ETV Bharat / state

26 ವರ್ಷಗಳ ಬಳಿಕ ಕಾಂಗ್ರೆಸ್ ಬಾಯಿಗೆ ಬೆಣ್ಣೆ: ದಾವಣಗೆರೆಯಲ್ಲಿ ಪ್ರಭಾ ಮಲ್ಲಿಕಾರ್ಜುನ್ ಜಯಭೇರಿ - Congress Prabha Mallikarjun won

ದಾವಣಗೆರೆ ಲೋಕಸಭೆ ಕ್ಷೇತ್ರದಲ್ಲಿ 6 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್​ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್​​ ಅವರು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಮತ್ತು ಜಿ.ಬಿ. ವಿನಯ್​ ಕುಮಾರ್ ಮಣಿಸಿ ಜಯ ಗಳಿಸಿದ್ದಾರೆ.

ದಾವಣಗೆರೆ ಲೋಕಸಭಾ ಚುನಾವಣಾ ಫಲಿತಾಂಶ
ಕಾಂಗ್ರೆಸ್ ಪ್ರಭಾ ಮಲ್ಲಿಕಾರ್ಜುನ್ ಗೆಲುವು (ETV Bharat)
author img

By ETV Bharat Karnataka Team

Published : Jun 4, 2024, 8:18 AM IST

Updated : Jun 4, 2024, 6:53 PM IST

  • ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್​​ಗೆ​​ ಗೆಲುವು- 6,33,059 ಮತ
  • ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಸೋಲು- 6,06,965 ಮತ
  • ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್​​​ ಕುಮಾರ್​​ ಸೋಲು- 42,907

ದಾವಣಗೆರೆ: ಕ್ಷೇತ್ರದಲ್ಲಿ 6 ಲಕ್ಷಕ್ಕೂ ಅಧಿಕ ಮತಗಳನ್ನು ಗಳಿಸುವ ಮೂಲಕ ಕಾಂಗ್ರೆಸ್​ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್​ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್, ​ಪಕ್ಷೇತರ ಅಭ್ಯರ್ಥಿ ​ಜಿ.ಬಿ. ವಿನಯ್​ ಕುಮಾರ್​ ಸೋಲನುಭವಿಸಿದ್ದಾರೆ.

ದಾವಣಗೆರೆಯಲ್ಲಿ ಪ್ರಭಾ ಮಲ್ಲಿಕಾರ್ಜುನ್ ಗೆಲುವು (ETV Bharat)

ದಾವಣಗೆರೆ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್​ಗೆ ಲೀಡ್​​ ಸಿಕ್ಕಿದೆ. ಇನ್ನುಳಿದ 2 ಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್​​ ಸಿಕ್ಕಿದೆ. ಎಸ್ಎಸ್​ ಮಲ್ಲಿಕಾರ್ಜುನ್​ ಅವರು ಪ್ರತಿನಿಧಿಸುವ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 24,988 ಸಾವಿರ ಮತಗಳು ಬಿಜೆಪಿಗೆ ಲೀಡ್ ಕೊಟ್ಟಿವೆ. ಆದರೂ ಕಾಂಗ್ರೆಸ್ ಗೆದ್ದು ಬೀಗಿದೆ.

ಪ್ರಭಾ ಮಲ್ಲಿಕಾರ್ಜುನ್ ಗೆಲುವು
ಪ್ರಭಾ ಮಲ್ಲಿಕಾರ್ಜುನ್ ಗೆಲುವು (ETV Bharat)

ಯಾವ ಕ್ಷೇತ್ರದಲ್ಲಿ ಎಷ್ಟು ಮುನ್ನಡೆ:

