ತಿವೆ.

ಈ ಹಣತಗಳೆಲ್ಲ ತಮಿಳುನಾಡಿನಿಂದ ಲಾರಿ ಹಾಗೂ ಟ್ರಕ್ ಮೂಲಕ ಇಲ್ಲಿಗೆ ಬರುತ್ತವೆ. ನಾವು ಖರೀದಿ‌ ಮಾಡಿ ಮಾರಾಟ ಮಾಡುತ್ತೇವೆ. ನಮ್ಮ ಹಣತೆಗಳಿಗಿಂತಲೂ‌ ತಮಿಳುನಾಡಿನಿಂದ ಬಂದ ಹಣತೆಗಳಿಗೆ ಬೇಡಿಕೆ ಇದೆ. ನಮಲ್ಲಿ 30 ರೂಪಾಯಿ ಡಜನ್​ನಿಂದ 100-200 ರೂಪಾಯಿವರೆಗೂ ಪ್ರತಿ ವರ್ಷ ಮಾರಾಟ ‌ಮಾಡುತ್ತೇವೆ. ಈಗ ಹಬ್ಬದ ಸಂಭ್ರಮ ಶುರುವಾಗಿದೆ. ಖರೀದಿ ಅಷ್ಟು ಜೋರಾಗಿಲ್ಲ. ಮುಂದೆ ಚೆನ್ನಾಗಿ ಮಾರಾಟವಾಗಲಿದೆ ಎನ್ನುತ್ತಾರೆ ಮಾರಾಟಗಾರರಾದ ರಫೀಕ್ ಹಾಗೂ ತಯಬ್.

ದೀಪಾವಳಿ‌ ಪವಿತ್ರ ಹಬ್ಬ. ಪ್ರತಿವರ್ಷ ಹೊಸ ಹಣತೆ ಖರೀದಿಸಿ ಹಣತೆ ಹಚ್ಚುತ್ತೇವೆ. ಈ ವರ್ಷವೂ ಕೂಡ ಹಬ್ಬವನ್ನು ಚೆನ್ನಾಗಿ ಮಾಡುತ್ತಿದ್ದೇವೆ. ತರಹೇವಾರಿ ಹಣತೆಗಳು ಬಂದಿದ್ದು, ಖರೀದಿಸುತ್ತಿದ್ದೇವೆ.‌ ದರ ಹೆಚ್ಚು ಇಲ್ಲ, ಕಡಿಮೆಯೂ ಇಲ್ಲ. ಎಲ್ಲರೂ ಖರೀದಿ ಮಾಡಬಹುದು ಎನ್ನುತ್ತಾರೆ ಗ್ರಾಹಕರಾದ ಶೋಭಾ ಬಡಿಗೇರ್.

ಇದನ್ನೂ ಓದಿ: ಈ ಬಾರಿಯ ದೀಪಾವಳಿ ಹಬ್ಬದ ಆಚರಣೆ ಬಗೆಗಿನ ಗೊಂದಲ ನಿವಾರಿಸಿದ ಜ್ಯೋತಿಷಿಗಳು: ಏನದು ಗೊಂದಲ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.