ETV Bharat / state

ಮೋದಿ ಬದುಕಿರುವವರೆಗೂ ಕಾಂಗ್ರೆಸ್ ಆಸೆ ಈಡೇರುವುದಿಲ್ಲ: ನರೇಂದ್ರ ಮೋದಿ ಎಚ್ಚರಿಕೆ - PM MODI ELECTION CAMPAIGN - PM MODI ELECTION CAMPAIGN

''ಮೋದಿ ಬದುಕಿರುವವರೆಗೂ ಕಾಂಗ್ರೆಸ್ ಆಸೆ ಈಡೇರುವುದಿಲ್ಲ'' ಎಂದು ಬೆಳಗಾವಿ ನಗರದ ಮಾಲಿನಿಸಿಟಿ ಮೈದಾನದಲ್ಲಿ ನಡೆದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಸಭೆಯಲ್ಲಿ ನರೇಂದ್ರ ಮೋದಿ ಹೇಳಿದರು.

Belagavi  Narendra Modi  Lok Sabha election 2024  BJP Vs Congress
ಮೋದಿ ಬದುಕಿರುವವರೆಗೂ ಕಾಂಗ್ರೆಸ್ ಆಸೆ ಈಡೇರುವುದಿಲ್ಲ: ನರೇಂದ್ರ ಮೋದಿ ಎಚ್ಚರಿಕೆ
author img

By ETV Bharat Karnataka Team

Published : Apr 28, 2024, 2:51 PM IST

ಬೆಳಗಾವಿ: ''ಕರ್ನಾಟಕದಲ್ಲಿ ಕಾಂಗ್ರೆಸ್​ನಿಂದ ತುಷ್ಟೀಕರಣ ರಾಜಕಾರಣ ನಡೆಯುತ್ತಿದೆ. ಕೋಮುಗಲಭೆ, ಬಾಂಬ್ ಸ್ಫೋಟದಂತಹ ಪ್ರಕರಣಗಳು ಹೆಚ್ಚುತ್ತಿವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾಂಗ್ರೆಸ್ ಸರ್ಕಾರ ಇರುವ ಎಲ್ಲ ಕಡೆಯೂ ಕಾನೂನು ಸಮಸ್ಯೆ ಎದುರಾಗಿದ್ದು, ರಾಜ್ಯದಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ'' ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.

ಬೆಳಗಾವಿ ನಗರದ ಮಾಲಿನಿಸಿಟಿ ಮೈದಾನದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ''ಬೆಳಗಾವಿಯಲ್ಲಿ ಮಹಿಳೆಯ ಮೇಲೆ ದಾಳಿ ನಡೆಸಲಾಯಿತು. ಚಿಕ್ಕೋಡಿಯಲ್ಲಿ ಜೈನಮುನಿ ಹತ್ಯೆಯಾಗಿದೆ. ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ ನಡೆದಿದೆ. ಬೆಂಗಳೂರಿನಲ್ಲಿ ಕೆಫೆ ಬಾಂಬ್ ಸ್ಫೋಟ ಪ್ರಕರಣ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ರಾಜ್ಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ'' ಎಂದು ಆತಂಕ ವ್ಯಕ್ತಪಡಿಸಿದರು.

ಭಾಷಣ ಆರಂಭಕ್ಕೂ ಮುನ್ನ ಬೆಳಗಾವಿ ಮತ್ತು ಚಿಕ್ಕೋಡಿ ಜನತೆಗೆ ನಮಸ್ಕಾರ ಸಲ್ಲಿಸಿ, ತಾಯಿ ಭುವನೇಶ್ವರಿ, ಸವದತ್ತಿ ಯಲ್ಲಮ್ಮದೇವಿಗೆ ವಂದಿಸಿದರು. ''ರಾಹುಲ್ ಮತ್ತು ಪ್ರಿಯಾಂಕಾ ಇಡೀ ದೇಶ ಸುತ್ತಿ ನಿಮ್ಮ ಪಿತ್ರಾರ್ಜಿತ ಆಸ್ತಿ ಸರ್ವೆ ಮಾಡಿ, ಕಬ್ಜಾ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ನೀವು ಬಚ್ಚಿಟ್ಟಿದ್ದ ಸಂಪತ್ತನ್ನು ಕೊಳ್ಳೆ ಹೊಡೆಯಲು ಕಾಂಗ್ರೆಸ್ ಸಂಚು ರೂಪಿಸಿದೆ. ನಿಮ್ಮ ಮಾಂಗಲ್ಯಕ್ಕೆ ಕೈಹಾಕಲು ಬಿಡುತ್ತಿರಾ? ನಾನು ಕಾಂಗ್ರೆಸ್ ನವರಿಗೆ ಎಚ್ಚರಿಕೆ ಕೊಡುತ್ತೇನೆ. ಈ ಆಸೆಯನ್ನು ಬಿಟ್ಟು ಬಿಡಿ. ಮೋದಿ ಬದುಕಿರುವವರೆಗೂ ಇದು ಸಾಧ್ಯವಿಲ್ಲ'' ಎಂದು ಗುಡುಗಿದರು.

