ETV Bharat / state

ಹೊಸಕೋಟೆ: ತರಕಾರಿ ವ್ಯಾಪಾರಿಯ ಹತ್ಯೆ ಕೇಸ್‌; ಆರೋಪಿಗಳ ಮನೆ ಮೇಲೆ ಕುಟುಂಬಸ್ಥರ ದಾಳಿ - Hosakote Murder Case - HOSAKOTE MURDER CASE

ಹೊಸಕೋಟೆಯಲ್ಲಿ ಕಳೆದ ತಿಂಗಳು ನಡೆದಿದ್ದ ತರಕಾರಿ ವ್ಯಾಪಾರಿಯ ಕೊಲೆ ಪ್ರಕರಣದ ಆರೋಪಿಗಳ ಮನೆ ಮೇಲೆ ಮೃತನ ಕುಟುಂಬಸ್ಥರು ದಾಳಿ ನಡೆಸಿ ಸೇಡು ತೀರಿಸಿಕೊಂಡಿದ್ದಾರೆ.

Murder Accused House Vandalized
ಆರೋಪಿಗಳ ಮನೆಯ ವಸ್ತುಗಳನ್ನು ಸಾಶಪಡಿಸಿರುವುದು. (ETV Bharat)
author img

By ETV Bharat Karnataka Team

Published : Jul 11, 2024, 12:02 PM IST

ಆರೋಪಿ ಸೊಣ್ಣಪ್ಪ ಕುಟುಂಬಸ್ಥರ ಪ್ರತಿಕ್ರಿಯೆ (ETV Bharat)

ಹೊಸಕೋಟೆ(ಬೆಂಗಳೂರು ಗ್ರಾಮಾಂತರ): ಆತ ತಾನಾಯ್ತು, ತನ್ನ ಕೆಲಸವಾಯ್ತು ಅಂತಾ ತರಕಾರಿ ವ್ಯಾಪಾರ ಮಾಡ್ತಿದ್ದವ. ಕಳೆದ ತಿಂಗಳು ತರಕಾರಿ ತರಲೆಂದು ಬೆಂಗಳೂರಿಗೆ ತೆರಳಿದ್ದ. ಹೀಗೆ ಹೋದವನೇ ಬರ್ಬರವಾಗಿ ಹತ್ಯೆಯಾಗಿದ್ದ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದರು. ಇದೀಗ ಘಟನೆಯಿಂದ ಆಕ್ರೋಶಗೊಂಡಿದ್ದ ಕುಟುಂಬಸ್ಥರು, ಕೊಲೆಗೆ ಸುಪಾರಿ ನೀಡಿದವರ ಮನೆಗಳ ಮೇಲೆ ದಾಳಿ ಮಾಡಿದ್ದು, ಕೈಗೆ ಸಿಕ್ಕ ವಸ್ತುಗಳನ್ನೆಲ್ಲ ಪುಡಿಗಟ್ಟಿ ಸೇಡು ತೀರಿಸಿಕೊಂಡಿದ್ದಾರೆ.

ಜೂನ್ 16ರಂದು ಬೆಳಗ್ಗೆ ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಗಾಪುರ ಗ್ರಾಮದ ನವೀನ್ ನಾಯಕ್ ಎಂಬಾತನನ್ನು ದುಷ್ಕರ್ಮಿಗಳು ಕಾರಿನಲ್ಲಿ ಬಂದು ಬರ್ಬರವಾಗಿ ಕೊಲೆಗೈದಿದ್ದರು. ತರಕಾರಿ ತರುತ್ತಿದ್ದ ನವೀನ್ ಕಾರು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ನವೀನ್ ನಾಯಕ್ ಹೊಸಕೋಟೆ-ಕೋಲಾರ ಸಂಪರ್ಕ ಕಲ್ಪಿಸುವ ರಾಮಸಮುದ್ರದ ಬಳಿ ತರಕಾರಿ ಅಂಗಡಿ ಇಟ್ಟುಕೊಂಡಿದ್ದರು. ಇವರ ಅಂಗಡಿ ಪಕ್ಕದಲ್ಲಿದ್ದ ಸೊಣ್ಣಪ್ಪ ಎಂಬಾತ ನವೀನ್ ಏಳಿಗೆ ಸಹಿಸುತ್ತಿರಲಿಲ್ಲ. ಹೀಗಾಗಿ, ಕೋಲಾರ ತಾಲೂಕಿನ ಮಹೀಂದ್ರ ಎಂಬಾತನೊಂದಿಗೆ ಸೇರಿಕೊಂಡು ನವೀನ್ ಕೊಲೆಗೆ ಸುಪಾರಿ ಕೊಟ್ಟಿದ್ದಾನೆ.

ಇದನ್ನೂ ಓದಿ: ಉಡುಪಿ: ಪಿಎಂ ಆವಾಸ್‌ ಯೋಜನೆಯ ಮನೆಗಳಿಗಿಲ್ಲ ಬೇಡಿಕೆ! - PM Awas Yojana

ನಂದಗುಡಿ ಪೊಲೀಸರ ತನಿಖೆಯಲ್ಲಿ ಕೊಲೆ ರಹಸ್ಯ ಬಯಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಇಬ್ಬರು ಅರೆಸ್ಟ್ ಆಗಿದ್ದಾರೆ. ಕೊಲೆ ಪ್ರಕರಣದ ಆರೋಪಿ ಸೊಣ್ಣಪ್ಪ ಅವರ ಹೊಸಕೋಟೆ ಮನೆ ಹಾಗೂ ಮಹೀಂದ್ರ ಅವರ ಕೋಲಾರದ ನಿವಾಸದ ಮೇಲೆ ಕೊಲೆಯಾದ ನವೀನ್ ನಾಯಕ್ ಕುಟುಂಬಸ್ಥರು ದಾಳಿ ನಡೆಸಿದ್ದಾರೆ ಎಂದು ಸೊಣ್ಣಪ್ಪ ತಾಯಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಅಧಿಕಾರಿಗಳು, ಇಂಜಿನಿಯರ್‌ಗಳ ಮನೆಗಳ ಮೇಲೆ ರಾಜ್ಯಾದ್ಯಂತ ಲೋಕಾಯುಕ್ತ ದಾಳಿ - Lokayukta Raid

ಮನೆಯಲ್ಲಿನ ಪೀಠೋಪಕರಣಗಳು, ಟಿವಿ, ಫ್ರಿಡ್ಜ್, ಮನೆ ಮುಂದೆ ನಿಲ್ಲಿಸಿದ್ದ ಕಾರು, ಬೈಕ್, ಮನೆ ಮುಂದಿನ ಶೀಟ್‌ಗಳನ್ನೂ ನಾಶ ಮಾಡಲಾಗಿದೆ. ಈ ಕುರಿತು ಹೊಸಕೋಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.