ದಾವಣಗೆರೆ ದಕ್ಷಿಣ ಕ್ಷೇತ್ರ-ಕಾಂಗ್ರೆಸ್​- 22,500 ಮತ

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ-ಬಿಜೆಪಿ-24,988 ಮತ

ಮಾಯಕೊಂಡ ಕ್ಷೇತ್ರ -ಕಾಂಗ್ರೆಸ್- 3,472 ಮತ

ಜಗಳೂರು ಕ್ಷೇತ್ರ -ಕಾಂಗ್ರೆಸ್-6,500 ಮತ

ಹರಿಹರ ಕ್ಷೇತ್ರ -ಕಾಂಗ್ರೆಸ್​ - 4,599ಮತ

ಹರಪನಹಳ್ಳಿ ವಿಧಾನಸಭಾ ಕ್ಷೇತ್ರ-ಬಿಜೆಪಿ-2,500ಮತ

ಚನ್ನಗಿರಿ ಕ್ಷೇತ್ರ-ಕಾಂಗ್ರೆಸ್ - 9,511ಮತ

ಹೊನ್ನಾಳಿ ಕ್ಷೇತ್ರ-ಕಾಂಗ್ರೆಸ್ -7,378 ಮತ

ದಾವಣಗೆರೆ ಕ್ಷೇತ್ರದ ರಾಜಕೀಯ ಇತಿಹಾಸ : 1998ರಲ್ಲಿ ಶಾಮನೂರು ಶಿವಶಂಕರಪ್ಪ ಗೆಲುವಿನ ನಂತರ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ 26 ವರ್ಷಗಳಿಂದ ಜಯ ಸಾಧಿಸಿರಲಿಲ್ಲ. ಈ ಬಾರಿ ಶಾಮನೂರು ಶಿವಶಂಕರಪ್ಪ ಅವರ ಸೊಸೆ ಡಾ. ಪ್ರಭಾ ಮಲ್ಲಿಕಾರ್ಜುನ್‌ ಜಯ ಗಳಿಸುವ ಮೂಲಕ ಮತ್ತೆ ತಮ್ಮ ಕ್ಷೇತ್ರವನ್ನು ಕಾಂಗ್ರೆಸ್​ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಜಿಎಂ ಸಿದ್ದೇಶ್ವರ ಅವರು 1,69,702 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಜಿಎಂ ಸಿದ್ದೇಶ್ವರ ಅವರು ಒಟ್ಟು 6,52,996 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಹೆಚ್​ಬಿ ಮಂಜಪ್ಪ ಅವರು 4,83,294 ಮತಗಳನ್ನು ಗಳಿಸಿದ್ದರು. ಸಂಸದ ಜಿಎಂ‌ ಸಿದ್ದೇಶ್ವರ್ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದರಿಂದ ಕ್ಷೇತ್ರದ ಮೇಲೆ ಬಿಜೆಪಿ ಸಂಪೂರ್ಣ ಹಿಡಿತ ಸಾಧಿಸಿತ್ತು.

ಮತದಾರರ ಮಾಹಿತಿ: ಪುರುಷರು- 8,51,990, ಮಹಿಳೆಯರು - 8,57,117, ಇತರೆ-137, ಸೇವಾ- 565 ಸೇರಿ ಒಟ್ಟು ಮತದಾರರು- 17,09,244 ಇದ್ದಾರೆ. 2024ರ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಲ್ಲಿ ಶೇಕಡಾ 76.99 ರಷ್ಟು ಮತದಾನವಾಗಿತ್ತು. 2019ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಶೇಕಡಾ 73.03 ರಷ್ಟು ಮತದಾನವಾಗಿತ್ತು.

ಇದನ್ನೂ ಓದಿ: ಲೋಕಸಭೆ ಫಲಿತಾಂಶ: ವಿಧಾನಸಭೆ ಚುನಾವಣೆಯಲ್ಲಿ ಫೇಲಾದ " ಈ 10 ರಾಜಕಾರಣಿ " ಗಳಿಗೆ ಸಂಸತ್ ಎಲೆಕ್ಷನ್​ನಲ್ಲಿ ಪಾಸಾಗುವ ಆಸೆ! - EX MLA WINNNING EXPECTATIONS

Last Updated : Jun 4, 2024, 6:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.