ETV Bharat / state

ನಿಷೇಧಿತ ನೋಟುಗಳ ನಗದೀಕರಣ: ಇಬ್ಬರು ಆರೋಪಿಗಳಿಗೆ 3.70 ಲಕ್ಷ ದಂಡ ಸಹಿತ 4 ವರ್ಷ ಸಜೆ - Violation of RBI rules

ನಿಷೇಧಿತ ನೋಟುಗಳ ನಗದೀಕರಣ ಮಾಡಿದ್ದ ಆರೋಪದಡಿ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ದಂಡ ಸಹಿತ ಜೈಲು ಶಿಕ್ಷೆ ವಿಧಿಸಿದೆ.

ನಿಷೇಧಿತ ನೋಟುಗಳ ನಗದೀಕರಣ ಪ್ರಕರಣ
ನಿಷೇಧಿತ ನೋಟುಗಳ ನಗದೀಕರಣ ಪ್ರಕರಣ
author img

By ETV Bharat Karnataka Team

Published : Apr 28, 2024, 4:56 PM IST

ಬೆಂಗಳೂರು: ಆರ್.ಬಿ.ಐ ನಿಯಮ ಉಲ್ಲಂಘಿಸಿ ನಿಷೇಧಿತ ನೋಟುಗಳ ನಗದೀಕರಣ ಮಾಡಿದ್ದ ಆರೋಪದಡಿ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಡ್ಯಾಮ್ ರಸ್ತೆಯ ಎಸ್‌ಬಿಎಂ ಶಾಖೆಯ ಮಾಜಿ ಹೆಡ್ ಕ್ಯಾಶಿಯರ್ ಎಸ್. ಗೋಪಾಲಕೃಷ್ಣ, ಎಲ್ಐಸಿ ಏಜೆಂಟ್ ಕೆ. ರಾಘವೇಂದ್ರ ಅವರಿಗೆ 4 ವರ್ಷಗಳ ಜೈಲು‌ ಶಿಕ್ಷೆ, ಹಾಗೂ ಒಟ್ಟು 3,70,000/ ರೂ. ದಂಡ (A-1 ಆರೋಪಿಗೆ 2,10,000/- ರೂ. ಹಾಗೂ A-2 ಆರೋಪಿಗೆ 1,60,000/-) ವಿಧಿಸಿ ಬೆಂಗಳೂರಿನ ಸಿಬಿಐ ಪ್ರಕರಣಗಳ ವಿಚಾರಣಾ ನ್ಯಾಯಾಲಯದ ವಿಶೇಷ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.

ನೋಟ್​ಬ್ಯಾನ್ ಸಂದರ್ಭದಲ್ಲಿ ನಿಷೇಧಿತ ಕರೆನ್ಸಿ ನೋಟುಗಳ ನಗದೀಕರಣಕ್ಕೆ ಆರ್​ಬಿಐ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಅದರ ಪ್ರಕಾರ ನೋಟು ನಗದೀಕರಣಕ್ಕೆ ಗುರುತಿನ ಪುರಾವೆ ಅಥವಾ ಕೆವೈಸಿ ಪಡೆಯುವುದು ಕಡ್ಡಾಯವಾಗಿತ್ತು. ಆದರೆ ಈ ಯಾವುದೇ ಮಾರ್ಗಸೂಚಿ‌ ಪಾಲಿಸದೇ ನೋಟು ನಗದೀಕರಣ ಮಾಡುತ್ತಿದ್ದ ಆರೋಪದಡಿ 2017ರ ಮಾರ್ಚ್ 30ರಂದು ಆರೋಪಿಗಳು ಸೇರಿದಂತೆ ಮೂವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು.

2016ರಲ್ಲಿ ಬ್ಯಾಂಕ್‌ನ ಚೀಫ್ ಕ್ಯಾಶಿಯರ್ ಆಗಿದ್ದ ಗೋಪಾಲಕೃಷ್ಣ ತಮ್ಮ ಹುದ್ದೆಯನ್ನ ದುರ್ಬಳಕೆ ಮಾಡಿಕೊಂಡು ಗುರುತಿನ ಪುರಾವೆ ಅಥವಾ ಅನುಮೋದನೆ ಪತ್ರಗಳನ್ನು ಪಡೆಯದೆ ನವೆಂಬರ್ 2016ರ ಅವಧಿಯಲ್ಲಿ ಎಲ್ಐಸಿ ಆಫ್ ಇಂಡಿಯಾ ಹೆಸರಿನಲ್ಲಿ 101 ಬ್ಯಾಂಕರ್ಸ್ ಚೆಕ್ಕುಗಳನ್ನ ನೀಡಿದ್ದರು. ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಅವರಿಗೆ ತಿಳಿಯದಂತೆ ಅನಧಿಕೃತವಾಗಿ ಚೆಕ್ಕುಗಳನ್ನ ಪಡೆದುಕೊಂಡಿದ್ದ ಏಜೆಂಟ್ ಕೆ.ರಾಘವೇಂದ್ರ, ಚೆಕ್ಕುಗಳನ್ನು ಪಡೆದವರ ಹೆಸರಿನಲ್ಲಿ ಯಾವುದೇ ಪಾಲಿಸಿಗಳನ್ನು ಪಡೆದಿರಲಿಲ್ಲ.

ಆರೋಪಿಗಳ ಈ ಕೃತ್ಯದ ಹಿಂದೆ ನಿಷೇಧಿತ ನೋಟುಗಳ ಬದಲಾಗಿ ಅಧಿಕೃತ ನೋಟುಗಳನ್ನು ಪಡೆಯುವ ದುರುದ್ದೇಶವಿರುವುದು ಸಿಬಿಐ ತನಿಖೆಯಲ್ಲಿ ಬಹಿರಂಗವಾಗಿತ್ತು. ತನಿಖೆ ಪೂರ್ಣಗೊಳಿಸಿದ್ದ ಸಿಬಿಐ 2017ರ ಸೆಪ್ಟೆಂಬರ್‌ನಲ್ಲಿ ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸಿತ್ತು.

ಇದನ್ನೂ ಓದಿ: ತಾಯಿಯ ಫೋಟೋ ವೈರಲ್ ಮಾಡುವುದಾಗಿ ಬೆದರಿಸಿ ಮಗಳ ನಗ್ನ ಫೋಟೋ ಪಡೆದ ವಂಚಕ: ಬೆಂಗಳೂರಲ್ಲಿ ಯುವತಿ ದೂರು - Blackmail Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.