ETV Bharat / state

ಪ್ರಲ್ಹಾದ್​ ಜೋಶಿಯವರೇ ಭಯೋತ್ಪಾದಕರು: ಸಿಎಂ ಸಿದ್ದರಾಮಯ್ಯ

ಬಿಜೆಪಿಯವರು ಎಲ್ಲಾ ಸುಳ್ಳು ವಿಚಾರಗಳ ಮೇಲೆಯೇ ಪ್ರತಿಭಟನೆ ಮಾಡುವುದು. ಅವರು ಸಹ ಅನೇಕ ಕೇಸ್‌ಗಳನ್ನು ವಿತ್ ಡ್ರಾ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ (ETV Bharat)
author img

By ETV Bharat Karnataka Team

Published : Oct 13, 2024, 3:28 PM IST

ಹುಬ್ಬಳ್ಳಿ: ಕಾಂಗ್ರೆಸ್ಸಿಗರು ಭಯೋತ್ಪಾದಕರ ಬೆಂಬಲಿಗರು ಎಂದು ಹೇಳಿರುವ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿಯವರೇ ಭಯೋತ್ಪಾದಕರು. ಬಿಜೆಪಿಯವರು ಎಲ್ಲಾ ಸುಳ್ಳು ವಿಚಾರಗಳ ಮೇಲೆಯೇ ಪ್ರತಿಭಟನೆ ಮಾಡುವುದು. ಅವರು ಸಹ ಅನೇಕ ಕೇಸ್‌ಗಳನ್ನು ವಿತ್ ಡ್ರಾ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು.

ನಗರದ ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಳೇಹುಬ್ಬಳ್ಳಿ ಗಲಭೆ ಪ್ರಕರಣ ಸೇರಿದಂತೆ 42 ಪ್ರಕರಣಗಳನ್ನು ವಾಪಸ್ ಪಡೆದ ವಿಚಾರಕ್ಕೆ ಉತ್ತರಿಸಿ, ಇದಕ್ಕಾಗಿಯೇ ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಲಾಗಿತ್ತು. ಅದು ಸಲ್ಲಿಸಿದ ವರದಿ ಆಧರಿಸಿ ನಾವು 42 ಪ್ರಕರಣಗಳನ್ನು ವಾಪಸ್ ಪಡೆದುಕೊಂಡಿದ್ದೇವೆ ಎಂದರು.

ಸಿಎಂ ಸಿದ್ದರಾಮಯ್ಯ (ETV Bharat)

ಈ ಎಲ್ಲಾ ಪ್ರಕರಣಗಳು ಕೋರ್ಟ್​ಗೆ ಹೋಗುತ್ತವೆ. ಅಲ್ಲಿ ಅನುಮತಿ ಬಂದ ನಂತರ ವಾಪಸ್ ಪಡೆಯಲು ಸಾಧ್ಯ. ಇಲ್ಲದೇ ಹೋದಲ್ಲಿ ವಾಪಸ್ ಪಡೆಯಲು ಆಗುವುದಿಲ್ಲ. ಹಳೇಹುಬ್ಬಳ್ಳಿ ಗಲಭೆ ಕೇಸ್ ಜೊತೆಗೆ ಇದೇ ತರಹದ ವಿವಿಧ ಪ್ರಕರಣಗಳನ್ನು ಸಹ ವಾಪಸ್ ಪಡೆದಿದ್ದೇವೆ ಎಂದು ಸಿಎಂ ತಿಳಿಸಿದರು.

ಬಿಜೆಪಿ ರಾಜಕಾರಣ ಮಾಡುತ್ತಿದೆ: ಡಿಸಿಎಂ ಡಿ.ಕೆ. ಶಿವಕುಮಾರ್, ಬಿಜೆಪಿಯವರು ಹಳೇಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಆರ್​ಎಸ್​ಎಸ್, ಬಜರಂಗದಳ ಸೇರಿದಂತೆ ತಮ್ಮ ಪಕ್ಷದ ಬೆಂಬಲಿತ ಸಂಘಟನೆಗಳ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆದಿದ್ದರು. ಈ ಬಗ್ಗೆ ಪಟ್ಟಿ ಬೇಕಾದರೆ ಕೊಡುತ್ತೇವೆ ಎಂದರು.

ಗಲಭೆ ಪ್ರಕರಣದಲ್ಲಿ ಬಂಧಿತರಾದವರು ಭಾಗಿಯಾಗಿಲ್ಲ ಎಂದು ಸಾಬೀತಾಗಿದೆ. ಅವರ ಮೇಲೆ ರಾಜಕೀಯವಾಗಿ ಕೇಸ್ ಹಾಕಲಾಗಿದೆ ಎಂದು ಗೊತ್ತಾಗಿದೆ. ಈ ವಿಷಯವಾಗಿ ಕಾಂಗ್ರೆಸ್ ರಾಜಕೀಯ ಮಾಡುತ್ತಿಲ್ಲ. ನ್ಯಾಯ ಒದಗಿಸುವ ಕೆಲಸ ಮಾಡುತ್ತಿದೆ. ಪ್ರಕರಣವನ್ನು ತನಿಖೆ ನಡೆಸಿರುವ ಪೊಲೀಸರು ರಾಜಕೀಯ ಒತ್ತಡದಿಂದ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿರುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ: ಹುಬ್ಬಳ್ಳಿ ‌ಗಲಭೆ ಕೇಸ್​ ವಾಪಸ್​ ಖಂಡಿಸಿ ಪ್ರತಿಭಟನೆ: ಬಿಜೆಪಿ ನಾಯಕರು ಪೊಲೀಸ್​ ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.