ETV Bharat / state

ಪ್ರೀತಿಯಲ್ಲಿನ ಒಪ್ಪಿತ ದೈಹಿಕ ಸಂಬಂಧ ಅತ್ಯಾಚಾರವೆಂದು ಪರಿಗಣಿಸಲಾಗದು: ಹೈಕೋರ್ಟ್ - High Court

author img

By ETV Bharat Karnataka Team

Published : Jul 18, 2024, 10:26 PM IST

ಪ್ರೀತಿಯಲ್ಲಿರುವಾಗ ಪರಸ್ಪರ ಒಪ್ಪಿತ ದೈಹಿಕ ಸಂಬಂಧವನ್ನು ಅತ್ಯಾಚಾರವೆಂದು ಪರಿಗಣಿಸಲಾಗದು ಎಂದು ಹೈಕೋರ್ಟ್​ ಹೇಳಿದೆ.

high court
ಹೈಕೋರ್ಟ್ (ETV Bharat)

ಬೆಂಗಳೂರು: ಯುವಕ - ಯುವತಿ ಪರಸ್ಪರ ಪ್ರೀತಿಯಲ್ಲಿರುವ ಸಂದರ್ಭದಲ್ಲಿ ಇಬ್ಬರ ನಡುವಿನ ಒಪ್ಪಿತ ದೈಹಿಕ ಸಂಬಂಧವನ್ನು ಅತ್ಯಾಚಾರ ಎಂಬುದಾಗಿ ಪರಿಗಣಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅತ್ಯಾಚಾರ ಆರೋಪದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದು ಕೋರಿ ಬೆಂಗಳೂರಿನ ವ್ಯಕ್ತಿಯೋರ್ವ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.

ಅಲ್ಲದೆ, ಅರ್ಜಿದಾರನ ವಿರುದ್ಧದ ವಂಚನೆ, ಅತ್ಯಾಚಾರ ಮಾಡಿದ, ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿದ ಮತ್ತು ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ದಾಖಲಾಗಿದ್ದ ದೂರು ಮತ್ತು ಅದಕ್ಕೆ ಸಂಬಂಧಿಸಿದ ಸೆಷನ್ಸ್ ನ್ಯಾಯಾಲಯದ ವಿಚಾರಣೆಯನ್ನು ಕೋರ್ಟ್​ ರದ್ದುಪಡಿಸಿದೆ.

