ETV Bharat / state

ಬೆಳಗ್ಗೆ 9 ಗಂಟೆಗೆ ವಿಧಾನಸಭೆ ಕಲಾಪಕ್ಕೆ ಆಕ್ಷೇಪ; 10 ಗಂಟೆಗೆ ಆರಂಭಿಸಲು ತೀರ್ಮಾನ - Speaker Khader

ಬೆಳಗ್ಗೆ 9 ಗಂಟೆಗೆ ಅಧಿವೇಶನದ ಕಲಾಪ ಆರಂಭಿಸುವ ಸ್ಪೀಕರ್ ಯು.ಟಿ.ಖಾದರ್ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದೆ.

decision-to-start-assembly-proceedings-at-10-am
ಬೆಳಗ್ಗೆ 9 ಗಂಟೆಗೆ ವಿಧಾನಸಭೆ ಕಲಾಪ ಆರಂಭಕ್ಕೆ ಆಕ್ಷೇಪ; 10 ಗಂಟೆಗೆ ಆರಂಭಿಸಲು ತೀರ್ಮಾನ
author img

By ETV Bharat Karnataka Team

Published : Feb 12, 2024, 7:31 PM IST

ಬೆಂಗಳೂರು: ಬೆಳಗ್ಗೆ 9 ಗಂಟೆಗೆ ಅಧಿವೇಶನದ ಕಲಾಪ ಆರಂಭಿಸುವುದಕ್ಕೆ ವಿಧಾನಸಭೆ ಕಾರ್ಯ ಕಲಾಪ ಸಲಹಾ ಸಮಿತಿ (ಬಿಎಸಿ) ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು.

ವಿಧಾನಸಭೆ ಕಲಾಪವನ್ನು ಬೆಳಿಗ್ಗೆ 9ಕ್ಕೆ ಆರಂಭಿಸಲು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ನಿರ್ಧರಿಸಿದ್ದರು.‌ ಇದಕ್ಕಾಗಿ ಬೆಳಗ್ಗೆ 8 ಗಂಟೆಯಿಂದ 9 ಗಂಟೆಯವರೆಗೆ ಶಾಸಕರಿಗೆ ಉಚಿತ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.‌ ಸಕಾಲಕ್ಕೆ ಶಾಸಕರು ಕಲಾಪಕ್ಕೆ ಬರುವ ನಿಟ್ಟಿನಲ್ಲಿ ಈ ವ್ಯವಸ್ಥೆ ಮಾಡಲಾಗಿದೆ ಎಂದು ಸ್ಪೀಕರ್ ತಿಳಿಸಿದ್ದರು. ಬೆಳಗ್ಗೆ ಬೇಗ ಕಲಾಪ ಆರಂಭಿಸಿದರೆ ಸದಸ್ಯರುಗಳಿಗೆ ಚರ್ಚೆಗೆ ಹೆಚ್ಚಿನ ಅವಕಾಶ ಸಿಗಲಿದೆ ಎಂಬ ಉದ್ದೇಶದೊಂದಿಗೆ 9 ಗಂಟೆಗೆ ಕಲಾಪ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಸ್ಪೀಕರ್ ಹೇಳಿದ್ದರು.

ಆದರೆ, ಇಂದು ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು. ಬೆಳಗ್ಗೆ ಒಂಬತ್ತು ಗಂಟೆಗೆ ಕಲಾಪಕ್ಕೆ ಹಾಜರಾಗುವುದು ಕಷ್ಟ ಸಾಧ್ಯವಾಗುತ್ತದೆ. ಅಷ್ಟು ಬೇಗ ಬರಲು ಆಗುವುದಿಲ್ಲ. ಹೀಗಾಗಿ, 10 ಗಂಟೆಯ ಬಳಿಕ ಕಲಾಪ ಆರಂಭಿಸುವಂತೆ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ವಿಪ್​​​ಗಳು ಮನವಿ ಮಾಡಿದರು.

ಎಲ್ಲರೂ ಆಕ್ಷೇಪ ವ್ಯಕ್ತಪಡಿಸಿದ ಕಾರಣ ಕಲಾಪವನ್ನು 10ಕ್ಕೆ ಆರಂಭಿಸಲು ಕಾರ್ಯ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ ಮಾಡಲಾಯಿತು. ಬುಧವಾರದಿಂದ ವಿಧಾನಸಭೆ ಕಲಾಪವನ್ನು 10 ಗಂಟೆಗೆ ಆರಂಭಿಸಲು ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಇದನ್ನೂ ಓದಿ: ವಿಧಾನಮಂಡಲ ಅಧಿವೇಶನ: ಜೈ ಶ್ರೀರಾಮ್​ ಘೋಷಣೆ ಕೂಗಿದ ಬಿಜೆಪಿ ಶಾಸಕರು, ಜೈ ಭೀಮ್​ ಎಂದ ಕಾಂಗ್ರೆಸ್​ ಸದಸ್ಯರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.