ಚಾಮರಾಜನಗರ: ಪ್ರಸಿದ್ಧ ಧಾರ್ಮಿಕ ಕ್ಷೇತ್ರದಲ್ಲಿರುವ ಹನೂರು ತಾಲೂಕಿನ ಮಲೆ ಮಹದೇಶ್ವರನಿಗೆ ಭಕ್ತರು ತಮ್ಮ ಆಸೆ, ಆಕಾಂಕ್ಷೆ ಈಡೇರಿದ ಬಳಿಕ ಹರಕೆ, ಕಾಣಿಕೆ ಸಲ್ಲಿಸುವುದು ಸಾಮಾನ್ಯ. ಅದರಂತೆ, ಭಕ್ತರೊಬ್ಬರು 1.600 ಕೆ.ಜಿ. ಬೆಳ್ಳಿ ಆರತಿ ತಟ್ಟೆಯನ್ನು ಕಾಣಿಕೆಯಾಗಿ ಸಲ್ಲಿಸಿದ್ದಾರೆ.
ಬೆಂಗಳೂರು ನಿವಾಸಿ ನಾಗಮಣಿ ಎಂಬವರು ಅತ್ಯಾಕರ್ಷಕವಾದ ಬೆಳ್ಳಿ ಆರತಿ ತಟ್ಟೆಯನ್ನು ಭಾನುವಾರ ಕ್ಷೇತ್ರಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ರಘು ಮಾಹಿತಿ ನೀಡಿದ್ದಾರೆ.
ಮಾದಪ್ಪನಿಗೆ ಕಾಣಿಕೆಯಾಗಿ ಬಂದ ಬೆಳ್ಳಿ ಆರತಿ ತಟ್ಟೆ ತುಂಬಾ ವಿಶೇಷತೆಯಿಂದ ಕೂಡಿದ್ದು, ಮಾದಪ್ಪನ ವಾಹನವಾದ ಹುಲಿ, ಢಮರುಗ ಸಮೇತ ತ್ರಿಶೂಲ, ನಂದಿ ಸೇರಿದಂತೆ ಎರಡೂ ಕೈತುಂಬಾ ಹಿಡಿದ ನಂದಾದೀಪವನ್ನು ಒಳಗೊಂಡಿದ್ದು ನೋಡಲು ತುಂಬಾ ಆಕರ್ಷಕವಾಗಿದೆ.
ಇದನ್ನೂ ಓದಿ: ಚಾಮರಾಜನಗರ: ಅಕ್ಷಯ ತದಿಗೆ ಅಮಾವಾಸ್ಯೆ, ಮಾದಪ್ಪನ ಬೆಟ್ಟಕ್ಕೆ ಹರಿದು ಬಂದ ಭಕ್ತರ ದಂಡು - MALE MAHADESHWARA TEMPLE