ETV Bharat / state

ಹಾವೇರಿಯಲ್ಲಿ ಧಾರಾಕಾರ ಮಳೆ ; ಬೆಳೆಗಳು ಜಲಾವೃತ, ಕಂಗಾಲಾದ ರೈತರು - Crop damage by Flood water

ಹಾವೇರಿ ಜಿಲ್ಲೆಯ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಪರಿಣಾಮ ಜಿಲ್ಲೆಯಲ್ಲಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನದಿ ಪಾತ್ರದ ಜಮೀನುಗಳಿಗೆ ನೀರು ಆವರಿಸಿದೆ. ಇದರಿಂದಾಗಿ ರೈತರು ಆತಂಕದಲ್ಲಿದ್ದಾರೆ.

crop damage
ಬೆಳೆ ಜಲಾವೃತ (ETV Bharat)
author img

By ETV Bharat Karnataka Team

Published : Jul 31, 2024, 4:58 PM IST

ಯುವರೈತ ಬಸವರಾಜ್ ಮಾತನಾಡಿದರು (ETV Bharat)

ಹಾವೇರಿ : ಜಿಲ್ಲೆಯಾದ್ಯಂತ ಮಂಗಳವಾರ ವರುಣನ ಆರ್ಭಟ ಕಡಿಮೆಯಾಗಿದೆ. ಹಲವು ದಿನಗಳಿಂದ ಬಿಡುವಿಲ್ಲದೆ ಸುರಿದ ಮಳೆರಾಯ ಮಂಗಳವಾರ ಸ್ವಲ್ಪ ವಿರಾಮ ನೀಡಿದ್ದು, ಜನಜೀವನ ಸಾಮಾನ್ಯ ಸ್ಥಿತಿಯತ್ತ ಮರಳುತ್ತಿದೆ. ಆದರೆ, ಹಾವೇರಿ ಜಿಲ್ಲೆಯಲ್ಲಿ ಹರಿಯುವ ತುಂಗಭದ್ರಾ, ವರದಾ, ಧರ್ಮಾ ಮತ್ತು ಕುಮದ್ವತಿ ನದಿಗಳ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಪರಿಣಾಮ ಜಿಲ್ಲೆಯಲ್ಲಿ ನದಿಗಳು ಅಪಾಯದಮಟ್ಟ ಮೀರಿ ಹರಿಯುತ್ತಿವೆ. ನದಿ ಪಾತ್ರದಲ್ಲಿನ ಜಮೀನುಗಳಿಗೆ ನೀರು ಆವರಿಸಿದ್ದು, ರೈತರು ಆತಂಕದಲ್ಲಿದ್ದಾರೆ.

ಈ ಮಧ್ಯೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಮಾರಂಬೀಡದಲ್ಲಿ ಕಳೆದ ರಾತ್ರಿ ಸುರಿದ ಮಳೆಗೆ ನೀರಲಗಿ ಹಳ್ಳ ತುಂಬಿ ಬಂದಿದೆ. ಹಳ್ಳದ ಅಕ್ಕಪಕ್ಕದ ರೈತರ ಸಾವಿರಾರು ಎಕರೆ ಜಮೀನಿಗೆ ಹಳ್ಳದ ನೀರು ನುಗ್ಗಿದೆ. ಹಳ್ಳದ ಅಕ್ಕಪಕ್ಕದಲ್ಲಿರುವ ಶೇಂಗಾ, ಸೋಯಾಬಿನ್, ಹತ್ತಿ, ಅಡಿಕೆ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳು ಜಲಾವೃತವಾಗಿವೆ. 600ಕ್ಕೂ ಅಧಿಕ ಎಕರೆಯಲ್ಲಿ ಬೆಳೆದ ಬೆಳೆಗಳಂತೂ ಹಳ್ಳದ ನೀರಿನಲ್ಲಿ ನಿಂತಿವೆ. ಉಳಿದ ಬೆಳೆಗಳಿಗೆ ನೀರು ನುಗ್ಗಿದ್ದು, ರೈತರು ಆತಂಕದಲ್ಲಿದ್ದಾರೆ.

'ಕಳೆದ 15 ದಿನಗಳಿಂದ ಮಳೆಯಾಗುತ್ತಿತ್ತು. ಆದರೆ ಸೋಮವಾರ ಸುರಿದ ಭಾರಿ ಮಳೆಗೆ ಮಾರಂಬೀಡ ಸಮೀಪದಲ್ಲಿ ಎರಡು ಕೆರೆಗಳು ಕೋಡಿ ಬಿದ್ದಿವೆ. ಇದರಿಂದ ನೀರಲಗಿ ಹಳ್ಳಕ್ಕೆ ಅಪಾರ ಪ್ರಮಾಣದ ನೀರು ಬಂದಿದ್ದು, ಬೆಳೆದ ಬೆಳೆಗಳು ಜಲಾವೃತವಾಗಿವೆ. ಕಳೆದ ವರ್ಷ ಎರಡು ಬಾರಿ ಮೂರು ಬಾರಿ ಬಿತ್ತನೆ ಮಾಡಿದ್ದೆವು. ಆದರೆ ಬರದಿಂದ ಬೆಳೆಗಳು ಬೆಳೆಯಲೇ ಇಲ್ಲ.

