ETV Bharat / state

ಕಾನೂನು ಭಯವಿರಬೇಕಾದರೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರ ನಿಯಂತ್ರಣ ಅಗತ್ಯ: ಹೈಕೋರ್ಟ್ - High Court - HIGH COURT

ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಗೂಂಡಾ ಕಾಯಿದೆಯಡಿ 1 ವರ್ಷ ಜೈಲಿಗಟ್ಟಿದ್ದ ಜಿಲ್ಲಾಧಿಕಾರಿ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

High Court
ಹೈಕೋರ್ಟ್ (ETV Bharat)
author img

By ETV Bharat Karnataka Team

Published : Jul 14, 2024, 9:57 AM IST

ಬೆಂಗಳೂರು: ಸಮಾಜದಲ್ಲಿ ಕಾನೂನಿನ ಭಯ ಕಡಿಮೆಯಾಗುತ್ತಿದೆ. ಮಹಿಳೆಯರು ಮಕ್ಕಳು ಮತ್ತು ವಯೋವೃದ್ಧರು ಗೂಂಡಾಗಳ ಅಡಿಯಾಳುಗಳಂತಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ವಿವಿಧ 45ಕ್ಕೂ ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬರನ್ನು ಗೂಂಡಾ ಕಾಯಿದೆಯಡಿ ಒಂದು ವರ್ಷದ ಕಾಲ ಜೈಲು ಶಿಕ್ಷೆಗೆ ಗುರಿಪಡಿಸಿದ್ದ ಜಿಲ್ಲಾಧಿಕಾರಿಗಳು ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ತನ್ನ ಪತಿ ಶರತ್​ ಕುಮಾರ್​ ಎಂಬುವರು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿ ಕೆಜಿಎಫ್​ ಮೂಲದ ನಂದಿನಿ ಎಂಬುವರು ಸಲ್ಲಿಸಿದ್ದ ಹೆಬಿಯಾಸ್​ ಕಾರ್ಪಸ್​ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್​.ದೀಕ್ಷಿತ್​ ಮತ್ತು ನ್ಯಾಯಮೂರ್ತಿ ರಾಮಚಂದ್ರ ಹುದ್ದಾರ್​ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಸಮಾಜದಲ್ಲಿ ಕಾನೂನಿನ ಭಯ ಕಡಿಮೆಯಾಗುತ್ತಿದ್ದು, ಸಂವೇದನಾಶೀಲ ವರ್ಗಗಳು ಆತಂಕ ಮತ್ತು ಅಭದ್ರತೆಯಲ್ಲಿ ವಾಸಿಸುವಂತಾಗಿದೆ. ಇವುಗಳನ್ನು ನಿಯಂತ್ರಣ ಮಾಡುವುದಕ್ಕಾಗಿ ಸರ್ಕಾರದಿಂದ ಈ ರೀತಿಯ ಕಾರ್ಯ ಅನಿವಾರ್ಯ ಮತ್ತು ಅಗತ್ಯವಾದೆ. ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಖಚಿತಪಡಿಸಿಕೊಳ್ಳಲು ದೊಡ್ಡ ಮಟ್ಟದಲ್ಲಿ ನಿಯಂತ್ರಣ ಮಾಡುವುದನ್ನು ಒಪ್ಪಿಕೊಳ್ಳಬೇಕಾಗಿದೆ ಎಂದಿದೆ.

ನ್ಯಾಷನಲ್​ ಕ್ರೈಮ್​ ರೆಕಾರ್ಡ್ ವರದಿ ಉಲ್ಲೇಖಿಸಿರುವ ನ್ಯಾಯಪೀಠ, ಬೆಂಗಳೂರು ನಗರದ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಹಾಗೂ ಅಸ್ವಸ್ಥರನ್ನು ಪುಂಡ ಪೋಕರಿಗಳು ನಿಯಂತ್ರಣ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸಮಾಜ ಮತ್ತು ಸಾಮಾನ್ಯ ಜನರ ಜೀವ ಹಾಗೂ ಹಕ್ಕುಗಳನ್ನು ರಕ್ಷಣೆ ಮಾಡುವುದು ರಾಜ್ಯ ಸರ್ಕಾರದ ಪ್ರಾರ್ಥಮಿಕ ಕಾರ್ಯವಾಗಿದೆ ಎಂದು ತಿಳಿಸಿದೆ.