ಅರ್ಜಿದಾರ ಹಾಗೂ ಪ್ರಕರಣದ ದೂರುದಾರೆ ಆರು ವರ್ಷಗಳ ಕಾಲ ಪರಸ್ಪರ ಪ್ರೀತಿಯಲ್ಲಿದ್ದರು. ಈ ಸಮಯದಲ್ಲಿ ಅವರ ನಡುವೆ ಒಪ್ಪಿತ ದೈಹಿಕ ಸಂಪರ್ಕ ಬೆಳೆದಿದೆ. ಕಾಲಕ್ರಮೇಣ ಇಬ್ಬರ ನಡುವಿನ ಪ್ರೀತಿ ಕ್ಷೀಣಿಸಿದೆ. ಇದರಿಂದ ದೂರುದಾರೆ ಅರ್ಜಿದಾರರ ವಿರುದ್ಧ ಅತ್ಯಾಚಾರ ಹಾಗೂ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಪ್ರೀತಿ ಕ್ಷೀಣಿಸಿದ ಮಾತ್ರಕ್ಕೆ ಒಪ್ಪಿತ ದೈಹಿಕ ಸಂಬಂಧವನ್ನು ಅತ್ಯಾಚಾರವಾಗಿ ಪರಿಗಣಿಸಲಾಗದು ಎಂದು ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ದೂರುದಾರೆ ಮೊಬೈಲ್ ಸಿಮ್ ಕಾರ್ಡ್ ರಿಚಾರ್ಚ್ ಮಾಡಿಸಲು 2012ರಲ್ಲಿ ಆಗಾಗ್ಗೆ ಅರ್ಜಿದಾರನ ಮೊಬೈಲ್ ಅಂಗಡಿಗೆ ಭೇಟಿ ನೀಡುತ್ತಿದ್ದರು. ಈ ಸಮಯದಲ್ಲಿ ಇಬ್ಬರ ನಡುವೆ ಸ್ನೇಹ ಏರ್ಪಟ್ಟು ಬಳಿಕ ಅದು ಪ್ರೀತಿಗೆ ತಿರುಗಿತ್ತು. ಪ್ರೀತಿಯಲ್ಲಿದ್ದ ಆರು ವರ್ಷದಲ್ಲಿ ಇಬ್ಬರ ನಡುವೆ ಹಲವು ಬಾರಿ ದೈಹಿಕ ಸಂಪರ್ಕ ನಡೆದಿತ್ತು. ಆದರೆ, 2018ರ ಜುಲೈ 3ರಂದು ದೂರುದಾರೆ, ಅರ್ಜಿದಾರನ ವಿರುದ್ಧ ಬೆಂಗಳೂರಿನ ಜಗಜೀವನ್ ರಾಮ್‌ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಅರ್ಜಿದಾರ 2018ರ ಏಪ್ರಿಲ್​ 7ರಂದು ಕೊನೆಯ ಬಾರಿಗೆ ತನ್ನೊಂದಿಗೆ ಸಂಭೋಗ ನಡೆಸಿದ್ದ. ನಂತರ ಮೊಬೈಲ್ ಕರೆ ಸ್ವೀಕರಿಸದೇ ನಿರ್ಲಕ್ಷಿಸುತ್ತಿದ್ದ. ಮೊಬೈಲ್ ಶಾಪ್‌ಗೆ ಭೇಟಿ ನೀಡಿ ಪ್ರಶ್ನಿಸಿದಕ್ಕೆ ಹಲ್ಲೆ ನಡೆಸಿದ್ದ. ಅರ್ಜಿದಾರರು ಬೇರೊಂದು ಯುವತಿಯೊಂದಿಗೆ ವಿವಾಹ ನಿಶ್ಚಯವಾಗಿರುವುದು ನಂತರ ನನಗೆ ತಿಳಿಯಿತು ಎಂದು ದೂರಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಜಗಜೀವನ್ ರಾಮ್‌ನಗರ ಠಾಣಾ ಪೊಲೀಸರು ತನಿಖೆ ಪೂರ್ಣಗೊಳಿಸಿ, ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿದಾರರ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸಿದ್ದರು. 2019ರಲ್ಲಿ ವಿಚಾರಣಾ ನ್ಯಾಯಾಲಯವು ಅರ್ಜಿದಾರನ ವಿರುದ್ಧ ವಂಚನೆ, ಅತ್ಯಾಚಾರ ಮಾಡಿದ, ಮದುವೆಯಾಗುವುದಾಗಿ ಸುಳ್ಳ ಭರವಸೆ ನೀಡಿದ ಮತ್ತು ಜೀವ ಬೆದರಿಕೆ ಹಾಕಿದ ಪ್ರಕರಣದ ಮೇಲೆ ಕಾಗ್ನಿಜೆನ್ಸ್ ತೆಗೆದುಕೊಂಡಿತ್ತು. ಇದರಿಂದ ಪ್ರಕರಣ ರದ್ದು ಕೋರಿ ಅರ್ಜಿದಾರ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಮಕ್ಕಳ ಆಶ್ಲೀಲ ಚಿತ್ರಗಳ ವೀಕ್ಷಣೆ ಮಾಹಿತಿ ತಂತ್ರಜ್ಞಾನ ಕಾಯಿದೆಯಡಿ ಅಪರಾಧವಲ್ಲ: ಹೈಕೋರ್ಟ್ - High Court

ETV Bharat Logo

Copyright © 2024 Ushodaya Enterprises Pvt. Ltd., All Rights Reserved.