ETV Bharat / state

ಬಸ್ ಕಂಡಕ್ಟರ್‌ಗಳ ನಡುವಿನ ಬೀದಿ ಕಾಳಗದ ವಿಡಿಯೋ ವೈರಲ್: ಪ್ರಕರಣ ದಾಖಲು - Conductors fight video goes viral

author img

By ETV Bharat Karnataka Team

Published : Sep 6, 2024, 4:17 PM IST

Updated : Sep 6, 2024, 5:24 PM IST

ದಕ್ಷಿಣಕನ್ನಡ ಜಿಲ್ಲೆಯ ತೊಕ್ಕೊಟ್ಟಿನ ಓವರ್ ಬ್ರಿಡ್ಜ್​​ ರೈಲ್ವೆ ಮೇಲ್ಸೇತುವೆ ಬಳಿಯ ಬಸ್ ತಂಗುದಾಣದಲ್ಲಿ ಖಾಸಗಿ ಬಸ್ ಕಂಡಕ್ಟರ್​​ಗಳ ನಡುವೆ ಬೀದಿ ಕಾಳಗ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

conductors-street-fight
ಬಸ್ ಕಂಡಕ್ಟರ್‌ಗಳ ನಡುವಿನ ಬೀದಿ ಕಾಳಗ (ETV Bharat)

ಮಂಗಳೂರು (ದಕ್ಷಿಣ ಕನ್ನಡ) : ಖಾಸಗಿ ಬಸ್ ಕಂಡಕ್ಟರ್‌ಗಳ ನಡುವೆ ತೊಕ್ಕೊಟ್ಟಿನಲ್ಲಿ ಮಾರಾಮಾರಿ, ಬೀದಿ ಕಾಳಗ ನಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಮಂಗಳೂರು ನಗರ ಪೊಲೀಸರು‌ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಲಪಾಡಿಯಿಂದ ಮಂಗಳೂರು ನಡುವೆ ಸಂಚರಿಸುವ ಪದ್ಮ ಟ್ರಾವೆಲ್ಸ್ ಖಾಸಗಿ ಬಸ್‌ ಹಾಗೂ ಮಂಜೇಶ್ವರದ ಹೊಸಂಗಡಿ ಜಂಕ್ಷನ್‌ನಿಂದ ಮಂಗಳೂರು ನಡುವೆ ಸಂಚರಿಸುವ ಅಸರ್ ಟ್ರಾವೆಲ್ಸ್ ಖಾಸಗಿ ಸರ್ವಿಸ್ ಬಸ್‌ಗಳ ಕಂಡಕ್ಟರ್‌ಗಳ ನಡುವೆ ತೊಕ್ಕೊಟ್ಟಿನ ಓವರ್‌ ಬ್ರಿಡ್ಜ್ ರೈಲ್ವೆ ಮೇಲ್ವೇತುವೆ ಬಳಿಯ ಬಸ್​ ತಂಗುದಾಣದಲ್ಲಿ ಬೀದಿಕಾಳಗ ನಡೆದಿದೆ.

ತಲಪಾಡಿಯಿಂದ ಮಂಗಳೂರಿಗೆ ಬರುತ್ತಿದ್ದ ಅಸರ್ ಟ್ರಾವೆಲ್ಸ್ ಬಸ್‌ ಅನ್ನು ಬೆನ್ನಟ್ಟಿ ಹಿಂದಿಕ್ಕಲು ಧಾವಿಸಿ ಬಂದ ಪದ್ಮ ಟ್ರಾವೆಲ್ಸ್ ಬಸ್ ಚಾಲಕ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಸ್​ ನಿಲ್ದಾಣದಲ್ಲಿ ಅಡ್ಡಲಾಗಿ ನಿಲ್ಲಿಸಿದ್ದಾರೆ. ಈ ವೇಳೆ, ಎರಡು ಬಸ್‌ಗಳ ಕಂಡಕ್ಟರ್​ಗಳ ನಡುವೆ ಮಾತಿನ ಚಕಮಕಿ ನಡೆದು, ಬೀದಿ ಕಾಳಗ ಆಗಿದೆ.

ಈ ವೇಳೆ, ಓವ‌ರ್ ಬ್ರಿಡ್ಜ್ ಆಟೋ ರಿಕ್ಷಾ ಪಾರ್ಕಿನ ರಿಕ್ಷಾ ಚಾಲಕರಾದ ಆನಂದ್ ಮತ್ತು ದೀಪಕ್ ಅವರು ಮಧ್ಯ ಪ್ರವೇಶಿಸಿ ನಿರ್ವಾಹಕರನ್ನು ಸಮಾಧಾನಗೊಳಿಸಿ ಕಳುಹಿಸಿದ್ದಾರೆ. ಕಂಡಕ್ಟರ್‌ಗಳ ಬೀದಿಕಾಳಗದ ದೃಶ್ಯವನ್ನು ಹೆದ್ದಾರಿಯಲ್ಲಿ ಚಲಿಸುತ್ತಿದ್ದ ವಾಹನ ಸವಾರರು ಮೊಬೈಲ್​ನಲ್ಲಿ ಚಿತ್ರೀಕರಿಸಿದ್ದಾರೆ. ಖಾಸಗಿ ಬಸ್ ಚಾಲಕರ ಟೈಮಿಂಗ್ಸ್ ವಿಚಾರದಲ್ಲಿ ಗಲಾಟೆ, ಅಪಘಾತಗಳಾಗುತ್ತಿರುವುದು ಸರ್ವೇ ಸಾಮಾನ್ಯ ಎಂಬಂತಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪೊಲೀಸ್ ಕಮಿಷನರ್ ಅನುಪಮ್‌ ಅಗರ್ವಾಲ್ ಪ್ರತಿಕ್ರಿಯೆ: ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್‌ ಅಗರ್ವಾಲ್ ಅವರು, 'ಸೆ.3 ರಂದು, ಪದ್ಮ ಬಸ್​ನ ಕಂಡಕ್ಟರ್ ವಿಷ್ಣು ಮತ್ತು ಅಸರ್ ಬಸ್​ನ ಕಂಡಕ್ಟರ್ ಅಜಯ್ ನಡುವೆ ಓವರ್‌ಟೇಕ್ ಮಾಡುವ ವಿಷಯದಲ್ಲಿ ಜಗಳ ನಡೆಯಿತು. ಈ ಹಿನ್ನೆಲೆ 163/2024 us 194(2) BNS ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೇವೆ' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಟಿಕೆಟ್ ವಿಚಾರಕ್ಕೆ ಫೈಟ್: ಕೈ-ಕೈ ಮಿಲಾಯಿಸಿದ ಕಾನ್ಸ್‌ಟೇಬಲ್, ಕಂಡಕ್ಟರ್ - Fight Over Bus Ticket

Last Updated : Sep 6, 2024, 5:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.