ಬೆಂಗಳೂರು : ನಿರ್ಮಾಣ ಹಂತದ ಕಟ್ಟಡ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅದರ ಮಾಲೀಕನ ಪುತ್ರನನ್ನ ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಟ್ಟಡದ ಮಾಲೀಕ ಮುನಿರಾಜು ರೆಡ್ಡಿಯ ಪುತ್ರ ಭುವನ್ ರೆಡ್ಡಿ ಎಂಬಾತನನ್ನು ಬಂಧಿಸಲಾಗಿದೆ. ಅಲ್ಲದೆ, ಕಟ್ಟಡದ 4ನೇ ಅಂತಸ್ತಿನವರೆಗೂ ನಿರ್ಮಾಣದ ಜವಾಬ್ದಾರಿ ವಹಿಸಿದ್ದ ಗುತ್ತಿಗೆದಾರ ಮುನಿಯಪ್ಪನನ್ನ ಸಹ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಟ್ಟಡದ ಮಾಲೀಕ ಮುನಿರಾಜು ರೆಡ್ಡಿ, ಗುತ್ತಿಗೆದಾರರಾದ ಮೋಹನ್ ರೆಡ್ಡಿ, ಏಳುಮಲೈ ಮತ್ತಿತರರ ವಿರುದ್ಧ ನಿರ್ಲಕ್ಷ್ಯತನದ ಆರೋಪದಡಿ ಹೆಣ್ಣೂರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮುನಿರಾಜು ರೆಡ್ಡಿಯ ಪುತ್ರ ಭುವನ್ ರೆಡ್ಡಿಯ ಹೆಸರಿನಲ್ಲಿ ಕಟ್ಟಡ ನಿರ್ಮಿಸಲಾಗುತ್ತಿತ್ತು. ಸದ್ಯ ನಾಪತ್ತೆಯಾಗಿರುವ ಮುನಿರಾಜು ರೆಡ್ಡಿಗಾಗಿ ಹುಡುಕಾಟ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಮೃತರ ಮಾಹಿತಿ: ನಿರ್ಮಾಣ ಹಂತದ ಕಟ್ಟಡ ಕುಸಿದು ಅವಷೇಷಗಳಡಿ ಸಿಲುಕಿದ್ದವರ ಪೈಕಿ ಮೃತರ ಸಂಖ್ಯೆ ಆರಕ್ಕೇರಿದೆ.
- ಹರ್ಮನ್ (26 ), ಬಿಹಾರ
- ತ್ರಿಪಾಲ್ (35) ಬಿಹಾರ
- ಮೊಹಮ್ಮದ್ ಸಾಹಿಲ್ (19) ಬಿಹಾರ
- ಸತ್ಯರಾಜು (25)
- ಶಂಕರ್
- ಮತ್ತೊಬ್ಬನ ಹೆಸರು ಗೊತ್ತಾಗಬೇಕಿದೆ
ಗಾಯಾಳುಗಳು: ಘಟನೆಯಲ್ಲಿ ಆರು ಜನ ಗಾಯಗೊಂಡಿದ್ದು, ಅವರ ಮಾಹಿತಿ ಇಲ್ಲಿದೆ.
- ಜಗದೇವಿ (45)
- ರಶೀದ್ (28)
- ನಾಗರಾಜು (25)
- ರಮೇಶ್ ಕುಮಾರ್ (28)
- ಹರ್ಮನ್ (22)
- ಅಯಾಜ್ (40)
ರಕ್ಷಿಸಲ್ಪಟ್ಟವರು :
- ಸಾಹಿಲ್ ಮೊಹಮ್ಮದ್
- ಜೀಶಾನ್ ಅಲಿ (21)
- ಶಿತಾರೆ
- ಮೊಹಮ್ಮದ್ ಅರ್ಷದ್
- ಮೊಹಮ್ಮದ್ ಎಲ್ತಾಫ್
- ಮೊಹಮ್ಮದ್ ಅಹಮಾನ್
- ಮೊಹಮ್ಮದ್ ಅರ್ಮಾನ್ (20)
ಇದನ್ನೂ ಓದಿ: ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣ: ಮೃತರ ಸಂಖ್ಯೆ ಆರಕ್ಕೇರಿಕೆ, ಬೆಳಗ್ಗೆ ಒಬ್ಬನ ರಕ್ಷಣೆ