ETV Bharat / state

ಮಂಗಳೂರು: ವೃದ್ಧ ಮಾವನಿಗೆ ವಾಕಿಂಗ್​​ಸ್ಟಿಕ್​​​ನಿಂದ​ ಥಳಿಸಿದ ಸೊಸೆಯ ಬಂಧನ - Assault on father in law

ವೃದ್ಧ ಮಾವನಿಗೆ ಅಮಾನವಿಯವಾಗಿ ಥಳಿಸಿದ ಸೊಸೆಯನ್ನು ಪೊಲೀಸರು ಬಂಧಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ವೃದ್ಧ ಮಾವನಿಗೆ ವಾಕಿಂಗ್​​ಸ್ಟಿಕ್​​​ನಿಂದ​ ಥಳಿಸಿದ ಸೊಸೆ

author img

By ETV Bharat Karnataka Team

Published : Mar 11, 2024, 7:05 PM IST

Updated : Mar 11, 2024, 7:57 PM IST

ಮಂಗಳೂರು: ವಯೋವೃದ್ಧ ಮಾವನಿಗೆ ಸೊಸೆಯೊಬ್ಬಳು ಅಮಾನವೀಯವಾಗಿ ಥಳಿಸಿರುವ ಘಟನೆ ನಗರದಲ್ಲಿ ನಡೆದಿದೆ. ಮಂಗಳೂರಿನ ಕುಲಶೇಖರದಲ್ಲಿ ಪದ್ಮನಾಭ ಸುವರ್ಣ ಸೊಸೆಯಿಂದಲೇ ಥಳಿತಕ್ಕೊಳಗಾದವರು. ಉಮಾಶಂಕರಿ ಎಂಬಾಕೆಯೇ ಮಾವನಿಗೆ ಮನಸೋ ಇಚ್ಛೆ ಥಳಿಸಿದ ಸೊಸೆ. ಸದ್ಯ ಇವರನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಅತ್ತಾವರದ ಕೆಇಬಿಯಲ್ಲಿ ಅಧಿಕಾರಿಯಾಗಿರುವ ಉಮಾಶಂಕರಿ, ಮಾವನಿಗೆ ವಾಕಿಂಗ್ ಸ್ಟಿಕ್ ನಿಂದ ಥಳಿಸಿದ್ದಾರೆ. ಪದ್ಮನಾಭ ಸುವರ್ಣ ಅವರು ಹೊಡೆಯದಿರುವಂತೆ ತಡೆಯಲು ಬಂದಾಗ ಅವರನ್ನು ತಳ್ಳಿದ್ದಾರೆ. ಪರಿಣಾಮ ಪದ್ಮನಾಭ ಸುವರ್ಣ ಅವರು ಬಿದ್ದು ನೋವಿನಿಂದ ಒದ್ದಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಉಮಾಶಂಕರಿ ಪತಿ ಪ್ರೀತಂ ಸುವರ್ಣ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಅವರು ವಿದೇಶದಲ್ಲಿದ್ದುಕೊಂಡೇ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಈ ಘಟನೆ ಮಾರ್ಚ್ 9 ರಂದು ನಡೆದಿದ್ದು, ಇಂದು ಬೆಳಕಿಗೆ ಬಂದಿದೆ. ಸದ್ಯ ಗಾಯಾಳು ಪದ್ಮನಾಭ ಸುವರ್ಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಪ್ರೀತಂ ಸೂಚನೆ ಅನ್ವಯ ಪದ್ಮನಾಭ ಸುವರ್ಣರ ಪುತ್ರಿ ಪ್ರಿಯಾ ಸುವರ್ಣ ದೂರು ನೀಡಿದ್ದಾರೆ. ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿ ಉಮಾಶಂಕರಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ ತಯಾರಿಕೆಯಲ್ಲಿ ಕೃತಕ ಬಣ್ಣ ಬಳಕೆಗೆ ನಿರ್ಬಂಧ

Last Updated : Mar 11, 2024, 7:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.