ಕಾಂಗ್ರೆಸ್ ರಾಷ್ಟ್ರ ತಲೆ ತಗ್ಗಿಸುವಂತೆ ಮಾಡುತ್ತಿದೆ- ಮೋದಿ: ''ಶಿವಾಜಿ ಪ್ರಜೆಗಳಿಗಾಗಿ ಸಂಘರ್ಷ ಮಾಡಿದವರು, ಬಸವೇಶ್ವರರು ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಮಹತ್ವ ಸಾರಿದವರು. ಭಾರತ ಪ್ರಜಾಪ್ರಭುತ್ವದ ತಾಯಿಯಾಗಿದೆ. ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರು ಬಡತನದಿಂದ ಹೊರಗೆ ಬಂದಿದ್ದಾರೆ. ಹಾಗಾಗಿ ಜನರಿಗೆ ನಮ್ಮ ಮೇಲೆ ವಿಶ್ವಾಸ ಹೆಚ್ಚಾಗಿದೆ. ಬಡವರ ಕಲ್ಯಾಣಕ್ಕಾಗಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಬರಬೇಕು. ಭಾರತ ಇನ್ನಷ್ಟು ಬಲಾಢ್ಯವಾಗಲಿದೆ. ಆಗ ಭಾರತೀಯರು ಖುಷಿಯಾಗುತ್ತಾರೆ'' ಎಂದ ಪ್ರಧಾನಿ ಮೋದಿ, ''ಕೊರೊನಾ ಸಂದರ್ಭದಲ್ಲಿ ಕೊರೊನಾ ವ್ಯಾಕ್ಸಿನ್​ಗೂ ಕಾಂಗ್ರೆಸ್ ವಿರೋಧಿಸಿತ್ತು. ಇದು ಬಿಜೆಪಿ ವ್ಯಾಕ್ಸಿನ್ ಎಂದರು. ಇವಿಎಂಗೂ ವಿರೋಧಿಸಿದರು. ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನವಾಗಿದೆ. ದೇಶಕ್ಕೆ ಅವಮಾನವಾಗುವ ರೀತಿಯಲ್ಲಿ ಮಾತನ್ನಾಡುವ ಮೂಲಕ ಕಾಂಗ್ರೆಸ್ ರಾಷ್ಟ್ರ ತಲೆತಗ್ಗಿಸುವಂತೆ ಮಾಡುತ್ತಿದೆ. ಇವಿಎಂ ಬಗ್ಗೆ ಸುಳ್ಳು ಹೇಳುವ ಮೂಲಕ ಲೋಕತಂತ್ರವನ್ನು ಬರ್ಬಾದ್ ಮಾಡಲು ಮುಂದಾಗಿದೆ'' ಎಂದು ಆರೋಪಿಸಿದರು.

''ಭಾರತದ ರಾಜ ಮಹಾರಾಜರು ಜನರ ಮೇಲೆ ದೌರ್ಜನ್ಯ ಮಾಡಿದ್ದಾರೆ ಎನ್ನುತ್ತಾರೆ. ಆದರೆ, ಸುಲ್ತಾನರ ದೌರ್ಜನ್ಯದ ವಿರುದ್ಧ ಮಾತನಾಡಲು ಕಾಂಗ್ರೆಸ್​ಗೆ ಶಕ್ತಿ ಇಲ್ಲ. ಆದರೆ, ಮೈಸೂರು ಮಹಾರಾಜರ ಕೊಡುಗೆಯನ್ನು ಇಡೀ ದೇಶ ಸ್ಮರಿಸುತ್ತದೆ. ಸುಲ್ತಾನರು, ಬಾದ್​ಶಹಾ, ನವಾಬರು ಅತ್ಯಾಚಾರ, ದೌರ್ಜನ್ಯ ಮಾಡಿದ್ದು ಇವರ ಕಣ್ಣಿಗೆ ಕಾಣಿಸುತ್ತಿಲ್ಲವೇ? ನೂರಾರು ಮಂದಿರಗಳನ್ನು ಧ್ವಂಸ ಮಾಡಿದ ಔರಂಗಜೇಬನನ್ನು ಕಾಂಗ್ರೆಸ್​ನವರು ಹಾಡಿ ಹೊಗಳುತ್ತಾರೆ. ಬನಾರಸ್ ಮಹಾರಾಜರು ಇಲ್ಲದಿದ್ದರೆ, ಬನಾರಸ್ ಹಿಂದೂ ವಿಶ್ವವಿದ್ಯಾಲಯ ನಿರ್ಮಾಣ ಆಗುತ್ತಿರಲಿಲ್ಲ. ಬರೋಡಾ ರಾಜ ಅಂಬೇಡ್ಕರ್ ಅವರನ್ನು ಪ್ರತಿಭೆ ಗುರುತಿಸಿ‌ ವಿದೇಶಕ್ಕೆ ಕಳಿಸದಿದ್ದರೆ, ದೇಶದ ಸಂವಿಧಾನ ಬರೆಯಲು ಸಾಧ್ಯವಾಗುತ್ತಿರಲಿಲ್ಲ'' ಎಂದು ಮೋದಿ ಹೇಳಿದರು.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ''ಕಳೆದ ಹತ್ತು ವರ್ಷಗಳಿಂದ ಮೋದಿ ಪ್ರಧಾನಿ ಆದ ಬಳಿಕ ಒಂದು ದಿನವೂ ರಜೆ ತೆಗೆದುಕೊಳ್ಳದೇ ಕೆಲಸ ಮಾಡಿರುವ ಧೀಮಂತ ನಾಯಕ ಬೆಳಗಾವಿಗೆ ಬಂದಿರೋದು ಸಂತಸ ತಂದಿದೆ. ಕಿಸಾನ್ ಸಮ್ಮಾನ್ ಯೋಜನೆ 4 ಸಾವಿರ ರೂ. ಬಂದ್ ಮಾಡಿರುವ ಈ ಸರ್ಕಾರ ದಿವಾಳಿಯಾಗಿದೆ. ಖಜಾನೆ ಖಾಲಿಯಾಗಿದೆ. ತುಘಲಕ್ ದರ್ಬಾರ್​ ಸರ್ಕಾರ ಕಿತ್ತೊಗೆಯಬೇಕಿದೆ. ಈಗ ನಡೆದಿರುವ 14 ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಮುಂದೆ ನಡೆಯಲಿರುವ 14 ಕ್ಷೇತ್ರಗಳಲ್ಲೂ ಗೆದ್ದು, 28 ಸಂಸದರನ್ನು ದೆಹಲಿಗೆ ಕಳಿಸಿಕೊಡೋಣ'' ಎಂದು ವೇದಿಕೆ ಮೇಲೆ ಪ್ರಧಾನಿ ಮೋದಿಗೆ ಭರವಸೆ ಕೊಟ್ಟರು.

