ETV Bharat / state

ಲೋಕ ಸಮರಕ್ಕೆ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಸಜ್ಜು: ಹೀಗಿದೆ ಜಾತಿವಾರು ಮತದಾರರ ಲೆಕ್ಕಾಚಾರ - bangaluru Rural Constituency

ಬೆಂಗಳೂರು ಲೋಕಸಭಾ ಕ್ಷೇತ್ರದ ಜಾತಿವಾರು ಮತ, ಅಭ್ಯರ್ಥಿಗಳ ಬಲಾಬಲ ಸೇರಿದಂತೆ ಇನ್ನಿತರೆ ಮಾಹಿತಿ ಇಲ್ಲಿದೆ.

ಲೋಕ ಸಮರಕ್ಕೆ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಸಜ್ಜು: ಹೀಗಿದೆ ಜಾತಿವಾರು ಮತದಾರರ ಲೆಕ್ಕಾಚಾರ

author img

By ETV Bharat Karnataka Team

Published : Mar 19, 2024, 12:32 PM IST

ರಾಮನಗರ: ರಾಜ್ಯದಲ್ಲೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆ ಭಾರಿ ರಂಗು ಪಡೆಯಲಿದೆ. ಈ ಬಾರಿ ಹೇಗಾದ್ರು ಮಾಡಿ ಸಂಸದ ಡಿ.ಕೆ. ಸುರೇಶ್ ಅವರನ್ನ ಸೋಲಿಸಲೇಬೇಕೆಂದು ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಡಾ. ಸಿ.ಎನ್ ಮಂಜುನಾಥ್ ಅಖಾಡಕ್ಕೆ ಇಳಿಯುತ್ತಿದ್ದಾರೆ. ಸತತ ನಾಲ್ಕನೇ ಬಾರಿಗೆ ಸಂಸದರಾಗಲು ಅಗ್ನಿ ಪರೀಕ್ಷೆಗೆ ಡಿ.ಕೆ.ಸುರೇಶ್ ಇಳಿದಿದ್ದು, ಈ ಮೂಲಕ ಕ್ಷೇತ್ರದ ಅಖಾಡ ಭಾರಿ ಕುತೂಹಲ ಮೂಡಿಸಿದೆ.

ದೇಶದಲ್ಲೇ ಅತಿದೊಡ್ಡ ಲೋಕಸಭಾ ಕ್ಷೇತ್ರ: ದೇಶದ ಅತಿದೊಡ್ಡ ಲೋಕಸಭಾ ಕ್ಷೇತ್ರಗಳ ಪೈಕಿ ಕನಕಪುರ ಲೋಕಸಭಾ ಕ್ಷೇತ್ರ ಕೂಡ ಒಂದಾಗಿತ್ತು. ಆದ್ರೆ ಕ್ಷೇತ್ರ ಪುನರ್ ವಿಂಗಡನೆಯಾದ ನಂತರ ಕನಕಪುರ ಲೋಕಸಭಾ ಕ್ಷೇತ್ರ ಹೋಗಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವಾಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ರಾಮನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಾದ ರಾಮನಗರ, ಕನಕಪುರ, ಮಾಗಡಿ ಹಾಗೂ ಚನ್ನಪಟ್ಟಣ ಇವುಗಳ ಜೊತೆಗೆ ತುಮಕೂರಿನ ಕುಣಿಗಲ್ ಕ್ಷೇತ್ರ, ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ ಹಾಗೂ ಆನೇಕಲ್ ಕ್ಷೇತ್ರಗಳನ್ನು ಒಳಗೊಂಡಿದೆ.

