ETV Bharat / state

ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೆಸ್ ಹೆದರಿಸುತ್ತಿದೆ: ಕುಮಾರಸ್ವಾಮಿ - H D Kumaraswamy - H D KUMARASWAMY

ಕಾಂಗ್ರೆಸ್ ಪಕ್ಷ ನೀಡಿರುವ ಚೊಂಬು ಚಿತ್ರದ ಜಾಹೀರಾತು ಹಾಗು ಬಿಜೆಪಿ ಕಾರ್ಯಕರ್ತರ ಮೇಲಿನ ಹಲ್ಲೆ ವಿಚಾರವಾಗಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು.

Former CM HD Kumaraswamy spoke to the media.
ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮಾಧ್ಯಮದವರೊಂದಿಗೆ ಮಾತನಾಡಿದರು.
author img

By ETV Bharat Karnataka Team

Published : Apr 19, 2024, 9:20 PM IST

ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮಾಧ್ಯಮದವರೊಂದಿಗೆ ಮಾತನಾಡಿದರು.

ತುಮಕೂರು: ವಿರಾಜಪೇಟೆ ಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮೂವರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದು, ಅವರನ್ನು ಮೈಸೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಾಂಗ್ರೆಸ್​ಗೆ ಈ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಮಧುಗಿರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಹೆದರಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ರಾಮನ ಹೆಸರನ್ನು ಹೇಳುವವರ ಮೇಲೆ ಹಲ್ಲೆ ಮಾಡುವುದು, ತೆಂಗಿನ ತೋಟಕ್ಕೆ ಬೆಂಕಿ ಇಡುವಂಥ ಹಳೆ ಚಾಳಿಯನ್ನು ಕಾಂಗ್ರೆಸ್ ಪ್ರಾರಂಭಿಸಿದೆ ಎಂದರು.

ಚೊಂಬು ಚಿತ್ರದ ಜಾಹೀರಾತು ಕೀಳು ಅಭಿರುಚಿ: ಜಾಹೀರಾತುಗಳಲ್ಲಿ ಕಾಂಗ್ರೆಸ್ ಪಕ್ಷವು ಕೀಳು ಅಭಿರುಚಿಯೊಂದಿಗೆ ಚೊಂಬು ಚಿತ್ರಗಳನ್ನು ತೋರಿಸುತ್ತಿದೆ. ಅವರು ರಾಜ್ಯವನ್ನು ಲೂಟಿ ಮಾಡುತ್ತಿರುವುದನ್ನೂ ಕೂಡ ತೋರಿಸಲಿ. ಕರ್ನಾಟಕದಲ್ಲಿ ರಾಜ್ಯದ ಜನರು ಕಟ್ಟಿರುವ ತೆರಿಗೆ ಹಣವನ್ನು ಕಾಂಗ್ರೆಸ್​ನವರು ಲೂಟಿ ಮಾಡುತ್ತಿದ್ದಾರೆ. ಅಂತಹ ವ್ಯಂಗ್ಯ ಚಿತ್ರವನ್ನೂ ತೋರಿಸಲಿ ಎಂದು ಹೇಳಿದರು.

ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ ಬಗ್ಗೆ ಸಾಕಷ್ಟು ನೋಡಿದ್ದೇನೆ ಎಂದು ಇದೇ ವೇಳೆ ಟೀಕಿಸಿದರು.

ಇದನ್ನೂ ಓದಿ: ನೇಹಾ ಕೊಲೆ ಪ್ರಕರಣ - ಜಿಹಾದಿಗಳ ರಾಜ್ಯವಾಗುತ್ತಿದೆ ಕರ್ನಾಟಕ: ಆರ್​.ಅಶೋಕ್ ಆರೋಪ - R Ashok

ETV Bharat Logo

Copyright © 2025 Ushodaya Enterprises Pvt. Ltd., All Rights Reserved.