ಮೋದಿ ನೋಡಲು ಜನಸಾಗರ: ಪ್ರಧಾನಿ ಮೋದಿ ಅವರನ್ನು ಕಣ್ತುಂಬಿಕೊಳ್ಳಲು ಹಾಗೂ ಅವರ ಮಾತನ್ನು ಕೇಳಲು ಲಕ್ಷಕ್ಕೂ ಅಧಿಕ ಜನರು ಆಗಮಿಸಿದ್ದರು. ಮೋದಿ ವೇದಿಕೆಗೆ ಆಗಮಿಸುತ್ತಿದ್ದಂತೆ ಮೋದಿ, ಮೋದಿ ಜಯಘೋಷಗಳು ಮುಗಿಲು ಮುಟ್ಟಿದ್ದವು. ಮೋದಿ ಭಾವಚಿತ್ರ, ಮುಖವಾಡ, ಬಿಜೆಪಿ ಧ್ವಜಗಳನ್ನು ಹಿಡಿದು ಜನ ಸಂಭ್ರಮಿಸಿದರು.

ಪ್ರಧಾನಿ ಮೋದಿ ಅವರಿಗೆ ಎತ್ತಿನ ಚಕ್ಕಡಿ ಮಾದರಿ ಸ್ಮರಣಿಕೆ, ಮೋದಿ ಮತ್ತು ಅವರ ತಾಯಿ ಭಾವಚಿತ್ರವನ್ನು ಬಿಜೆಪಿ ನಾಯಕರು ನೀಡಿದರು. ಕಾರ್ಯಕ್ರಮದಲ್ಲಿ ಬೆಳಗಾವಿ ಅಭ್ಯರ್ಥಿ ಜಗದೀಶ ಶೆಟ್ಟರ್, ಚಿಕ್ಕೋಡಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ, ಸಂಸದೆ ಮಂಗಳಾ ಅಂಗಡಿ, ಮಾಜಿ ಸಚಿವರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಶಶಿಕಲಾ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮೇಯರ್ ಸವಿತಾ ಕಾಂಬಳೆ, ರಾಜ್ಯಸಭಾ ಮಾಜಿ ಸದಸ್ಯ ಡಾ. ಪ್ರಭಾಕರ ಕೋರೆ, ಶಾಸಕರಾದ ಅಭಯ ಪಾಟೀಲ, ದುರ್ಯೋಧನ ಐಹೊಳೆ, ನಿಖಿಲ್ ಕತ್ತಿ, ಮಹೇಶ ಟೆಂಗಿನಕಾಯಿ, ವಿಠಲ್ ಹಲಗೇಕರ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ಅನಿಲ್ ಬೆನಕೆ ಸೇರಿ ಮತ್ತಿತರರು ಇದ್ದರು.

ಇದನ್ನೂ ಓದಿ: I.N.D.I.A ಕೂಟ ಅಧಿಕಾರಕ್ಕೆ ಬಂದರೆ 'ವರ್ಷಕ್ಕೊಬ್ಬ ಪ್ರಧಾನಿ', ಕರ್ನಾಟಕದಲ್ಲಿ ಸಿಎಂ ಬದಲಿಗೆ ಸಿದ್ಧತೆ: ಮೋದಿ - Modi Slams INDIA Bloc

ETV Bharat Logo

Copyright © 2025 Ushodaya Enterprises Pvt. Ltd., All Rights Reserved.