ಕನಕಪುರ ಲೋಕಸಭಾ ಕ್ಷೇತ್ರವಾಗಿದ್ದಾಗ ಕಾಂಗ್ರೆಸ್ ಭದ್ರಕೋಟೆ ಎಂದೇ ಬಿಂಬಿತವಾಗಿತ್ತು. 9 ಬಾರಿ ಕಾಂಗ್ರೆಸ್​ ಅಧಿನಾಯಕರು ಈ ಕ್ಷೇತ್ರದ ಲೋಕಸಭಾ ಗದ್ದುಗೆ ಹಿಡಿದಿದ್ದು, ಅದರಲ್ಲಿ ಎಂ.ವಿ. ಚಂದ್ರಶೇಖರ್ ಮೂರ್ತಿ ಒಬ್ಬರೆ 7 ಬಾರಿ ಆಯ್ಕೆಯಾಗಿರುವುದು ವಿಶೇಷವಾಗಿದೆ. ಅದರಂತೆ ಜೆಡಿಎಸ್ ಹಾಗೂ ಬಿಜೆಪಿ ಕೂಡ ಕ್ಷೇತ್ರದಲ್ಲಿ ತಲಾ ಒಂದೊಂದು ಬಾರಿ ಗೆಲ್ಲುವ ಮೂಲಕ ತಮ್ಮ ಪಾರುಪತ್ಯ ಸಾಧಿಸಿದ್ದಾರೆ. 2013ರಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಲೋಕಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಸತತ ಮೂರು ಬಾರಿ ಜಯ ಸಾಧಿಸಿದ್ದಾರೆ.

ರಾಜ್ಯದ ಏಕೈಕ ಕಾಂಗ್ರೆಸ್​ ಸಂಸದ: ಕಳೆದ ಲೋಕಸಭಾ ಕ್ಷೇತ್ರದಲ್ಲಿ ಇಡೀ ರಾಜ್ಯದ ಫಲಿತಾಂಶವೇ ಬಿಜೆಪಿ ಪರವಾಗಿ ಇತ್ತು. ಒಟ್ಟು 28 ಲೋಕಸಭಾ ಅಭ್ಯರ್ಥಿಗಳ ಪೈಕಿ 25 ಬಿಜೆಪಿಯ ಅಭ್ಯರ್ಥಿಗಳು ಗೆದ್ದಿದ್ದರೆ, ಒಂದು ಕಾಂಗ್ರೆಸ್​ ಹಾಗೂ ಒಂದು ಜೆಡಿಎಸ್​ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆದ್ದಿದ್ದರು. ಈ ಪೈಕಿ ರಾಜ್ಯದಲ್ಲೇ ಏಕೈಕ ಕಾಂಗ್ರೆಸ್​ ಸಂಸದರಾಗಿ ಡಿಕೆ ಸುರೇಶ್​ ಭಾರಿ ಬಹುಮತದೊಂದಿಗೆ ಆಯ್ಕೆಯಾಗಿದ್ದರು.

ಗ್ಯಾರಂಟಿ ಭಾಗ್ಯಗಳು ಕೈ ಹಿಡಿಯಲಿವೆಯೇ: ಪಂಚ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿಯೋಜನೆ, ಯುವನಿಧಿ ಈ ಐದು ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೊಳಿಸಿ ನುಡಿದಂತೆ ನಡೆದ ಸರ್ಕಾರವಾಗಿದೆ ಎಂದು ಕಾಂಗ್ರೆಸ್​ ಹೇಳಿಕೊಂಡಿದೆ. ಅಲ್ಲದೇ ಈ ಗ್ಯಾರಂಟಿಗಳು ಈ ಬಾರಿಯ ಲೋಕಸಭೆ ಚುನಾವಣೆಗೆ ವರವಾಗಲಿವೆ ಎಂಬ ನಂಬಿಕೆಯನ್ನು ​ಹೊಂದಿದೆ.

ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕಣಕ್ಕೆ: ಸಂಸದ ಡಿಕೆ ಸುರೇಶ್ ಅವರನ್ನ ಸೋಲಿಸಲೇಬೇಕೆಂದು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕರು ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಅಳಿಯ ಡಾ. ಸಿ.ಎನ್ ಮಂಜುನಾಥ್ ಅವರನ್ನ ಅಳೆದು ತೂಗಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದಾರೆ. ಹಾಗೆ ನೋಡಿದ್ರೆ ಡಾ. ಮಂಜುನಾಥ್ ಜಯದೇವ ಆಸ್ಪತ್ರೆಯಲ್ಲಿ ನಿರ್ದೇಶಕರಾಗಿ ಬಡ ವರ್ಗದ ಜನರಿಗೆ ಹಾಗೂ ಆಸ್ಪತ್ರೆ ವಿಶ್ವದಾದ್ಯಂತ ಹೆಸರು ಮಾಡಲು ತಮ್ಮದೇ ಆದ ಜನಸೇವೆಯನ್ನ ಮಾಡಿದ್ದಾರೆ. ಇದರಿಂದಲೇ ತಮ್ಮದೇ ಆದ ವೈಯಕ್ತಿಕ ವರ್ಚಸ್ಸು ಹೊಂದಿರುವ ಅವರನ್ನ ಈ ಬಾರಿ ಅಭ್ಯರ್ಥಿ ಮಾಡಿದರೆ ಬಲಾಢ್ಯ ಕಾಂಗ್ರೆಸ್​ ಅಭ್ಯರ್ಥಿಯನ್ನ ಸೋಲಿಸಬಹುದೆಂಬ ಲೆಕ್ಕಾಚಾರದಿಂದ ಮೈತ್ರಿ ಅಭ್ಯರ್ಥಿಯನ್ನಾಗಿ ಬಿಜೆಪಿಯಿಂದ ಡಾ.ಮಂಜುನಾಥ್ ಅವರಿಗೆ ಟಿಕೆಟ್​ ನೀಡಿದೆ.

ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಬರುವ ಈ ಲೋಕಸಭಾ ಕ್ಷೇತ್ರದಲ್ಲಿ ಐವರು ಕಾಂಗ್ರೆಸ್​ ಶಾಸಕರಿದ್ದರೂ ಕೂಡ ಬಿಜೆಪಿ ಕ್ಷೇತ್ರದಲ್ಲಿ ತನ್ನದೇ ಆದ ಹಿಡಿತವನ್ನು ಹೊಂದಿದೆ. ಹಾಗಾಗಿ ಈ ಬಾರಿ ಜೆಡಿಎಸ್ ಅಭ್ಯರ್ಥಿ ಹಾಕದೇ ಬಿಜೆಪಿ ಅಭ್ಯರ್ಥಿಯಾಗಿ ಡಾ. ಮಂಜುನಾಥ್ ಅವರನ್ನು ಅಖಾಡಕ್ಕಿಳಿಸಿದೆ.

ಜಾತಿವಾರು ಮತದಾರರು

ಒಕ್ಕಲಿಗರು - 7.10 ಲಕ್ಷ
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ - 5.20 ಲಕ್ಷ
ಲಿಂಗಾಯತರು - 2.6 ಲಕ್ಷ
ಕುರುಬರು – 1 ಲಕ್ಷ
ಮುಸ್ಲಿಂ – 2.5 ಲಕ್ಷ
ಇತರೆ - 4 ಲಕ್ಷ

ಪ್ರಸ್ತುತ 2024 ರ ಲೋಕಾಸಭಾ ಕ್ಷೇತ್ರದ ಮತದಾರರ ವಿವರ

ಪುರುಷರು -14,06,042
ಮಹಿಳೆಯರು - 13,57,547
ಇತರೆ - 321

ಒಟ್ಟು ಮತದಾರರು - 27,63,910

ಇದನ್ನೂ ಓದಿ: ಹಾಸನ, ಮಂಡ್ಯ, ಕೋಲಾರ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ: ಹೆಚ್ ಡಿ‌ ಕುಮಾರಸ್ವಾಮಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.