ETV Bharat / state

ರಾಜಕಾರಣ ಫುಟ್ಬಾಲ್​ ಅಲ್ಲ, ಅದೊಂದು ಚೆಸ್ ಗೇಮ್: ಡಿಸಿಎಂ ಡಿ ಕೆ ಶಿವಕುಮಾರ್ - ಗ್ರ್ಯಾಂಡ್ ಮಾಸ್ಟರ್​

ರಾಜಕೀಯವೂ ಚೆಸ್​ ಮಾದರಿಯಲ್ಲಿದೆ. ಹೀಗಾಗಿ ಚೆಸ್ ಆಟಗಾರರು ಉತ್ತಮ ರಾಜಕೀಯ ನಾಯಕರಾಗಬಹುದು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.

dcm-dk-sivakumar-reaction-on-chess-game
ರಾಜಕಾರಣ ಫುಟ್​ಬಾಲ್ ಅಲ್ಲ, ಅದೊಂದು ಚೆಸ್ ಗೇಮ್: ಡಿಸಿಎಂ ಡಿ ಕೆ ಶಿವಕುಮಾರ್
author img

By ETV Bharat Karnataka Team

Published : Jan 26, 2024, 10:29 PM IST

Updated : Jan 26, 2024, 10:37 PM IST

ಡಿಸಿಎಂ ಡಿ ಕೆ ಶಿವಕುಮಾರ್ ಭಾಷಣ

ಬೆಂಗಳೂರು: "ರಾಜಕಾರಣ ಫುಟ್ಬಾಲ್​​​​​​ ಅಲ್ಲ, ಅದೊಂದು ಚೆಸ್ ಗೇಮ್. ಆದ್ದರಿಂದ ಚೆಸ್ ಆಟಗಾರರು ಉತ್ತಮ ರಾಜಕೀಯಪಟು ಆಗಬಹುದು" ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅಭಿಪ್ರಾಯಪಟ್ಟರು. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಒಂದನೇ ಬೆಂಗಳೂರು ಅಂತಾರಾಷ್ಟ್ರೀಯ ಗ್ರಾಂಡ್ ಮಾಸ್ಟರ್ಸ್ ಓಪನ್ ಚೆಸ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು, "ಇಲ್ಲಿ ಅನೇಕ ಯುವ ಪ್ರತಿಭೆಗಳನ್ನು ನೋಡುತ್ತಿದ್ದೇನೆ. ನಾನು ಚೆಸ್ ಆಡುವುದಿಲ್ಲ. ಸಾರ್ವಜನಿಕ ಜೀವನದಲ್ಲಿ ಇದ್ದೇನೆ. ನಾನು ಆಗಾಗ್ಗೆ ಒಂದು ಮಾತು ಹೇಳುತ್ತಿರುತ್ತೇನೆ. ರಾಜಕಾರಣ ಫುಟ್ಬಾಲ್​​​ ಅಲ್ಲ, ಅದೊಂದು ಚೆಸ್ ಗೇಮ್" ಎಂದು ಹೇಳಿದರು.

"ಇದು ಚಾಣಾಕ್ಷತನದ ಆಟ. ಈ ಆಟದಲ್ಲಿ ನಮ್ಮ ರಾಜನ ರಕ್ಷಣೆ ಮಾಡಬೇಕು, ಎದುರಾಳಿ ರಾಜನನ್ನು ಮಣಿಸಬೇಕು. ರಾಜಕೀಯವೂ ಇದೇ ಮಾದರಿಯಲ್ಲಿದೆ. ಹೀಗಾಗಿ ಚೆಸ್ ಆಟಗಾರರು ಉತ್ತಮ ರಾಜಕೀಯ ನಾಯಕರಾಗಬಹುದು. ಸೌಮ್ಯ ಅವರು ಅತ್ಯುತ್ತಮವಾಗಿ ಈ ಸ್ಪರ್ಧೆಯನ್ನು ಆಯೋಜಿಸಿದ್ದಾರೆ. ಪ್ರಪಂಚದಾದ್ಯಂತ ಇರುವ ಗ್ರ್ಯಾಂಡ್ ಮಾಸ್ಟರ್​ಗಳನ್ನು ಬೆಂಗಳೂರಿಗೆ ಕರೆತಂದು ಈ ಸ್ಪರ್ಧೆ ಏರ್ಪಡಿಸಿದ್ದಾರೆ. ಬೆಂಗಳೂರು ಉತ್ತಮ ಹವಾಮಾನ ಹೊಂದಿರುವ ನಗರ. ಬೆಂಗಳೂರು ಐತಿಹಾಸಿಕ ನಗರಿ. ಇಲ್ಲಿ ಉತ್ತಮ ಪ್ರತಿಭೆಗಳು, ಶಿಕ್ಷಣ ಸಂಸ್ಥೆಗಳಿವೆ. ಈ ಹಿನ್ನಲೆಯಲ್ಲಿ ಇಲ್ಲಿ ಈ ಸ್ಪರ್ಧೆ ಆಯೋಜಿಸಿರುವ ಕರ್ನಾಟಕ ಚೆಸ್ ಸಂಸ್ಥೆ ಹಾಗೂ ಆಯೋಜಕರಿಗೆ ಧನ್ಯವಾದಗಳು" ಎಂದರು.

