ETV Bharat / state

ಕಾರವಾರ ಅರ್ಬನ್ ಬ್ಯಾಂಕ್ ಅವ್ಯವಹಾರ: ಹಣ ಮರಳಿಸಲು ಗ್ರಾಹಕರ ಪಟ್ಟು - Karwar Urban Bank Scam

author img

By ETV Bharat Karnataka Team

Published : Jun 7, 2024, 10:39 PM IST

ಕಾರವಾರ ಅರ್ಬನ್ ಬ್ಯಾಂಕ್ ಅವ್ಯವಹಾರಕ್ಕೆ ಸಂಬಂಧಿಸಿದಂತೆ ದಾಖಲಾತಿ ಪರಿಶೀಲನೆಗೆ ಬಂದಿದ್ದ ಜಂಟಿ ನಿರ್ದೇಶಕರಿಗೆ ಹಣ ಮರಳಿಸುವಂತೆ ಗ್ರಾಹಕರು ಪಟ್ಟುಹಿಡಿದಿದ್ದಾರೆ.

Karwar Urban Bank
ಕಾರವಾರ ಅರ್ಬನ್ ಬ್ಯಾಂಕ್ (ETV Bharat)

ಗ್ರಾಹಕ ದೀಪಕ್ ಹನೇಹಳ್ಳ (ETV Bharat)

ಕಾರವಾರ(ಉತ್ತರ ಕನ್ನಡ): ನೂರಾರು ವರ್ಷಗಳ ಇತಿಹಾಸವಿರುವ ಕಾರವಾರದ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ಕೋಟ್ಯಂತರ ರೂಪಾಯಿ ಅವ್ಯವಹಾರ ಬಯಲಾಗಿ ಹತ್ತು ದಿನಗಳೇ ಕಳೆದಿದೆ. ಗ್ರಾಹಕರು ಪ್ರತಿನಿತ್ಯ ಪಾಸ್‌ಬುಕ್ ಹಿಡಿದು ತಮ್ಮ ಹಣಕ್ಕಾಗಿ ಬ್ಯಾಂಕ್ ಎದುರು ಜಮಾಯಿಸುತ್ತಿದ್ದು, ಇಟ್ಟ ಹಣ ಮಾತ್ರ ಕೈ ಸೇರದಂತಾಗಿದೆ. ಆದರೆ ಬೆಳಗಾವಿಯ ಸಹಕಾರಿ ಸಂಘಗಳ ಜಂಟಿ ನಿಬಂಧಕರು ದಾಖಲೆಗಳ ಪರಿಶೀಲನೆಗೆ ಬ್ಯಾಂಕ್‌ಗೆ ಆಗಮಿಸಿದ್ದ ವೇಳೆ, ಗ್ರಾಹಕರು ತಮ್ಮ ಹಣ ನೀಡುವಂತೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಪ್ರತಿಷ್ಠಿತ 112 ವರ್ಷಗಳ ಇತಿಹಾಸವಿರುವ ಕಾರವಾರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಈ ಹಿಂದೆ ಮ್ಯಾನೇಜರ್ ಆಗಿದ್ದ ಗುರುದಾಸ್ ಬಾಂದೇಕರ್ ಎಂಬವರು 54 ಕೋಟಿ ರೂಪಾಯಿ ಅವ್ಯವಹಾರ ನಡೆಸಿದ್ದು, ಆಡಿಟ್ ವೇಳೆ ಬಯಲಾಗಿತ್ತು. ಆದರೆ, ಈ ಅವ್ಯವಹಾರ ಬಯಲಾಗುವ ಮೊದಲೇ ಅಂದರೆ ಒಂದು ವರ್ಷದ ಹಿಂದೆ ಗುರುದಾಸ್ ಬಾಂದೇಕರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆದರೆ, ಕಳೆದ ಕೆಲ ದಿನಗಳ ಹಿಂದೆ ವಿಷಯ ಬೆಳಕಿಗೆ ಬರುತ್ತಿದ್ದಂತೆ ಆಡಳಿತ ಮಂಡಳಿ ಈ ಅವ್ಯವಹಾರ ನಡೆದಿರುವುದನ್ನು ಒಪ್ಪಿಕೊಂಡು ಪ್ರಕರಣವನ್ನು ದಾಖಲಿಸಲಾಗಿದೆ.