ಅಲ್ಲದೆ, ಆರೋಪಿ ವಿರುದ್ಧ ಎರಡು ಕೊಲೆ ಯತ್ನ ಪ್ರಕರಣ, ಒಂದು ರಾಬರಿ ಪ್ರಕರಣ ಮತ್ತು 32 ಕಳ್ಳತನ ಪ್ರಕರಣ ಮತ್ತೊಂದು ಸರ್ಕಾರಿ ಅಧಿಕಾರಿಯ ಮೇಲೆ ದಾಳಿ ಮಾಡಿರುವ ಪ್ರಕರಣವಾಗಿದೆ. ಜೊತೆಗೆ, 4 ಪ್ರಕರಣಗಳು ಹಿಂಸೆ ನೀಡಿರುವುದಾಗಿದೆ. ಈ ಎಲ್ಲ ಪ್ರಕರಣಗಳು 2008ರಿಂದ 2024ರ ಅವಧಿಯಲ್ಲಿ ನಡೆದಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಜೊತೆಗೆ, ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾದವರನ್ನು ಬಂಧನಕ್ಕೆ ಗುರಿಪಡಿಸಬೇಕಾಗುವುದು ಅಗತ್ಯವಿರಲಿದೆ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.

ಅರ್ಜಿದಾರರ ಪತಿ ಬಂಧನದ ಅಪರಾಧದ ಪೂರ್ವಾಪರಗಳು ಏನು ಎಂಬುದಕ್ಕೆ ಸ್ಪಷ್ಟ ಸಾಕ್ಷ್ಯಾಧಾರಗಳಿವೆ. ಎಲ್ಲ ರೀತಿಯಲ್ಲಿ ಪರಿಶೀಲಿಸಿದ ಬಳಿಕ ಅವರನ್ನು ಬಂಧಿಸುವುದು ಅನಿವಾರ್ಯ ಎಂದು ಬಂಧನದ ಆದೇಶ ನೀಡಲಾಗಿದೆ. ಸ್ಥಳೀಯ ಜ್ಞಾನ ಹೊಂದಿರುವ ಅಧಿಕಾರಿಗಳು, ಹಲವಾರು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ರೀತಿಯ ಬಂಧನ ಆದೇಶವನ್ನು ನೀಡಿರುತ್ತಾರೆ.