ಇದನ್ನೂ ಓದಿ: ನಿಗಮ ಮಂಡಳಿ ನೇಮಕ ಪಟ್ಟಿ ಬಿಡುಗಡೆ: 32 ಶಾಸಕರಿಗೆ ಸ್ಥಾನ: ಇಲ್ಲಿದೆ ಪೂರ್ಣಪಟ್ಟಿ

ಧ್ವಜಾರೋಹಣ ನೆರವೇರಿಸಿದ ರಾಜ್ಯಪಾಲ(ಬೆಂಗಳೂರು): ಮತ್ತೊಂದೆಡೆ, 75ನೇ ಗಣರಾಜ್ಯೋತ್ಸವದ ನಿಮಿತ್ತ ಬೆಂಗಳೂರಿನ ಮಾಣಿಕ್ ಷಾ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಧ್ವಜಾರೋಹಣ ನೆರವೇರಿಸಿ ರಾಷ್ಟ್ರಧ್ವಜಕ್ಕೆ ನಮನ ಸಲ್ಲಿಸಿದರು. ವಿವಿಧ ತುಕಡಿಗಳಿಂದ ಗೌರವ ರಕ್ಷೆ ಸ್ವೀಕರಿಸಿ, ತೆರೆದ ವಾಹನದಲ್ಲಿ ಕವಾಯತು ವೀಕ್ಷಿಸಿದರು. ಬಳಿಕ ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ಎಲ್ಲರಿಗೂ ನಮಸ್ಕಾರ ಎನ್ನುತ್ತಾ ಕನ್ನಡದಲ್ಲೇ ಭಾಷಣ ಆರಂಭಿಸಿದರು. ಜನತೆಗೆ ಗಣರಾಜ್ಯೋತ್ಸವದ ಶುಭಾಶಯ ಕೋರಿದ ಅವರು ರಾಜ್ಯ ಸರ್ಕಾರದ ಸಾಧನೆಗಳು ಹಾಗೂ ಪಂಚ ಗ್ಯಾರಂಟಿಗಳ ಅನುಷ್ಠಾನದ ಪ್ರಗತಿ ಬಗ್ಗೆ ವಿವರಿಸಿದರು.

ಈ ಐತಿಹಾಸಿಕ ದಿನದಂದು ಭಾರತದ ಸಂವಿಧಾನ ಜಾರಿಗೆ ಬಂದಿತು. ಸಂವಿಧಾನವು ಭಾರತದ ನಾಗರಿಕರಿಗೆ ನ್ಯಾಯ, ಸ್ವಾತಂತ್ರ ಹಾಗೂ ಸಮಾನತೆಯ ಅವಕಾಶವನ್ನು ಒದಗಿಸುವುದರೊಂದಿಗೆ, ದೇಶದ ಸಮಗ್ರತೆ, ಏಕತೆಯನ್ನು ಕಾಪಾಡುವ ಜೊತೆಗೆ ಸ್ವಾಭಿಮಾನದ ಜೀವನ ಒದಗಿಸುವ ಧೈಯವನ್ನು ಹೊಂದಿದೆ. ಆ ಮೂಲಕ ನಾಗರೀಕರು ತಮ್ಮ ಏಳಿಗೆಯೊಂದಿಗೆ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಲು ಅವಕಾಶ ಕಲ್ಪಿಸಿದೆ ಎಂದು ತಿಳಿಸಿದರು.

Last Updated : Jan 26, 2024, 10:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.