ಈ ವಿಚಾರ ತಿಳಿಯುತ್ತಲೇ ಅರ್ಬನ್ ಬ್ಯಾಂಕ್ ಗ್ರಾಹಕರು ಕಂಗಾಲಾಗಿದ್ದು, ತಮ್ಮ ಖಾತೆಗಳಲ್ಲಿದ್ದ ಹಣವನ್ನು ವಾಪಸ್ ಪಡೆಯೋದಕ್ಕೆ ಮುಂದಾಗಿದ್ದಾರೆ. ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಬ್ಯಾಂಕ್​ಗೆ ಆಗಮಿಸುತ್ತಿರುವ ಗ್ರಾಹಕರು ತಮ್ಮ ಹಣಕ್ಕಾಗಿ ಬ್ಯಾಂಕ್ ಸಿಬ್ಬಂದಿ ಬಳಿ ಗೋಳಾಡತೊಡಗಿದ್ದಾರೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಆಡಳಿತ ಮಂಡಳಿ, ಗ್ರಾಹಕರು ಹೆದರುವ ಅಗತ್ಯತೆ ಇಲ್ಲ. ಹಣವನ್ನು ಹಂತ ಹಂತವಾಗಿ ಮರಳಿಸುವುದಾಗಿ ತಿಳಿಸಿದೆ.

ಈ ನಡುವೆ ಇಂದು ಬೆಳಗಾವಿಯ ಸಹಕಾರಿ ಸಂಘಗಳ ಜಂಟಿ ನಿಬಂಧಕರು ದಾಖಲೆಗಳ ಪರಿಶೀಲನೆ ಸಂಬಂಧ ಬ್ಯಾಂಕ್‌ಗೆ ಆಗಮಿಸಿದ್ದರು. ಈ ವೇಳೆ ಗ್ರಾಹಕರು ತಮ್ಮ ಹಣವನ್ನು ಕೊಡಿಸುವಂತೆ ಜಂಟಿ ನಿರ್ದೇಶಕರಿಗೆ ಪಟ್ಟು ಹಿಡಿದು ಮನವಿ ಮಾಡಿಕೊಂಡಿದ್ದಾರೆ.

ಸಹಕಾರಿ ಸಂಘಗಳ ಜಂಟಿ ನಿಬಂಧಕ ಡಾ. ಸುರೇಶ್ ಗೌಡ (ETV Bharat)

ಸಹಕಾರಿ ಸಂಘಗಳ ಜಂಟಿ ನಿಬಂಧಕ ಡಾ. ಸುರೇಶ ಗೌಡ ಅವರು ಪ್ರತಿಕ್ರಿಯಿಸಿದ್ದು, ''ಬ್ಯಾಂಕ್​ನ ಎಲ್ಲಾ ಗ್ರಾಹಕರು ಶಾಂತರೀತಿಯಿಂದ ಇರಿ. ನಿಮ್ಮೊಂದಿಗೆ ಸರ್ಕಾರ ಇದೆ. ನಾವೆಲ್ಲ ಇದ್ದೇವೆ. ಆರ್​ಬಿಐ ಇದೆ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಆರ್​ಬಿಐನೊಂದಿಗೆ ಮಾತನಾಡುವಂತೆ ಇಲಾಖೆಯ ಮುಖ್ಯಸ್ಥರಿಗೆ ದೂರವಾಣಿಯ ಮೂಲಕ ತಿಳಿಸಿದ್ದೇನೆ'' ಎಂದು ತಿಳಿಸಿದ್ದಾರೆ.

ಸದ್ಯ ಬ್ಯಾಂಕ್‌ನಲ್ಲಿ ಹಣ ತೆಗೆಯಲು ನಿರ್ಬಂಧ ವಿಧಿಸಿದ್ದು, ತುರ್ತು ಅಗತ್ಯವಿರುವ ಗ್ರಾಹಕರಿಗೆ ಕೇವಲ 5 ಸಾವಿರದ ಚೆಕ್‌ನ್ನು ಮಾತ್ರ ನೀಡಲಾಗುತ್ತಿದೆ. ಇದು ಗ್ರಾಹಕರ ಆತಂಕಕ್ಕೆ ಕಾರಣವಾಗಿದ್ದು, ಉನ್ನತ ಮಟ್ಟದ ತನಿಖೆ ನಡೆಸಿ ತಮ್ಮ ಹಣವನ್ನು ತಮಗೆ ವಾಪಾಸ್ ಕೊಡಿಸುವಂತೆ ಗ್ರಾಹಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ತುಮಕೂರಿನಲ್ಲೂ ಮನಿ ಫ್ರಾಡ್​... ಬಡ್ಡಿ ಆಸೆ ತೋರಿಸಿ ಹಣ ದೋಚಿದ ವಂಚಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.