ಜೊತೆಗೆ, ಅರ್ಜಿದಾರರ ಪತಿಯನ್ನು ಬಂಧಿಸುವ ಆದೇಶವನ್ನು ರಾಜ್ಯ ಸರ್ಕಾರ ಪರಿಶೀಲಿಸಿದೆ. ಈ ವಿಷಯವನ್ನು ಪರಿಶೀಲಿಸಿದ ಹೈಕೋರ್ಟ್​ನ ಮೂವರು ನ್ಯಾಯಾಧೀಶರನ್ನು ಒಳಗೊಂಡ ಸಲಹಾ ಮಂಡಳಿಯು ಸಹ ಬಂಧನ ಆದೇಶ ಹಿಂಪಡೆಯಲು ಶಿಫಾರಸು ಮಾಡದಿರಲು ನಿರ್ಧರಿಸಿದೆ ಎಂದು ತಿಳಿಸಿದ ಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ ಏನು?: ಅರ್ಜಿದಾರರಾದ ನಂದಿನಿ ಅವರ ಪತಿಯನ್ನು ಗೂಂಡಾ ಕಾಯಿದೆಯಡಿ ಕೋಲಾರ ಜಿಲ್ಲಾಧಿಕಾರಿಗಳು ಒಂದು ವರ್ಷದ ಕಾಲ ನ್ಯಾಯಾಂಗ ಬಂಧನಕ್ಕೆ ವಹಿಸಿ 2024ರ ಏಪ್ರಿಲ್​ 4ರಂದು ಆದೇಶವನ್ನು ಹೊರಡಿಸಿದ್ದರು. ಈ ಆದೇಶವನ್ನು ರಾಜ್ಯ ಸರ್ಕಾರ ದೃಢಪಡಿಸಿತ್ತು. ಇದನ್ನು ಪ್ರಶ್ನಿ ಅವರು ತಮ್ಮ ಪತಿಯನ್ನು ಅಕ್ರಮ ಬಂಧನಲ್ಲಿರಿಸಲಾಗಿದೆ ಎಂದು ಆರೋಪಿಸಿ ಹೈಕೋರ್ಟ್​ನಲ್ಲಿ ಹೆಬಿಯಾಸ್​ ಕಾರ್ಪಸ್​ ಅರ್ಜಿ ಅಲ್ಲಿಸಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ಅರ್ಜಿದಾರರ ವಿರುದ್ಧ ದಾಖಲಾಗಿರುವ ಹಲವು ಪ್ರಕರಣಗಳ ಜಾಮೀನು ಮಂಜೂರಾಗಿದೆ. ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ವಿಧಿಸಿರುವ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿಲ್ಲ. ಅವರ ಬಂಧನಕ್ಕೆ ಸಕಾರಣಗಳಿಲ್ಲ. ಅಲ್ಲದೆ, ಬಂಧಿತ ಶರತ್ ಅವರ ಬಂಧನಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ಅವರ ಮಾತೃಭಾಷೆ ತಮಿಳಿಗೆ ಅನುವಾದ ಮಾಡಿಕೊಡಬೇಕಾಗಿತ್ತು'' ಎಂಬುದಾಗಿ ವಾದಿಸಿದ್ದರು.

ಸರ್ಕಾರದ ಪರ ವಾದ ಮಂಡಿಸಿದ್ದ ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎ. ಬೆಳ್ಳಿಯಪ್ಪ, ''ಆರೋಪಿ ಶರತ್​ಗೆ ತಮಿಳು, ಕನ್ನಡ ಮತ್ತು ಇಂಗ್ಲಿಷ್ ಮೂರು ಭಾಷೆಗಳು ತಿಳಿದಿವೆ. ಜೊತೆಗೆ ಸಂಪೂರ್ಣವಾಗಿ ಸ್ಪಷ್ಟವಾಗಿರುವ ಎಲ್ಲಾ ದಾಖಲೆಗಳ ಪ್ರತಿಗಳನ್ನು ಒದಗಿಸಲಾಗಿದೆ ಮತ್ತು ಅವರು ಅದನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು. ಹೀಗಾಗಿ ಮಾತೃ ಭಾಷೆಯಲ್ಲಿರಬೇಕು ಎಂಬ ಅಂಶವನ್ನು ಒಪ್ಪಲಾಗದು. ಅಲ್ಲದೆ, 2013ರ ನವೆಂಬರ್ 15ರಂದು ಕೆಜಿಎಫ್​ನ ಆಂಡರ್ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ರೌಡಿಶೀಟ್ ದಾಖಲಿಸಲಾಗಿದ್ದು, ಅದನ್ನು ಪ್ರಶ್ನಿಸಿಲ್ಲ'' ಎಂದು ಪೀಠಕ್ಕೆ ತಿಳಿಸಿದರು.

ಇದನ್ನೂ ಓದಿ: ಶಿಗ್ಗಾವಿ ಭೀಕರ ಅಪಘಾತಕ್ಕೆ ಚಾಲಕನ ಅತಿ ವೇಗವೇ ಕಾರಣ: ಎಎಸ್​​ಪಿ - Haveri Car Accident

ETV Bharat Logo

Copyright © 2024 Ushodaya Enterprises Pvt. Ltd., All Rights Reserved.