ಧಾರವಾಡ: ಜುಲೈ 16 ರಿಂದ 19ರವೆಗೆ ಮೊಹರಂ ಹಬ್ಬದ ಆಚರಣೆಯ ಸಮಯದಲ್ಲಿ ಕಾನೂನು ಮತ್ತು ಸುವ್ಯಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಮದ್ಯಪಾನ, ಮದ್ಯ ಮಾರಾಟ ಮತ್ತು ಮದ್ಯ ಸಾಗಾಣಿಕೆಯನ್ನು ಜಿಲ್ಲಾಧಿಕಾರಿ ದಿವ್ಯಪ್ರಭು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜುಲೈ 16ರ ಸಂಜೆ 6 ಗಂಟೆಯಿಂದ ಜುಲೈ 18ರ ಬೆಳಗ್ಗೆ 6 ಗಂಟೆಯವರೆಗೆ ಧಾರವಾಡ ಗ್ರಾಮೀಣ, ಹುಬ್ಬಳ್ಳಿ ಗ್ರಾಮೀಣ ತಾಲೂಕು (ಅರಳಿಕಟ್ಟೆ ಗ್ರಾಮ ಹೊರತು ಪಡಿಸಿ), ಅಳ್ನಾವರ, ನವಲಗುಂದ, ಅಣ್ಣಿಗೇರಿ, ಕಲಘಟಗಿ ಮತ್ತು ಕುಂದಗೋಳ (ಯರಗುಪ್ಪಿ, ಯರಿನಾರಾಯಣಪೂರ, ಚಿಕ್ಕನರ್ತಿ, ಮುಳ್ಳೋಳ್ಳಿ, ಪಶುಪತಿಹಾಳ ಗ್ರಾಮಗಳನ್ನು ಹೊರತು ಪಡಿಸಿ) ತಾಲೂಕು ಮತ್ತು ಜುಲೈ 17ರ ಸಂಜೆ 6 ಗಂಟೆಯಿಂದ ಜುಲೈ 19ರ ಬೆಳಗ್ಗೆ 6 ಗಂಟೆಯವರೆಗೆ ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಅರಳಿಕಟ್ಟಿ ಗ್ರಾಮ ಮತ್ತು ಕುಂದಗೋಳ ತಾಲೂಕಿನ ಯರಗುಪ್ಪಿ, ಯರಿ ನಾರಾಯಣಪೂರ, ಚಿಕ್ಕನರ್ತಿ, ಮುಳ್ಳೋಳ್ಳಿ, ಪಶುಪತಿಹಾಳ ಗ್ರಾಮಗಳಲ್ಲಿ ಮದ್ಯಪಾನ, ಮದ್ಯ ಮಾರಾಟ ಮತ್ತು ಮದ್ಯ ಸಾಗಾಣಿಕೆಯನ್ನು ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಭಾರತೀಯ ತಯಾರಿಕೆ ಮದ್ಯದ ಅಂಗಡಿಗಳು, ಬಿಯರ್ ಬಾರ್ಗಳು, ಕ್ಲಬ್‍ಗಳು, ಮದ್ಯದ ಡಿಪೋಗಳನ್ನು ನಿಷೇಧಾಜ್ಞೆ ಜಾರಿಯಲ್ಲಿರುವ ಅವಧಿಯಲ್ಲಿ ಮುಚ್ಚತಕ್ಕದು. ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಸಾರ್ವಜನಿಕ ಶಾಂತತೆಯನ್ನು ಕಾಯ್ದುಕೊಂಡು ಬರುವ ಹಿತದೃಷ್ಟಿಯಿಂದ ವಲಯ ಅಬಕಾರಿ ಇನ್ಸ್ಪೆಕ್ಟರ್, ಉಪ ವಿಭಾಗ ಅಧೀಕ್ಷಕರು ಕರ್ನಾಟಕ ಅಬಕಾರಿ ಕಾಯ್ದೆ ಅನ್ವಯ ಅವಶ್ಯಕತೆ ಕಂಡು ಬಂದಲ್ಲಿ ಶಾಂತಿ ಪಾಲನೆಗಾಗಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಅಬಕಾರಿ ಉಪ ಆಯುಕ್ತರು ಹಾಗೂ ಆರಕ್ಷಕ ಅಧೀಕ್ಷಕರು, ಹೆಚ್ಚುವರಿ ಆರಕ್ಷಕ ಅಧೀಕ್ಷಕರು ತಮ್ಮ ವ್ಯಾಪ್ತಿಯಲ್ಲಿ ಸದರಿ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಓದಿ: ವಿವಿಧ ಹಬ್ಬ ಹರಿದಿನಗಳಂದು ಮದ್ಯ ಮಾರಾಟ ನಿಷೇಧ: ರಾಜ್ಯದ ಬೊಕ್ಕಸಕ್ಕೆ 517 ಕೋಟಿ ಆದಾಯ ಖೋತಾ! - Revenue Loss