ಈ ವರ್ಷ ಉತ್ತಮ ಮಳೆಯಾಗಿತ್ತು, ಬೆಳೆಗಳು ಸಹ ಉತ್ತಮವಾಗಿ ಬೆಳೆದು ನಿಂತಿವೆ. 15 ದಿನದಿಂದ ಸುರಿಯುತ್ತಿರುವ ಮಳೆರಾಯ ಸ್ವಲ್ಪ ಬಿಡುವು ನೀಡಿದ್ದರೆ ಗೊಬ್ಬರ ಕ್ರಿಮಿನಾಶಕ ಸಿಂಪಡಿಸುತ್ತಿದ್ದೆವು. ಆದರೆ ಅದಕ್ಕೂ ಅವಕಾಶ ನೀಡದೆ ಸೋಮವಾರ ಸುರಿದ ಮಳೆ ನೀರಲಗಿ ಹಳ್ಳಕ್ಕೆ ಅಪಾರ ಪ್ರಮಾಣದ ನೀರು ಹರಿಸಿದ್ದು, ನಮ್ಮ ಕನಸು ಕೊಚ್ಚಿಕೊಂಡು ಹೋದಂತಾಗಿದೆ' ಎನ್ನುತ್ತಿದ್ದಾರೆ ಮಾರಂಬೀಡ ರೈತ ಬಸವರಾಜ್.

ಕಳೆದ ವರ್ಷ ತುಂಬಿದ ಬೆಳೆ ವಿಮೆ ಇನ್ನೂ ಬಂದಿಲ್ಲ. ಈ ವರ್ಷದ ಬೆಳೆವಿಮೆ ಕಟ್ಟಬೇಕಿದೆ. ಬರ ಪರಿಹಾರ ರಾಜ್ಯ ಸರ್ಕಾರ 2 ಸಾವಿರ ರೂಪಾಯಿ ಹಾಕಿದ್ದು ಬಿಟ್ಟರೆ ಮತ್ಯಾವ ಪರಿಹಾರಧನ ಬಂದಿಲ್ಲ. ಈ ವರ್ಷವಾದರೂ ಸಮೃದ್ಧ ಬೆಳೆ ಬರುತ್ತೆ, ಕೈತುಂಬ ಆದಾಯ ಬರುತ್ತೆ ಎಂದುಕೊಂಡರೆ ಅಧಿಕ ಮಳೆ ನಮ್ಮ ಕನಸನ್ನು ನುಚ್ಚು ನೂರುಮಾಡಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

'ಮಾರಂಬೀಡದಲ್ಲಿ ಕಳೆದ ರಾತ್ರಿ ಸುರಿದ ಮಳೆಗೆ ನೀರಲಗಿ ಹಳ್ಳ ತುಂಬಿ ರೈತರ ಅನೇಕ ಬೆಳೆಗಳು ಸರ್ವನಾಶವಾಗಿವೆ. ಕಬ್ಬು, ಶೇಂಗಾ, ಗೋವಿನ ಜೋಳ, ಅಡಿಕೆ, ಮೆಣಸಿನಕಾಯಿ ಸೇರಿದಂತೆ ಹಳ್ಳದ ದಂಡೆಯಲ್ಲಿರುವ ಸುಮಾರು ಆ ಕಡೆ 300 ಎಕರೆ ಹಾಗೂ ಈ ಕಡೆ 300 ಎಕರೆ ಜಮೀನುಗಳಲ್ಲಿ ಬೆಳೆ ಹಾಳಾಗಿವೆ. ತಕ್ಷಣ ಅಧಿಕಾರಿಗಳು ಮತ್ತು ನಮ್ಮ ಜನಪ್ರತಿನಿಧಿಗಳು ರೈತರ ಸಂಕಷ್ಟಗಳನ್ನು ಕೇಳುವಂತೆ ರೈತ ಸಂಘದಿಂದ ಒತ್ತಾಯ ಮಾಡುತ್ತೇವೆ' ಎಂದು ರೈತ ಮುಖಂಡ ಅಶೋಕ್​ ಸಂಶಿ ಅವರು ತಿಳಿಸಿದರು.

ಸರ್ಕಾರ ಈ ಕೂಡಲೇ ಹಳ್ಳದ ನೀರಿನಿಂದ ಹಾಳಾದ ಬೆಳೆಗಳ ಸರ್ವೆ ಮಾಡಬೇಕು. ಅಧಿಕಾರಿಗಳನ್ನು ಆದಷ್ಟು ಬೇಗ ಕಳಿಸಿ ಸಮರ್ಪಕ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಅಧಿಕ ಮಳೆಯಿಂದ ಬೆಳೆಗಳನ್ನು ರಕ್ಷಿಸುವುದೇ ದುಸ್ತರವಾದಾಗ ಏಕಾಏಕಿಯಾಗಿ ಬಂದ ನೀರಲಗಿ ಹಳ್ಳ ಸಾಕಷ್ಟು ಪ್ರಮಾಣದ ಹಾನಿ ಮಾಡಿದ್ದು, ಸರ್ಕಾರ ತಮ್ಮ ನೆರವಿಗೆ ಬರುವಂತೆ ರೈತರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ನಿರಂತರ ಮಳೆಗೆ ಹೈರಾಣಾದ ಕುಂದಗೋಳ ಭಾಗದ ರೈತರು: ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ ನಿರ್ಮಾಣ - Various diseases to the crop

ETV Bharat Logo

Copyright © 2024 Ushodaya Enterprises Pvt. Ltd., All Rights Reserved.