ETV Bharat / state

ಡೆಂಘೀಯಿಂದ ಮಗು ಸಾವು: ಧಾರವಾಡದ ಮುಮ್ಮಿಗಟ್ಟಿ ಗ್ರಾಮಕ್ಕೆ ಡಿಹೆಚ್​ಒ ಭೇಟಿ - Dengue Cases - DENGUE CASES

ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದಲ್ಲಿ ಡೆಂಘೀ ಹಾವಳಿಗೆ ಬಾಲಕಿ ಮೃತಪಟ್ಟಿದ್ದು, ಇಂದು ಡಿಹೆಚ್‌ಒ ಭೇಟಿ ನೀಡಿ ಪರಿಶೀಲಿಸಿದ್ದಾರೆ.

DHO
ಡಿಹೆಚ್​ಒ ಭೇಟಿ (ETV Bharat)
author img

By ETV Bharat Karnataka Team

Published : Jun 13, 2024, 10:47 PM IST

ಮೃತ ಬಾಲಕಿ ತಂದೆ ಬಸವರಾಜ ದೇಸಾಯಿ ಪ್ರತಿಕ್ರಿಯೆ (ETV Bharat)

ಧಾರವಾಡ: ಜಿಲ್ಲೆಯಲ್ಲಿ ಮುಂಗಾರು ಮಳೆ ಸ್ವಲ್ಪ ತಣ್ಣಗಾಗಿದೆ. ಈ ಬೆನ್ನಲ್ಲೇ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದೆ. ಕಳೆದ ಎರಡು ದಿನಗಳ ಹಿಂದೆ ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದಲ್ಲಿ 3 ವರ್ಷದ ಬಾಲಕಿ ಈ ರೋಗಕ್ಕೆ ಬಲಿಯಾಗಿದ್ದಳು. ಹೀಗಾಗಿ ಇಂದು ಗ್ರಾಮಕ್ಕೆ ಡಿಹೆಚ್ಒ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಜಿಲ್ಲೆಯ 81 ಪ್ರದೇಶಗಳಲ್ಲೂ ಡೆಂಘೀ ತೀವ್ರವಾಗಿದೆ. ಜನವರಿಯಿಂದ ಜೂನ್​ವರೆಗೆ 437 ಶಂಕಿತ ಪ್ರಕರಣಗಳು ಕಂಡುಬಂದಿದ್ದು, ಅವುಗಳಲ್ಲಿ 161 ಜನರಿಗೆ ಪಾಸಿಟಿವ್ ಬಂದಿದೆ. ಇನ್ನೂ ಹತ್ತು ದಿನಗಳ ಅಂಕಿ-ಅಂಶ ನೋಡಿದರೆ 41 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಮುಮ್ಮಿಗಟ್ಟಿ ಗ್ರಾಮದ ಬಾಲಕಿ ಮೃತಪಟ್ಟಿದ್ದಾಳೆ.

ಈ ಬಗ್ಗೆ ಬಾಲಕಿಯ ತಂದೆ ಬಸವರಾಜ ದೇಸಾಯಿ ಪ್ರತಿಕ್ರಿಯಿಸಿ, ''ಪದೇ ಪದೇ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿವೆ. ನನ್ನ ಮಗಳನ್ನು ಕಳೆದುಕೊಂಡು ಈಗಾಗಲೇ ದುಃಖದಲ್ಲಿದ್ದೇನೆ. ದಯವಿಟ್ಟು ಪ್ರಕರಣಗಳು ಹೆಚ್ಚಾಗದಂತೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಿ. ಇವರು ಏಪ್ರಿಲ್, ಮೇ, ಜೂನ್​ನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಆದರೆ ಈಗ ಬಂದು ಊರಿನಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಮಾಡುತ್ತಿದ್ದಾರೆ. ಆಗ ಈ ಬಗ್ಗೆ ಹೇಳಿದಾಗ, ಪೆಟ್ರೋಲ್ ಇಲ್ಲ ಎಂದು ಹಾರಿಕೆಯ ಉತ್ತರ ನೀಡುತ್ತಿದ್ದರು'' ಎಂದರು.

''ಪ್ರತೀ ಓಣಿಯಲ್ಲಿ ಇಪ್ಪತ್ತು ಜನರಿಗೆ ವೈರಲ್ ಫೀವರ್ ಇದೆ. ಆರೋಗ್ಯ ಇಲಾಖೆ ಸಿಬ್ಬಂದಿ ಯಾರೊಬ್ಬರೂ ಬಂದಿಲ್ಲ. ಆಶಾ ಕಾರ್ಯಕರ್ತೆಯರು ಮಾತ್ರ ಮನೆಮನೆಗೆ ಭೇಟಿ ನೀಡುತ್ತಿದ್ದರು. ನನ್ನ ಮಗು ಮೃತಪಟ್ಟಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ'' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿಹೆಚ್ಒ ಡಾ.ಶಶಿಪಾಟೀಲ್ ಮಾತನಾಡಿ, ''ಇದು ಶಂಕಿತ ಪ್ರಕರಣ. ಎಸ್​ಡಿಎಂ ಆಸ್ಪತ್ರೆಯಲ್ಲಿ ಮಗುವನ್ನು ದಾಖಲಿಸಲಾಗಿತ್ತು. ಮೇ 16ರಿಂದಲೂ ಒಂದೆರೆಡು ಫೀವರ್ ಕೇಸ್​ ಬರುತ್ತಿತ್ತು. ನಾವು ಅದನ್ನು ಕಂಪ್ಲೀಟ್ ಆಗಿ ಸರ್ವೇ ಮಾಡುತ್ತಿದ್ದೇವೆ. ಮಮ್ಮಿಗಟ್ಟಿಯಲ್ಲಿ ಒಟ್ಟು ನಾಲ್ಕು ಪ್ರಕರಣಗಳು ಪಾಸಿಟಿವ್ ಬಂದಿವೆ. ಉಳಿದಿರುವ ಪ್ರಕರಣಗಳು ರಿಕವರ್ ಆಗಿವೆ. ಈಗ ಏಳು ಶಂಕಿತ ಕೇಸ್​ಗಳಿವೆ. ಜಿಲ್ಲೆಯಾದ್ಯಂತ ಇಲ್ಲಿಯವರೆಗೆ 30 ಪ್ರಕರಣಗಳು ಕಂಡುಬಂದಿವೆ. ಇಲ್ಲಿ ಸೊಳ್ಳೆ ಉತ್ಪತ್ತಿಯಾದರೆ ಅವುಗಳ ನಿರ್ಮೂಲನೆ ಮಾಡಬೇಕಾಗುತ್ತದೆ. ಕಸ ಇದ್ದರೆ ತ್ಯಾಜ್ಯ ವಿಲೇವಾರಿ ಮಾಡಬೇಕಾಗುತ್ತದೆ. ಈಗಾಗಲೇ ಇಲ್ಲಿ ಮೂರು ಬಾರಿ ಫಾಗಿಂಗ್ ಮಾಡಲಾಗಿದೆ'' ಎಂದು ತಿಳಿಸಿದರು.

ಇದನ್ನೂ ಓದಿ : ಶಿವಮೊಗ್ಗದಲ್ಲಿ ಹೆಚ್ಚಿದ ಡೆಂಗ್ಯೂ ಭೀತಿ: ಸೋಂಕಿಗೆ ಆಸ್ಪತ್ರೆ ಸಿಬ್ಬಂದಿಯೇ ಬಲಿ - Hospital staff died due to dengue

ETV Bharat Logo

Copyright © 2025 Ushodaya Enterprises Pvt. Ltd., All Rights Reserved.