ETV Bharat / state

ಮಂಡ್ಯದಲ್ಲೂ ಡೆಂಗ್ಯೂ ಹೆಚ್ಚಳ; ಎರಡು ತಿಂಗಳಲ್ಲಿ 180 ಕೇಸ್ ಪತ್ತೆ- ಎಚ್ಚರಿಕೆ ಕೊಟ್ಟ ಡಿಹೆಚ್​ಒ ಮೋಹನ್ - dengue cases increased

author img

By ETV Bharat Karnataka Team

Published : Jul 2, 2024, 10:24 PM IST

ಮಂಡ್ಯ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಳವಾಗಿದ್ದು, ಮನೆಯ ಅಕ್ಕ ಪಕ್ಕದಲ್ಲಿ ನೀರು ನಿಲ್ಲದಂತೆ ಜನರಲ್ಲಿ ಅರಿವು ಮೂಡಿಸುವಲ್ಲಿ ಅಧಿಕಾರಿಗಳು ಮುಂದಾಗಿದ್ದಾರೆ.

Mandya
ಮಂಡ್ಯ (ETV Bharat)

ಡಿಹೆಚ್​ಓ ಡಾ ಮೋಹನ್ (ETV Bharat)

ಮಂಡ್ಯ : ಜಿಲ್ಲೆಯಲ್ಲಿ ಡೆಂಗ್ಯೂ ಹೆಚ್ಚಳವಾಗಿದ್ದು, ಎರಡು ತಿಂಗಳಲ್ಲಿ 180ಕ್ಕೂ ಹೆಚ್ಚು ಕೇಸ್ ಪತ್ತೆಯಾಗಿದೆ. ಮಂಡ್ಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಲರ್ಟ್ ಆಗಿದ್ದು, ಡೆಂಗ್ಯೂ ಪ್ರಕರಣ ಏರಿಕೆಯಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ.

ಈ ಕುರಿತು ಡಿಹೆಚ್​ಒ ಡಾ. ಮೋಹನ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೆ 1450 ಡೆಂಗ್ಯೂ ಪ್ರಕರಣಗಳ ಟೆಸ್ಟ್ ಮಾಡಲಾಗಿದೆ. ಅದರಲ್ಲಿ 180 ಪ್ರಕರಣಗಳು ಪಾಸಿಟಿವ್ ವರದಿಯಾಗಿವೆ. ಎಲ್ಲರಿಗೂ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಡೆತ್ ಆಗಿಲ್ಲ. ಡೆಂಗ್ಯೂ ಪ್ರಕರಣಗಳ ತಡೆಯಲು ಆರೋಗ್ಯ ಇಲಾಖೆಯಿಂದ ಗ್ರಾಮ ಸರ್ವೆ ಆರಂಭಿಸಲಾಗಿದೆ. ನೀರು ನಿಂತ ಜಾಗಗಳಲ್ಲಿ ಶುಚಿತ್ವ ಕಾಪಾಡಲು ಸೂಚನೆ‌ ನೀಡಲಾಗಿದೆ. ನಿಲ್ಲುವ ನೀರಿನಲ್ಲಿ ಸೊಳ್ಳೆಗಳ ಲಾರ್ವ ಪತ್ತೆಯಾಗಿದೆ ಎಂದರು.

ಮನೆಯ ಅಕ್ಕ-ಪಕ್ಕ ನೀರು ನಿಲ್ಲದಂತೆ ಜನರಲ್ಲಿ ಅರಿವು ಮೂಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಫ್ರಿಡ್ಜ್​, ಟ್ಯಾಂಕ್, ತೊಟ್ಟಿ ಸೇರಿ ಹಲವು ಸಾಮಗ್ರಿಗಳನ್ನು ಶುಚಿಯಾಗಿಟ್ಟುಕೊಳ್ಳುವ ಬಗ್ಗೆ ಹಾಗೂ ಸೊಳ್ಳೆ ನಿರ್ಮೂಲನೆ ಮಾಡಲು ಗ್ರಾಮದಲ್ಲಿ ಅರಿವು ಕಾರ್ಯ ಆರಂಭಿಸಿದ್ದು, ತುಂಬಾ ದಿನ ನೀರು ನಿಲ್ಲದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ರೋಗಿಗಳಲ್ಲಿ ಜ್ವರ, ಕಣ್ಣಿನ ಒಳ ಭಾಗದಲ್ಲಿ ನೋವು ಕಾಣಿಸಿಕೊಳ್ಳಲಿದೆ. ಹಳ್ಳಿಗಳಲ್ಲಿ ರಕ್ತ ಪರೀಕ್ಷೆ ಮೂಲಕ ಡೆಂಗ್ಯೂ ಪತ್ತೆ ಕಾರ್ಯ ಮಾಡಲಾಗುತ್ತಿದೆ. ಡೆಂಗ್ಯೂ ನಿರ್ಮೂಲನೆಗೆ ಆರೋಗ್ಯ ಇಲಾಖೆ ಸಕಲ ಸಿದ್ದತೆ ಮಾಡಿಕೊಂಡಿದೆ ಎಂದು ತಿಳಿಸಿದರು.

ಇದನ್ನೂ ಓದಿ : ಬೆಂಗಳೂರಿನಲ್ಲಿ ಡೆಂಗ್ಯೂಗೆ ಮತ್ತೊಂದು ಬಲಿ; ಮೃತರ ಸಂಖ್ಯೆ 3ಕ್ಕೇರಿಕೆ - Young Man Succumbed To Dengue

ETV Bharat Logo

Copyright © 2024 Ushodaya Enterprises Pvt. Ltd., All Rights Reserved.